ಬೆಂಗಳೂರು: ಇಂಡಿಯನ್ ಏರ್ ಫೋರ್ಸ್ ತನ್ನ ಇನ್ನೊಂದು ಮಹತ್ವಪೂರ್ಣ ಮೈಲಿಗಲ್ಲನ್ನು ಎತ್ತಿಹಿಡಿದು, ಜೆಲಹಳ್ಳಿ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಮಷಾಲ್ ಅಧಿಕಾರಿ ಸಂಸ್ಥೆಯನ್ನು ಉದ್ಘಾಟಿಸಿತು. ಈ ನೂತನ ಸೌಲಭ್ಯವನ್ನು ಸೇವಾ ನಿರತ ಹಾಗೂ ನಿವೃತ್ತ ಅಧಿಕಾರಿ ಸೋಹೃತ್ಯವನ್ನು ಬೆಳೆಸಲು ಹಾಗೂ ಅವರ ಸಮಗ್ರ ಕಲ್ಯಾಣವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ.
ಈ ಸಂಸ್ಥೆಯನ್ನು ಟ್ರೈನಿಂಗ್ ಕಮಾಂಡ್‌ನ ಕಮಾಂಡಿಂಗ್ ಇನ್ ಚೀಫ್ ಎಯರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಹಿರಿಯ ಅಧಿಕಾರಿಗಳು ಮತ್ತು ಬೆಂಗಳೂರು ಭಾಗದ ಗಣ್ಯ ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಅತ್ಯಾಧುನಿಕ 3D ಮೊನೊಲಿಥಿಕ್ ಪ್ರಿಕಾಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ ಒಂಬತ್ತು ತಿಂಗಳ ಕಾಲದಲ್ಲಿ ನಿರ್ಮಿಸಲಾದ ಈ ಮಷಾಲ್ ಅಧಿಕಾರಿ ಸಂಸ್ಥೆ “ವಿದ್ಯೆಯೆ ಬೆಳಕು” ಎಂಬ ಉದ್ದೇಶದೊಂದಿಗೆ ಹೆಸರಿಸಲ್ಪಟ್ಟಿದ್ದು, ವೈಮಾನಿಕ ಪಡೆ ತನ್ನ ಸಿಬ್ಬಂದಿ ಹಾಗೂ ನಿವೃತ್ತ ಅಧಿಕಾರಿಗಳಿಗೆ ವಿಶ್ವಮಟ್ಟದ ಸೌಕರ್ಯ ಒದಗಿಸಲು ಬದ್ಧವಿರುವುದನ್ನು ಸಾರುತ್ತದೆ.
ಈ ಸೌಲಭ್ಯದಲ್ಲಿ ನವೀನ ವಸತಿ ವ್ಯವಸ್ಥೆ, ಆಧುನಿಕ ಸೌಲಭ್ಯಗಳು ಮತ್ತು ಮನಸ್ಸಿಗೆ ಆನಂದವನ್ನು ನೀಡುವ ಪರಿಸರವಿದ್ದು, ‘ಮನೆಗೆ ಸಮಾನ’ ಅನುಭವವನ್ನು ಒದಗಿಸುತ್ತದೆ.