ಬೆಂಗಳೂರು: ಫೆ. 13:ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಶಾಲೆಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲು ನೋಂದಾಯಿತ ಆಸಕ್ತಿಯುಳ್ಳ ಕಲ್ಯಾಣ ಸಂಸ್ಥೆಗಳು/ ಪ್ರಾಣಿ ಪ್ರಿಯರನ್ನು ಆಹ್ವಾನಿಸಲಾಗಿದೆ.
ಬಿಬಿಎಂಪಿಯ ಪಶುಪಾಲನ ವಿಭಾಗದ ವತಿಯಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿಯಮಗಳು 2023(ABC Rules 2023)ರ ಪ್ರಕಾರ ಈ ಕೆಳಕಂಡ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುವುದು.
- ಸಮುದಾಯ ನಾಯಿಗಳ ನಿಯಂತ್ರಣಕ್ಕೆ ನಿಯಮನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಾಗೂ ರೇಬಿಸ್ ರೋಗವನ್ನು ತಡೆಗಟ್ಟಲು ARV ಕಾರ್ಯಕ್ರಮವನ್ನು ನಿರ್ವಹಿಸಲಾಗುತ್ತಿದೆ.
- ಸಾರ್ವಜನಿಕರು ಸಮುದಾಯ ನಾಯಿಗಳ ಜೊತೆಯಲ್ಲಿ ಯಾವ ರೀತಿ ಸ್ಪಂದಿಸುವುದು ಹಾಗೂ ಅವುಗಳಿಗೆ ಆಹಾರ ನೀಡುವ ಬಗ್ಗೆ ಜಾಗೃತಿ
- ಮೂಲವಾಸ ಸ್ಥಳದಿಂದ ಸಮುದಾಯ ನಾಯಿಗಳ ಸ್ಥಳಾಂತರವನ್ನು ನಿಷೇದಿಸಿರುವ ಬಗ್ಗೆ ಹಾಗೂ ಗಾಯಗೊಂಡ ಸಮುದಾಯ ನಾಯಿಗಳ ಆರೈಕೆ ಹಾಗೂ ನಿರ್ವಹಣೆ.
ಶಾಲಾ ಮಕ್ಕಳಲ್ಲಿ ಮೇಲಿನ ವಿಷಯಗಳ ಬಗ್ಗೆ ಹಾಗೂ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಾದ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿಯೂ ವಲಯಕ್ಕೆ 100 ಕಾರ್ಯಕ್ರಮಗಳಂತೆ ಒಟ್ಟು 800 ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಮುಂದುವರಿದು, ಶಾಲೆಗಳಲ್ಲಿ IEC ಕಾರ್ಯಕ್ರಮವನ್ನು ಕೈಗೊಳ್ಳಲು THE KARNATAKA SOCIETIES REGISTRATION ACT, 1960 ರಡಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ /ಪ್ರಾಣಿ ಪ್ರಿಯರು ಇದರಲ್ಲಿ ಭಾಗವಹಿಸಲು ಪಾಲಿಕೆಯ ಪಶು ಸಂಗೋಪನೆ ವಿಭಾಗದಿಂದ ಆಸಕ್ತಿ ವ್ಯಕ್ತಪಡಿಸುವಿಕೆ(EOI)ಗೆ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ/ಪ್ರಾಣಿ ಪ್ರಿಯರು ಪಾಲಿಕೆ ಕೇಂದ್ರ ಕಛೇರಿಯ ಅನೆಕ್ಸ್-03 ಕಟ್ಟಡದಲ್ಲಿರುವ ಪಶು ಸಂಗೋಪನಾ ಕಛೇರಿಗೆ 21ನೇ ಫೆಬ್ರವರಿ 2025 ರಂದು ಸಂಜೆ 4.00 ಗಂಟೆಯೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ದಾಖಲಾತಿಗಳನ್ನು ಸಲ್ಲಿಸಲು ಪಶು ಸಂಗೋಪನೆ ವಿಭಾಗದ ಜಂಟಿ ನಿರ್ದೇಶಕರು ಕೋರಿರುತ್ತಾರೆ.
