ಬೆಂಗಳೂರು: ಕೇಶವ ಕ್ರೀಡಾ ಮಂಡಳಿ, HMT ಕಾಲೋನಿ ಬಾಯ್ಸ್, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬೆಂಗಳೂರು ಅರ್ಬನ್ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದೊಂದಿಗೆ ಆಯೋಜಿತವಾದ ಕೆ. ರಾಮಯ್ಯ ಸ್ಮಾರಕ ರಾಜ್ಯಮಟ್ಟದ ಬೆಳ್ಳಿಯ ಕಬಡ್ಡಿ ರೋಲಿಂಗ್ ಟ್ರೋಫಿ 2025 ಪಂದ್ಯಾವಳಿಯು ಬೆಂಗಳೂರಿನ ಪದ್ಮನಾಭನಗರದ ವಾಜಿಪೇಯಿ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದು, ಇಂದು ಅದ್ದೂರಿಯಾಗಿ ತೆರೆಕಂಡಿತು.
ರಾಜ್ಯಾದ್ಯಂತದ 42 ಪುರುಷರ ಮತ್ತು 14 ಮಹಿಳೆಯರ ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯಲ್ಲಿ ಪ್ರತಿ ತಂಡದ ಆಟಗಾರರು ರೋಮಾಂಚಕ ಪ್ರದರ್ಶನ ನೀಡಿದರು. ಮಳೆಯ ಕಾರಣದಿಂದ ನಿನ್ನೆ ನಡೆಯಬೇಕಿದ್ದ ಫೈನಲ್ ಪಂದ್ಯಗಳು ರದ್ದಾಗಿ, ಇಂದು ಯಶಸ್ವಿಯಾಗಿ ನಡೆದವು.
ಪುರುಷರ ವಿಭಾಗದ ಫಲಿತಾಂಶ:
- ಪ್ರಥಮ ಸ್ಥಾನ: ಕಸ್ಟಮ್ಸ್ ಬೆಂಗಳೂರು
- ದ್ವಿತೀಯ ಸ್ಥಾನ: RWF ಬೆಂಗಳೂರು
ಮಹಿಳೆಯರ ವಿಭಾಗದ ಫಲಿತಾಂಶ:
- ಪ್ರಥಮ ಸ್ಥಾನ: ಜೈ ಮಹಾಕಾಳಿ ಚಿಂಚಲಿ, ಬೆಳಗಾವಿ
- ರನ್ನರ್ ಅಪ್: ಮೈಸೂರು ಜಿಲ್ಲಾ ತಂಡ
ವೈಯಕ್ತಿಕ ಪ್ರಶಸ್ತಿಗಳು:
ಪುರುಷರ ವಿಭಾಗ:
- ಸರಣಿ ಪುರುಷೋತ್ತಮ: ಸಾಯಿ ಪ್ರಸಾದ್
- ಸರಣಿ ಉತ್ತಮ ದಾಳಿಗಾರ: ಸುಶೀಲ್ ಸಿದ್ದಿ
- ಸರಣಿ ಉತ್ತಮ ಹಿಡಿತಗಾರ: ರಂಜಿತ್ ನಾಯ್ಕ
(ಇವರಿಗೆ ಬ್ರಾಂಡೆಡ್ ಸೈಕಲ್ ಬಹುಮಾನ)
ಮಹಿಳೆಯರ ವಿಭಾಗ:
- ಸರಣಿ ಪುರುಷೋತ್ತಮ: ಅಮೂಲ್ಯ ಪಾಟೀಲ್
- ಸರಣಿ ಉತ್ತಮ ದಾಳಿಗಾರ್ತಿ: ಯೋಗೇಶ್ವರಿ
- ಸರಣಿ ಉತ್ತಮ ಹಿಡಿತಗಾರ್ತಿ: ಚೈತನ್ಯ
(ಇವರಿಗೆ ಬ್ರಾಂಡೆಡ್ ಸೈಕಲ್ ಬಹುಮಾನ)
ಸಮಾರೋಪ ಸಮಾರಂಭದಲ್ಲಿ ಚಿತ್ರತಾರೆಯರಾದ ಹರ್ಷಿತ ಪೊಣ್ಣಚ್ಚ ಮತ್ತು ಭುವನ್ ಅತಿಥಿಗಳಾಗಿ ಆಗಮಿಸಿ, ವಿಜೇತರಿಗೆ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಶ್ರೀ ಆರ್. ಅಶೋಕ್, ಶ್ರೀ ಶರತ್ ಅಶೋಕ್, ಸಂಗಾತಿ ವೆಂಕಟೇಶ್, ಮಂಡಲ ಅಧ್ಯಕ್ಷ ಲಕ್ಷ್ಮೀಕಾಂತ್, ಶ್ರೀ ಬಿ.ಸಿ. ರಮೇಶ್, ಶ್ರೀ ಬಿ.ಸಿ. ಸುರೇಶ್, ಶ್ರೀ ಆರ್. ಶೇಖರ್ ಹಾಗೂ BBMP ಸದಸ್ಯರು ಉಪಸ್ಥಿತರಿದ್ದರು.
ಈ ಪಂದ್ಯಾವಳಿಯು ಕಬಡ್ಡಿ ಕ್ರೀಡೆಯ ಉತ್ಸಾಹವನ್ನು ಹೆಚ್ಚಿಸಿ, ರಾಜ್ಯದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿತು.