15 ನೇ ಏರೋ ಇಂಡಿಯಾದ ಉದ್ಘಾಟನಾ ದಿನವಾದ 2025ರ ಫೆಬ್ರವರಿ 10 ರಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒಗಳು) ದಂಡುಮೇಜಿನ ಸಭೆಯಲ್ಲಿ 116 ಜಾಗತಿಕ ಸಿಇಒಗಳ ಭಾಗವಹಿಸುವಿಕೆಯೊಂದಿಗೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಅನೇಕ ವಿದೇಶಿ ಮತ್ತು ಭಾರತೀಯ ಮೂಲ ಸಲಕರಣೆ ತಯಾರಕರು (ಒಇಎಂ ಗಳು) ಹೂಡಿಕೆಗಳು, ಸಹಯೋಗಗಳು ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಇತ್ಯಾದಿಗಳ ಯೋಜನೆಗಳ ಕುರಿತು ಘೋಷಣೆಗಳನ್ನು ಮಾಡಿದರು.
ಅವುಗಳಲ್ಲಿ ಇವು ಸೇರಿವೆ:
*ಅಲ್ಟ್ರಾ ಮ್ಯಾರಿಟೈಮ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಿಂದ ಅಮೆರಿಕಾದ ವಿಶೇಷಣಗಳ ಸಹ-ಉತ್ಪಾದನೆಗಾಗಿ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕುವ ಘೋಷಣೆ
*ಕೆಲವು ವಾಣಿಜ್ಯ ವಿಮಾನಗಳಿಗೆ ಶೇ.100 ದೇಶದಲ್ಲಿ ಲ್ಯಾಂಡಿಂಗ್ ಗೇರ್ ತಯಾರಿಸುವ ಯೋಜನೆಗಾಗಿ ಭಾರತ್ ಫೋರ್ಜ್‌ನಿಂದ ಘೋಷಣೆ.
*ಭಾರತದಲ್ಲಿ ಹ್ಯಾಮರ್ ಕ್ಷಿಪಣಿಯ ಸಹ-ಉತ್ಪಾದನೆಗಾಗಿ ಸಫ್ರಾನ್, ಫ್ರಾನ್ಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ ತಮ್ಮ ಪಾಲುದಾರಿಕೆ ಪ್ರಕಟ.
ಜಾನ್ ಕಾಕೆರಿಲ್ (ಬೆಲ್ಜಿಯಂ), ಏರ್‌ಬಸ್ (ಫ್ರಾನ್ಸ್), ಅಲ್ಟ್ರಾ ಮ್ಯಾರಿಟೈಮ್ (ಯುಎಸ್‌ಎ), ಜಿಎನ್‌ಟಿ (ದಕ್ಷಿಣ ಕೊರಿಯಾ), ಮಿತ್ಸುಬಿಷಿ (ಜಪಾನ್), ಸಫ್ರಾನ್ (ಫ್ರಾನ್ಸ್), ಲೈಬರ್ ಏರೋಸ್ಪೇಸ್ (ಫ್ರಾನ್ಸ್), ಎಲ್ 3 ಹ್ಯಾರಿಸ್ ಟೆಕ್ನಾಲಜೀಸ್ ಇಂಕ್. (ಯುಎಸ್‌ಎ), ಥೇಲ್ಸ್ (ಫ್ರಾನ್ಸ್), ಲಾಕ್‌ಹೀಡ್ ಮಾರ್ಟಿನ್ (ಯುಎಸ್‌ಎ), ಮಾರ್ಟಿನ್ ಬೇಕರ್ (ಯುಕೆ) ಸೇರಿದಂತೆ ಐವತ್ತೆಂಟು (58) ವಿದೇಶಿ ಒಇಎಂಗಳು ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದವು. ಭಾರತೀಯ ಒಇಎಂಗಳಲ್ಲಿ ಭಾರತ್ ಫೋರ್ಜ್ ಲಿಮಿಟೆಡ್, ಅದಾನಿ ಡಿಫೆನ್ಸ್ & ಏರೋಸ್ಪೇಸ್, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್, ಅಶೋಕ್ ಲೈಲ್ಯಾಂಡ್ ಡಿಫೆನ್ಸ್ ಮತ್ತು ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳು ಸೇರಿವೆ.
ರಕ್ಷಣಾ ಸಚಿವರು ಸಭೆಯಲ್ಲಿ, ಜಾಗತಿಕ ಒಇಎಂಗಳು ವಿಸ್ತರಿಸುತ್ತಿರುವ ಭಾರತೀಯ ರಕ್ಷಣಾ ಪೂರಕ ವ್ಯವಸ್ಥೆಯು ನೀಡುವ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಇಂದಿನ ಅಸ್ಥಿರ ಭೌಗೋಳಿಕ ರಾಜಕೀಯ ಸನ್ನಿವೇಶದಿಂದಾಗಿ ಉದ್ಭವಿಸುವ ಸವಾಲುಗಳಿಗೆ ನಿರ್ದಿಷ್ಟ ಪರಿಹಾರಗಳು ಮತ್ತು ಪ್ರತಿ ಕ್ರಮಗಳನ್ನು ಕಂಡುಕೊಳ್ಳಲು ಕರೆ ನೀಡಿದರು.
ಈ ಕಾರ್ಯಕ್ರಮವನ್ನು ವ್ಯಾಪಾರ ಕೇಂದ್ರಿತ ತಂತ್ರಜ್ಞಾನ ಅಭಿವೃದ್ಧಿ, ಜಂಟಿ ಉದ್ಯಮಗಳು, ಉತ್ಪಾದನಾ ಶ್ರೇಷ್ಠತಾ ಕೇಂದ್ರಗಳು, ಕೈಗಾರಿಕಾ ನೇತೃತ್ವದ ಸಾಮರ್ಥ್ಯ ವೃದ್ಧಿ, ಜಂಟಿ ಉದ್ಯಮಗಳು, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯ ಆಧಾರದ ಮೇಲೆ ಇ.ಡಿ.ಜಿ.ಇ ಅಂದರೆ ‘ಜಾಗತಿಕ ಒಳಗೊಳ್ಳುವಿಕೆಯ ಮೂಲಕ ರಕ್ಷಣಾ ಸಹಕಾರ ಬಲವರ್ಧನೆಗೊಳಿಸುವುದ’ ಎಂಬ ವಿಷಯದ ಮೇಲೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ, ರಕ್ಷಣಾ ಸಚಿವರು ‘ರಕ್ಷಣಾ ಪರೀಕ್ಷಾ ಪೋರ್ಟಲ್ (ಡಿಟಿಪಿ)’ ಅನ್ನು ಲೋಕಾರ್ಪಣೆ ಮಾಡಿದರು ಮತ್ತು ಗುಣಮಟ್ಟ ಭರವಸೆ ನಿರ್ದೇಶನಾಲಯದ (ಡಿಜಿಕ್ಯೂಎ) ‘ರಕ್ಷಣಾ ಪರೀಕ್ಷಾ ಸಾಮರ್ಥ್ಯಗಳು’ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ರಕ್ಷಣಾ ಪರೀಕ್ಷಾ ಮೂಲಸೌಕರ್ಯದ ಗೋಚರತೆಯನ್ನು ಸುಧಾರಿಸುವ ಮೂಲಕ ಮತ್ತು ರಕ್ಷಣಾ ಪರೀಕ್ಷೆಗಳನ್ನು ನಡೆಸುವಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಿ, ರಕ್ಷಣಾ ಪರೀಕ್ಷೆಯಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ಕೆಲಸವನ್ನು ಡಿಟಿಪಿ ಮಾಡಲಿದೆ. ಈ ಕಿರುಪುಸ್ತಕವು ರಕ್ಷಣಾ ತಯಾರಕರಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ಷಣಾ ಖರೀದಿ ಮತ್ತು ವಿತರಣಾ ಪ್ರಕ್ರಿಯೆಗಳ ಪ್ರಮುಖ ಹಂತಗಳಲ್ಲಿ ರೆಡಿ ರೆಕನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಬಲಿಷ್ಠ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಪ್ರಮುಖವಾಗಿ ಬಿಂಬಿಸುವ ಮತ್ತು ಭಾರತದ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಗಮನಾರ್ಹ ವಿಕಸನ ಮತ್ತು ಪ್ರಗತಿಯನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು, ಇದು ನಮ್ಮ ಭವಿಷ್ಯದ ಅಚಲ ಬದ್ಧತೆ ಮತ್ತು ದಿಟ್ಟ ದೂರದೃಷ್ಟಿಗೆ ಪ್ರಬಲ ಸಾಕ್ಷಿಯಾಗಿದೆ.