ಈ ಆಧುನಿಕ ಕಮಾಂಡ್ ಸೆಂಟರ್ ರಾಜ್ಯದ ಕಾರಾಗೃಹಗಳ ನಿರ್ವಹಣೆ, ಭದ್ರತೆ ಮತ್ತು ಸುಧಾರಣಾ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಾಯಕವಾಗಲಿದೆ.
ಡಾ. ಜಿ. ಪರಮೇಶ್ವರ ಅವರು, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ಈ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯ ಅಧಿಕಾರಿಗಳು ಘನ ಉಪಸ್ಥಿತರಾಗಲಿದ್ದಾರೆ.
ಘನ ಉಪಸ್ಥಿತರು:
- ತುಷಾರ್ ಗಿರಿನಾಥ್, ಭಾ.ಆ.ಸೇ. – ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು
- ಡಾ. ಎಂ.ಎ. ಸಲೀಂ, ಭಾ.ಪೊ.ಸೇ. – ಮಹಾನಿರ್ದೇಶಕರು ಮತ್ತು ಅರಕ್ಷಕ ಮಹಾನಿರೀಕ್ಷಕರು, ಪೊಲೀಸ್ ಪ್ರಧಾನ ಕಚೇರಿ, ಕರ್ನಾಟಕ ರಾಜ್ಯ
- ಕೆ.ವಿ. ಶರತ್ ಚಂದ್ರ, ಭಾ.ಪೊ.ಸೇ. – ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸೆರೆಮನೆಗಳು, ಅಪರಾಧಗಳು ಮತ್ತು ಸಹಾಯಕ ಸೇವೆಗಳು (ಪಿಸಿಎಎಸ್), ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು
- ಅಲೋಕ್ ಕುಮಾರ್, ಭಾಪೊ.ಸೇ. – ಪೊಲೀಸ್ ಮಹಾ ನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ, ಕರ್ನಾಟಕ ರಾಜ್ಯ
ದಿನಾಂಕ: ಜನವರಿ 31, 2026 (ಶನಿವಾರ)
ಸಮಯ: ಸಂಜೆ 4.00 ಗಂಟೆ
ಸ್ಥಳ: ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಪ್ರಧಾನ ಕಚೇರಿ, ಗಾಂಧಿನಗರ, ಬೆಂಗಳೂರು – 560 009
ಈ ಸೆಂಟ್ರಲ್ ಕಮಾಂಡ್ ಸೆಂಟರ್ ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ, ಭದ್ರತಾ ವ್ಯವಸ್ಥೆಯ ಸುಧಾರಣೆ ಮತ್ತು ಸಮರ್ಥ ನಿರ್ವಹಣೆಗೆ ಮಹತ್ವದ ಹೆಜ್ಜೆಯಾಗಿದೆ. ಇತ್ತೀಚಿನ ಕಾರಾಗೃಹ ಸುಧಾರಣಾ ಶಿಫಾರಸುಗಳೊಂದಿಗೆ ಹೊಂದಿಕೊಂಡು ಇದು ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಮಾಧ್ಯಮ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವರದಿ ಮಾಡಬಹುದಾಗಿದೆ.












