ಮಡಿಕೇರಿ: ಕೊಡಗಿನ ಹೆಮ್ಮೆ ಎಂದೆನಿಸಬೇಕಾದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧನಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದೀಗ ಜನರ ಭರವಸೆಗೂ ಆಸ್ಪತ್ರೆಗಳ ನೈತಿಕತೆಯ ಗಡಿಗೂ ಮಸಿ ಮೆತ್ತಿದೆ. ಇಲ್ಲಿ ಸದ್ಯ ನಡೆಯುತ್ತಿರುವ ಕಾರ್ಯಗಳು ಕೇಳಿದರೆ ಕೋಪ, ಬೇಸರ, ಅಸಹನ ಎಲ್ಲವೂ ಒಟ್ಟಾಗುತ್ತದೆ.
9 ತಿಂಗಳ ಗರ್ಭಿಣಿಯರು ಆಸ್ಪತ್ರೆಗೆ ಹೋದ್ರೆ ‘ಸ್ನೇಹದ ಆಹ್ವಾನ’ವಲ್ಲ, ಹಣದ ದಂಧೆಗೆ ಸ್ವಾಗತ!
ಹೌದು, ಒಬ್ಬ ಮಹಿಳೆ ಕಡ್ಡಾಯವಾಗಿ ಅಥವಾ ಸ್ಥಿತಿಗತಿಯ ಬೇಡಿಕೆಯಿಂದ ಆಸ್ಪತ್ರೆಗೆ ದಾಖಲಾದ್ಮೇಲೆ ನಿಜವಾದ ಹಣದ ಆಟ ಶುರುವಾಗುತ್ತದೆ. ಆಸ್ಪತ್ರೆ ಪರಂಪರೆಯನ್ನೇ ಕಳಂಕಿತಗೊಳಿಸುತ್ತಿರುವ ಕೆಲ ಬೋಧಕ ಸಿಬ್ಬಂದಿ ಮತ್ತು ವೈದ್ಯೆ , ಗರ್ಭಿಣಿಯರು ವಾರದಿಂದ ದಾಖಲಾಗಲಿ, ತಿಂಗಳಿಂದ ಇರಲಿ – ಯಾವಾಗ ನೋವಿನ ಪ್ರಮಾಣ ಹೆಚ್ಚಾಗತ್ತೋ, ಅಷ್ಟೇ ವ್ಯವಹಾರ ಬಾಗಿಲು ತೆರೆಯತ್ತೆ!
“ನಾರ್ಮಲ್ ಡೆಲಿವರಿ ಆಯ್ತು 2000, ಸಿ ಸೆಕ್ಷನ್ ಆಯ್ತು 5000” – ಇದು ಆಸ್ಪತ್ರೆ ರೇಟ್ ಕಾರ್ಡ್ ಅಲ್ಲ, ಬಾಕ್ಸಾಫೀಸ್ ಲೆಕ್ಕ!
ಸರ್ಕಾರದ ಆಸ್ಪತ್ರೆ, ಜನ ಸೇವೆಯ ನಾಮದಲ್ಲಿ ನಡೆಯುತ್ತಿರುವ ಈ ದುಷ್ಕರ್ಮ ಬೇಧಿಸಲಾಗಬೇಕಾದ ಅಗತ್ಯವಿದೆ. ಆಸ್ಪತ್ರೆ ಹತ್ತಿರ ಒಬ್ಬರೂ ಈ ಹಣ ಸಂಗ್ರಹಿಸುತ್ತಿಲ್ಲ. ವ್ಯವಹಾರ ನೇರವಾಗಿ ಡಾಕ್ಟರ್‌ಗಳ ಕ್ಲಿನಿಕ್‌ಗಳಲ್ಲಿ ನಿಗದಿಯಾಗುತ್ತೆ. ಅಲ್ಲಿ ಒಪ್ಪಂದ ಆಯ್ತು ಅಂದ್ರೆ, ಆಸ್ಪತ್ರೆಯಲ್ಲಿ ‘ಸ್ಪೆಷಲ್ ಕೇರ್’ ಶುರು.
ಸರ್ಕಾರದ ಹೆಸರಿನಲ್ಲಿ ನಡೆಯೋ ದುಷ್ಕರ್ಮಕ್ಕೆ ಮುಕ್ತಿ ಬೇಕು!
ಅಸಲಿಗೆ ಈ ಸಂಸ್ಥೆ ಬಡವರ ಬದುಕಿಗೆ ಬೆಳಕು ಬೀರುವ ಆಶಾಕಿರಣವಾಗಬೇಕಿತ್ತು. ಆದರೆ ಕೆಲವು ಹಣದಾಹಿ ವೈದ್ಯರಿಂದ, ಈ ಸಂಸ್ಥೆಗೂ ಕಳಂಕ, ಆರೋಗ್ಯ ಇಲಾಖೆಗೂ ಅವಮಾನ, ಮತ್ತು ಬಡವರಿಗೆ ವಂಚನೆಯ ರೂಪವಾಯ್ತು.
ಆರೋಗ್ಯ ಸಚಿವ ಡಾ. ದಿನೇಶ್ ಗುಂಡೂರಾವ್ ಇವರಿಗೆ ಈ ವಿಷಯ ತಕ್ಷಣ ಗಮನಕ್ಕೆ ಬರಬೇಕು.
ಮಡಿಕೇರಿ ಜನರ ಆಶಾ ದೀಪವಾಗಿ ಇರುವ ಆಸ್ಪತ್ರೆಯಲ್ಲಿ ಈ ದಂಧೆಗೆ ಕಡಿವಾಣ ಹಾಕೋದು ನಿಮ್ಮ ಜವಾಬ್ದಾರಿ. ಇಂತಹ ಸಿಬ್ಬಂದಿಗೆ ತಕ್ಷಣದ ಸೇವಾ ಸ್ಥಗಿತ, ತನಿಖೆ, ಮತ್ತು ಕಠಿಣ ಕ್ರಮ ಕೈಗೊಂಡಾಗ ಮಾತ್ರವೇ ಇತರರಿಗೆ ಬುದ್ದಿ ಕಲಿಸಿದಂತಾಗುತ್ತದೆ.












