ವಾಷಿಂಗ್ಟನ್: ಅಮೆರಿಕದ ಕನ್ನಡ ಸಂಘಟನೆಗಳ ಕೂಟ ಅಕ್ಕ (Association of Kannada Kootas of America) ಸಂಘಟನೆಯ ನೂತನ ಅಧ್ಯಕ್ಷರಾಗಿ ಮಧು ರಂಗಯ್ಯ ಅವರು ಆಯ್ಕೆಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಅವರು ಅಕ್ಕವನ್ನು ಮುನ್ನಡೆಸಲಿದ್ದಾರೆ.
ಅಕ್ಕ ಸಂಘಟನೆಯ ಬೆಳ್ಳಿ ಹಬ್ಬದ ವರ್ಷದಲ್ಲೇ ಜವಾಬ್ದಾರಿ ಹೊತ್ತ ಮಧು ರಂಗಯ್ಯ, ತಮ್ಮ ನೇತೃತ್ವದಲ್ಲಿ ಮುಂಬರುವ ಅಕ್ಕ ಸಮ್ಮೇಳನ ಹಾಗೂ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಉದ್ದೇಶ ವ್ಯಕ್ತಪಡಿಸಿದ್ದಾರೆ.
ನೂತನ ಪದಾಧಿಕಾರಿಗಳ ಪಟ್ಟಿ ಈ ರೀತಿ:
- ಅಧ್ಯಕ್ಷರು: ಮಧು ರಂಗಯ್ಯ
- ಕಾರ್ಯದರ್ಶಿ: ಡಾ. ನವೀನ್ ಕೃಷ್ಣ
- ಖಜಾಂಚಿ: ಚಂದ್ರು ಆರಾಧ್ಯ
- ಉಪಾಧ್ಯಕ್ಷರು: ರೂಪಶ್ರೀ ಮೇಲುಕೋಟೆ, ರಘು ಶಿವರಾಮ್, ವಿನೋದ್ ಕುಮಾರ್
- ಜಂಟಿ ಕಾರ್ಯದರ್ಶಿಗಳು: ಮನು ಗೋರೂರು, ಡಾ. ಲಾವಣ್ಯ
- ಸಹ ಕಾರ್ಯದರ್ಶಿಗಳು: ವತ್ಸಾ ರಾಮನಾಥನ್, ಡಾ. ಮೋಹನ್ ಕುಮಾರ್
- ಗೌರವ ಸದಸ್ಯರು: ಹಿರಿಯ ಅಕ್ಕ ಸಂಚಾಲಕರಾದ ಅಮರನಾಥ ಗೌಡ ಸೇರಿದಂತೆ 20 ಜನರ ತಂಡ
ಮೂಲತಃ ಮಂಡ್ಯದವರು ಆದ ಮಧು ರಂಗಯ್ಯ ಎಂಜಿನಿಯರಿಂಗ್ ಪದವಿಧರರು. ತಮ್ಮ ಶಿಕ್ಷಣದ ನಂತರ ಅಮೆರಿಕದಲ್ಲಿ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದರು. ಕಳೆದ ಮೂರು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿನ ಕನ್ನಡ ಸಂಘಟನೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.
“ಅಕ್ಕ ಸಂಘಟನೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಧ್ಯಕ್ಷೀಯ ಜವಾಬ್ದಾರಿ ಸಿಕ್ಕಿರುವುದು ಹೆಮ್ಮೆಯ ವಿಷಯ. ಅಮೆರಿಕದ ಕನ್ನಡಿಗರನ್ನು ಇನ್ನಷ್ಟು ಒಂದುಗೂಡಿಸಿ, ಕನ್ನಡ ನುಡಿ, ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪಸರಿಸಲು ಶ್ರಮಿಸುತ್ತೇನೆ,” ಎಂದು ಮಧು ರಂಗಯ್ಯ ಹೇಳಿದರು.