ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ನಗರದಲ್ಲಿ ಸಾರ್ವಜನಿಕ ಜಾಗಗಳ ರಕ್ಷಣೆಗೆ ಮುಂದಾಗಿದ್ದು, ಇಂದು ಗುಬ್ಬಲಾಳ ಗ್ರಾಮದಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಪಾರ್ಕ್ ಜಾಗವನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿದೆ.
ಉತ್ತರಹಳ್ಳಿ ಉಪವಿಭಾಗದ ಗುಬ್ಬಲಾಳ ಗ್ರಾಮದ ಸರ್ವೆ ನಂಬರ್ 01ರಲ್ಲಿರುವ ಜಯನಗರ ಕೋ-ಆಪರೇಟಿವ್ ಸೊಸೈಟಿ 1ನೇ ಹಂತದಲ್ಲಿ ಒಟ್ಟು 26,831 ಚದರ ಮೀಟರ್ ವಿಸ್ತೀರ್ಣದ ಪಾರ್ಕ್ ಜಾಗವನ್ನು ಮೀಸಲಿಡಲಾಗಿತ್ತು. ಆದರೆ, ಇದರಲ್ಲಿ ಸುಮಾರು 3,000 ಚದರ ಮೀಟರ್ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಲಾಗಿತ್ತು. ಒತ್ತುವರಿದಾರರು ಕಲ್ಲುಕುಚ್ಚು ಬೇಲಿ ಹಾಕಿ ಜಾಗವನ್ನು ಆಕ್ರಮಿಸಿಕೊಂಡಿದ್ದರು.

ಫೆಬ್ರವರಿ 10ರಂದು ಬೆಳಿಗ್ಗೆ 9 ಗಂಟೆಯಿಂದ ಪೋಲೀಸ್ ಬಂದೋಬಸ್ತ್ನೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ದಕ್ಷಿಣ ನಗರ ಪಾಲಿಕೆಯ ಅಧಿಕಾರಿಗಳು ಈ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಇದರಿಂದ ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ, ರೂ. 3 ಕೋಟಿ ಮೌಲ್ಯದ ಸರ್ಕಾರಿ ಪಾರ್ಕ್ ಜಾಗವನ್ನು ಪಾಲಿಕೆ ವಶಪಡಿಸಿಕೊಂಡಿದೆ.

ಕಾರ್ಯಾಚರಣೆಯಲ್ಲಿ ಉತ್ತರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆ.ಎನ್. ರಮೇಶ್ ಅವರು ನೇತೃತ್ವ ವಹಿಸಿದ್ದರು. ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಈ ಕ್ರಮದಿಂದ ಸ್ಥಳೀಯ ನಿವಾಸಿಗಳಿಗೆ ಪಾರ್ಕ್ ಉಪಯೋಗಿಸಲು ಅವಕಾಶ ಸಿಗಲಿದ್ದು, ಸಾರ್ವಜನಿಕ ಜಾಗಗಳ ರಕ್ಷಣೆಗೆ ಪಾಲಿಕೆಯ ನಿರ್ಧಾರವನ್ನು ಸ್ವಾಗತಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಕೆ.ಎನ್. ರಮೇಶ್
ಸಹಾಯಕ ಕಾರ್ಯಪಾಲಕ ಅಭಿಯಂತರರು
ಮೊಬೈಲ್: 9108028820












