ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ ಇದೀಗ 40ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಕಾಲಿಟ್ಟಿದೆ. 1985 ರಲ್ಲಿ ಸ್ಥಾಪಿತವಾದ ವಿದೇಶಿ ಭಾಷೆಗಳ ಇಲಾಖೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಅಗಾಧ ಪ್ರಗತಿಯನ್ನು ಸಾಧಿಸಿದೆ. 2017ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯಾದಾಗ ಈ ಇಲಾಖೆ ನೂತನವಾಗಿ ಉದಯಿಸಿದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ ಎಂದು ಮರುನಾಮಕರಣಗೊಂಡಿತು.
ಇಡೀ ದಕ್ಷಿಣ ಭಾರತದಲ್ಲಿ ಒಂದೇ ಸೂರಿನಡಿಯಲ್ಲಿ 14 ವಿದೇಶಿ ಭಾಷೆಗಳನ್ನು ಅಲ್ಪಾವಧಿ ಕೋರ್ಸ್‍ಗಳಿಂದ ಡಾಕ್ಟರೇಟ್ ಪದವಿ ಹಂತದವರೆಗೂ ಬೋಧಿಸುತ್ತಿರುವ ಏಕೈಕ ಸಂಸ್ಥೆ ಇದಾಗಿದೆ. ಫ್ರೆಂಚ್, ಜರ್ಮನ್, ಸ್ಪಾನಿಷ್, ಜಪಾನೀಸ್, ಕೊರಿಯನ್, ಚೀನೀ, ಪೋರ್ಚುಗೀಸ್, ಇಟಾಲಿಯನ್, ಫಿನ್ನಿಷ್, ರಷ್ಯನ್ ಮತ್ತು ಅರಾಬಿಕ್ ಭಾಷೆಗಳಲ್ಲಿ ಒಂದು ವರ್ಷದ ಅವಧಿಯ ಸರ್ಟಿಫಿಕೇಟ್, ಯು.ಜಿ. ಡಿಪ್ಲೊಮೊ, ಪಿ.ಜಿ ಡಿಪ್ಲೊಮೊ ಹಾಗೂ ಮೂರು ವರ್ಷಗಳ ಅವಧಿಯ ಪದವಿ ಮತ್ತು ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಜೊತೆಗೆ ಪಿಎಚ್‍ಡಿ ಅಧ್ಯಯನದ ಸೌಲಭ್ಯವನ್ನೂ ಒದಗಿಸಲಾಗಿದೆ. ಇದರ ಜೊತೆಗೆ ಒಟ್ಟು ಎಂಟು ಭಾಷೆಗಳಲ್ಲಿ ಸಂಭಾಷಣೆಯ ಕೋರ್ಸ್‍ಗಳನ್ನೂ ನಡೆಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಬಿ.ಎ. ಪದವಿ ಕೋರ್ಸ್‍ನÀಲ್ಲಿ ಫ್ರೆಂಚ್ ಭಾಷೆಯನ್ನು ಒಂದು ಪ್ರಮುಖ ಭಾಷೆಯಾಗಿ ಕಲಿಯುವ ಅವಕಾಶವನ್ನು ತೆರೆದಿಡಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯವು ಜ್ಞಾನಜ್ಯೋತಿ ಕ್ಯಾಂಪಸ್ ಹಾಗೂ ಮಲ್ಲೇಶ್ವರಂನಲ್ಲಿರುವ ಸಂಯೋಜಿತ ಮಹಿಳಾ ಕಾಲೇಜಿನಲ್ಲಿ ಈ ಕೋರ್ಸ್ ಲಭ್ಯವಿದೆ. ಮುಂದೆ ಜರ್ಮನ್, ಸ್ಪಾನಿಷ್ ಮತ್ತು ಜಪಾನೀಸ್ ಭಾಷೆಗಳನ್ನೂ ಬಿ.ಎ. ಪದವಿಯಲ್ಲಿ ಡಬಲ್ ಮೇಜರ್ ವಿಷಯಗಳಾಗಿ ಕಲಿಸುವ ಪ್ರಸ್ತಾಪವಿದೆ.
ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ಸಂಶೋಧನೆ ಮತ್ತು ಅನುವಾದ ವಿಭಾಗ ಕೆಲವು ಚಾರಿತ್ರಿಕ ದಾಖಲೆಗಳೂ ಸೇರಿದಂತೆ ಮಹತ್ವಪೂರ್ಣ ಸಾಹಿತ್ಯ ಕೃತಿಗಳನ್ನು ಕನ್ನಡದಿಂದ ಜಾಗತಿಕ ಭಾಷೆಗಳಿಗೆ ಅನುವಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿದೇಶಿ ನಿಯೋ