ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಕೆಲವು ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಗುಣಮಟ್ಟರಹಿತ ಎಂದು ಘೋಷಿಸಿದ್ದು, ಇವುಗಳ ದಾಸ্তಾನು, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದಾರೆ.
ನಿಷೇಧಿತ ಉತ್ಪನ್ನಗಳ ಪಟ್ಟಿಯಲ್ಲಿ ಈ ಕೆಳಗಿನವು ಸೇರಿವೆ:
- ಗುಜರಾತ್‌ನ ಆಹಮದಾಬಾದ್‌ನ ಮೆ. ಪ್ಯಾಭಿಯಾನ್ ಲೈಫ್ ಸೈನ್ಸ್‌ನ ಯುನಿ-ನಿಮ್ ಆ್ಯಂಟಿ-ಬ್ಯಾಕ್ಟೀರಿಯಲ್ ಸೋಪ್ (ನೀಮ್ ಸೋಪ್)
- ಗುಜರಾತ್‌ನ ವಡೋದರಾದ ಮೆ. ವೇಗಾ ಬಯೋಟೆಕ್ ಪ್ರೈ. ಲಿಮಿಟೆಡ್‌ನ ಲೆವಿಟಿರಾಸೆಟಮ್ ಟ್ಯಾಬ್ಲೆಟ್ಸ್
- ಉತ್ತರಖಂಡ್‌ನ ಕಾಸಿಪುರ್‌ನ ಮೆ. ಅಗ್ರೋನ್ ರೆಮಿಡಿಸ್ ಪ್ರೈ. ಲಿಮಿಟೆಡ್‌ನ ಸೆಪ್ಟ್ರಿಯಾಕ್ಷೋನ್ ಮತ್ತು ಸಲ್ಬ್ಯಾಕ್ಟಮ್ ಇನ್‌ಜೆಕ್ಷನ್ (ಸನ್ಸೇಪ್-ಎಸ್‌ಬಿ)
- ಹಿಮಾಚಲ ಪ್ರದೇಶದ ಸೋಲನ್‌ನ ಮೆ. ಜೆ.ಎಂ. ಲ್ಯಾಬೋರೇಟರಿಸ್‌ನ ಅಪ್ಸೋನಾಕ್ ಎಸ್‌ಪಿ ಟ್ಯಾಬ್ಲೆಟ್ಸ್ (ಅಸಿಕ್ಲೋಫೆನಕ್, ಪ್ಯಾರಾಸಿಟಮಾಲ್ ಮತ್ತು ಸೆರಾಟಿಯೋಪೆಪ್ಟಿಡೇಸ್)
- ಹಿಮಾಚಲ ಪ್ರದೇಶದ ಸೋಲನ್‌ನ ಮೆ. ಲೀಫೋರ್ಡ್ ಹೆಲ್ತ್‌ಕೇರ್ ಲಿಮಿಟೆಡ್‌ನ ವನ್‌ಪ್ರೆಸ್-40ಎಚ್ (ಟೆಲ್ಮಿಸರ್‌ಟನ್ ಮತ್ತು ಹೈಡ್ರೋಕ್ಲೋರೋಥೈಜೈಡ್ ಟ್ಯಾಬ್ಲೆಟ್ಸ್)
- ಉತ್ತರಖಂಡ್‌ನ ಭಗ್ವಾನ್‌ಪುರ್‌ನ ಮೆ. ಶೈನ್ ಫಾರ್ಮಾದ ಕ್ಲಿನ್ಸೆಪ್-200 (ಸಿಫಿಕ್ಸಿಮ್ 200 ಎಂಜಿ ಟ್ಯಾಬ್ಲೆಟ್ಸ್)
- ಆಂಧ್ರಪ್ರದೇಶದ ನೆಲ್ಲೂರಿನ ಮೆ. ಡಾಕ್ಟರ್ಸ್ ವೆಟ್ ಫಾರ್ಮ್ ಪ್ರೈ. ಲಿಮಿಟೆಡ್‌ನ ಡಾಕ್ಸಿಸೈಕ್ಲಿನ್ ಚಿವಬಲ್ ಟ್ಯಾಬ್ಲೆಟ್ಸ್ (ಡಾಕ್ಸೆನ್-200)
- ಗುಜರಾತ್‌ನ ದಾಹೋದ್‌ನ ಮೆ. ಗಿಡ್ಯಾ ಫಾರ್ಮಾಸ್ಯುಟಿಕಲ್ಸ್‌ನ ಡಿ-50 (ಡೈಕ್ಲೋಫೆನಕ್ ಸೋಡಿಯಂ ಟ್ಯಾಬ್ಲೆಟ್ಸ್ 50 ಎಂಜಿ)
- ಹಿಮಾಚಲ ಪ್ರದೇಶದ ಸೋಲನ್‌ನ ಮೆ. ಬಯೋಜೆನಿಕ್ ಡ್ರಗ್ಸ್ ಪ್ರೈ. ಲಿಮಿಟೆಡ್‌ನ ಐಬುಪ್ರೊಫೆನ್ ಟ್ಯಾಬ್ಲೆಟ್ಸ್ 400 ಎಂಜಿ
- ಹಿಮಾಚಲ ಪ್ರದೇಶದ ಸಿರ್‌ಮೋರ್‌ನ ಮೆ. ನಾನ್ಜ್ ಮೆಡ್ ಸೈನ್ಸ್ ಫಾರ್ಮಾದ ಮುಪಿರೋಸಿನ್ ಮುಲಾಮ್ 2% (ಮುಪಿಸಿಪ್ ಮುಲಾಮ್)
- ಹರಿಯಾಣದ ಯಮುನಾನಗರದ ಮೆ. ರೆಮಿಡಿಸ್ ಪ್ರೈ. ಲಿಮಿಟೆಡ್‌ನ ಪ್ಯಾಂಟೊಪ್ರಜೋಲ್ ಇನ್‌ಜೆಕ್ಷನ್ (ಜೋಪನ್ 40)
- ಮಧ್ಯಪ್ರದೇಶದ ಇಂದೋರ್‌ನ ಮೆ. ಸೈಮರ್ ಫಾರ್ಮಾದ ಬೆಂಜಾಯಿನ್ ಟಿಂಚರ್
ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಅಪರ ಔಷಧ ನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿಗಳಾದ ಡಾ. ಉಮೇಶ್ ಎಸ್. ಅವರು ಪ್ರಕಟಣೆಯಲ್ಲಿ, ಔಷಧ ವ್ಯಾಪಾರಿಗಳು, ಸಗಟು ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳು ಈ ಉತ್ಪನ್ನಗಳನ್ನು ದಾಸ್ತಾನು ಮಾಡುವುದು, ಮಾರಾಟ ಮಾಡುವುದು ಅಥವಾ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ತಿಳಿಸಿದ್ದಾರೆ. ಈ ಔಷಧಿಗಳು ಅಥವಾ ಕಾಂತಿವರ್ಧಕಗಳ ದಾಸ್ತಾನು ಇದ್ದಲ್ಲಿ, ಸಂಬಂಧಿತ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತತ್‌ಕ್ಷಣ ತರಬೇಕು ಎಂದು ಸೂಚಿಸಿದ್ದಾರೆ.
ಸಾರ್ವಜನಿಕರು ಈ ಗುಣಮಟ್ಟರಹಿತ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಬಳಸದಂತೆ ಡಾ. ಉಮೇಶ್ ಎಸ್. ಎಚ್ಚರಿಕೆ ನೀಡಿದ್ದಾರೆ.