ಬೆಂಗಳೂರು : ಕರ್ನಾಟಕ ಇಂಟರ್‌ನ್ಯಾಶನಲ್ ಟ್ರಾವೆಲ್ ಎಕ್ಸ್‌ಪೋ ದ ಎರಡನೇ ಆವೃತ್ತಿಗೆ ನಮ್ಮ ಬೆಂಗಳೂರು ಸಜ್ಜಾಗಿದೆ. ಮೂರು ದಿನಗಳ ಈ ಎಕ್ಸ್ ಪೋ ನಗರದ ತಾಜ್ ಎಂಡ್ ಹೋಟೆಲ್ ನಲ್ಲಿ ಬುಧವಾರ ಉದ್ಘಾಟನೆಗೊಂಡಿತು. ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ಬಳಿಕ ಈ ಎಕ್ಸ್ ಪೋ ತನ್ನ ಎರಡನೇ ಆವೃತ್ತಿಯೊಂದಿಗೆ ಮರಳಿದೆ. ಪ್ರವಾಸೋದ್ಯಮ ಹಾಗು ಸಾರಿಗೆ ಕುರಿತ ಈ ಮೂರೂ ದಿನಗಳ ಸಮ್ಮೇಳನ 26 ರಿಂದ 28ರವರೆಗೆ ನಡೆಯಲಿದೆ. ಈ ಎಕ್ಸ್ ಪೋ ಕರ್ನಾಟಕವನ್ನು ವಿಶ್ವದ ಪ್ರವಾಸೋದ್ಯಮ ಕ್ಷೇತ್ರದ ಕೇಂದ್ರವಾಗಿ, ಈ ನೆಲದ ಪ್ರವಾಸಿ ತಾಣಗಳನ್ನೂ ಹೊರಜಗತ್ತಿಗೆ ಪರಿಚಯಿಸಲಿದೆ.

ಕರ್ನಾಟಕ ಇಂಟರ್‌ನ್ಯಾಶನಲ್ ಟ್ರಾವೆಲ್ ಎಕ್ಸ್‌ಪೋವನ್ನು ಗೌರವಾನ್ವಿತ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಶ್ರೀ ಸಿದ್ದರಾಮಯ್ಯ ಉದ್ಘಾಟಿಸಿದರು. ಭಾರತ ಸರ್ಕಾರದ ಮಾನ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಡಿ ಕೆ ಶಿವಕುಮಾರ್, ಗೌರವಾನ್ವಿತ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಗೌರವಾನ್ವಿತ ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರು, ಕರ್ನಾಟಕ ಸರಕಾರದ ಗೌರವಾನ್ವಿತ ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ, ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ರಿಜ್ವಾನ್ ಅಹಮದ್, ಮತ್ತು ಸಂಸದರು, ಕೆಟಿಎಸ್ ಪದಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಮತ್ತು ‘ಕರ್ನಾಟಕ ಟೂರಿಸಂ ಸೊಸೈಟಿ’ ಆಯೋಜಿಸಿರುವ ಕೆಐಟಿಇ 2025, ದೇಶ-ವಿದೇಶಗಳ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಕಾರ್ಯಕ್ರಮವಾಗಿ. ಈ ಎಕ್ಸ್ ಪೋ ಪ್ರವಾಸೋದ್ಯಮ, ಅತಿಥ್ಯ ಹಾಗು ಸಾರಿಗೆ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ವ್ಯಾಪಾರ ಹಾಗು ಉದ್ಯಮ ವಿಸ್ತರಣೆ ಅವಕಾಶಗಳನ್ನು ಉತ್ತೇಜಿಸುತ�