ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಅಧಿಕವಾಗಿ ಬಾಂಗ್ಲಾದೇಶ ಮೂಲದವರು ನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಆಯಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ.
ಅಕ್ರಮ ವಲಸಿಗರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಮತ್ತು ಅವರ ಡಿಪೋರ್ಟ್ ಕಾರ್ಯಾಚರಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಲು ಸೂಚನೆ ನೀಡಲಾಗಿದೆ.
ಮಹತ್ವದ ವಿಷಯವೆಂದರೆ, ಕೆಲವು ವಿದೇಶಿಗಳು ಹೊಸ ಮೋಡಸ್ ಆಪರಂಡಿ ಬಳಸಿ ಡ್ರಗ್ಸ್ ದಂಧೆಗಳಲ್ಲಿ ತೊಡಗಿದ್ದಾರೆ ಹಾಗೂ ಕೆಲವರು ಜಗಳವಾಡಿ ಕೇಸ್ ಸೃಷ್ಟಿಸಿ, ಬಳಿಕ ಜಾಮೀನು ಪಡೆದು ಇಲ್ಲಿಯೇ ಉಳಿಯುತ್ತಾರೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.












