ವಿಕ್ಕಿ ಹಾರ್ಟ್ ಲ್ಲಿ ವೈಲಿನ್ ಶುರು
ಬೆಂಗಳೂರು: ಶ್ರೀ ಮುತ್ತು ಸಿನಿ ಸರ್ವೀಸಸ್ ಅಂಡ್ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿತ ‘ಫೈರ್ ಫ್ಲೈ’ ಸಿನಿಮಾದ ಮೊದಲ ಹಾಡು ‘ಇನ್ ದಿ ನೈಟ್’ ಈಗ ಬಿಡುಗಡೆಯಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ಅವರ ಮೊದಲ ನಿರ್ಮಾಣದ ಈ ಚಿತ್ರ, ಪೋಸ್ಟರ್ ಮತ್ತು ಟೀಸರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿದ್ದರೆ, ಈಗ ಈ ಹೊಸ ಮೆಲೋಡಿ ಹಾಡು ಚಿತ್ರತಂಡದ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾದ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ನೀಡಿದ್ದು, ಕಪಿಲ್ ಕಪಿಲನ್ ತಮ್ಮ ಅದ್ಭುತ ಧ್ವನಿಯಲ್ಲಿ ಹಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ಚರಣ್ ರಾಜ್ ಅವರ ಸಂಯೋಜನೆ ಈ ಹಾಡಿಗೆ ಒಂದು ವಿಶಿಷ್ಟ ಹಿರಿಮೆ ನೀಡಿದೆ. ಈ ಹಾಡಿನಲ್ಲಿ ಪ್ರಮುಖ ಪಾತ್ರಧಾರಿಗಳು ವಂಶಿ ಮತ್ತು ರಚನಾ ಹೆಜ್ಜೆ ಹಾಕಿದ್ದು, ಅದ್ಧೂರಿ ದೃಶ್ಯವಿನ್ಯಾಸದೊಂದಿಗೆ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ನಿವೇದಿತಾ ಶಿವರಾಜ್ ಕುಮಾರ್ ನಿರ್ಮಿಸಿರುವ ‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ದೇಶಕರ ಪಾತ್ರವೂ ವಹಿಸಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಳಾ ಬಿರಾದರ್, ಮೂಗು ಸುರೇಶ್ ಮುಂತಾದವರಿದ್ದಾರೆ.
ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ, ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡಿದ್ದು, ಹಾಡುಗಳ ಸಂಗೀತ ವ್ಯವಸ್ಥೆಯನ್ನು ಚರಣ್ ರಾಜ್ ಮಾಡಿದ್ದಾರೆ.
ನಟರಾಜ ರಾಜ್ಕುಮಾರ್ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ‘ಫೈರ್ ಫ್ಲೈ’ ಬಿಡುಗಡೆಗೊಳ್ಳಲಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ.