ಬೆಂಗಳೂರು: ಕರ್ನಾಟಕದಲ್ಲಿ ಜಾತಿಗಣತಿ ವಿಷಯವು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದ ಬಗ್ಗೆ ಸಾರ್ವಜನಿಕರಿಂದ ತೀವ್ರ ಪ್ರಶ್ನೆಗಳು ಎದುರಾಗಿವೆ. ಕಾಂತರಾಜು ಆಯೋಗದ ವರದಿಯನ್ನು ಹಿಂದೆ ಬಲವಾಗಿ ಸಮರ್ಥಿಸಿದ್ದ ಸಿಎಂ, ಈಗ ಹೈಕಮಾಂಡ್ ಸೂಚನೆಯಂತೆ 90 ದಿನಗಳಲ್ಲಿ ಮರು ಸಮೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಸರ್ಕಾರದ ಉದ್ದೇಶದ ಬಗ್ಗೆ ಅನುಮಾನಗಳು ಗಾಢವಾಗಿವೆ.
1. ಹೈಕಮಾಂಡ್‌ಗೆ ಮಾತ್ರ ಗೌರವವೇ?
ಕಾಂತರಾಜು ಆಯೋಗದ ವರದಿಯನ್ನು ಸಾರ್ವಜನಿಕರು, ಮಠಾಧೀಶರು, ಸಮುದಾಯ ಮುಖಂಡರು ಹಾಗೂ ಕಾಂಗ್ರೆಸ್‌ನ ಕೆಲ ಸಚಿವರು ಮತ್ತು ಶಾಸಕರು ಅವೈಜ್ಞಾನಿಕ ಮತ್ತು ಅಪೂರ್ಣ ಎಂದು ವಿರೋಧಿಸಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಆ ವರದಿಯನ್ನು ಸಚಿವ ಸಂಪುಟದ ಮುಂದಿಡಲು ಒತ್ತಾಯಿಸಿದ್ದರು. ಆದರೆ, ಹೈಕಮಾಂಡ್ ಸೂಚನೆ ಬಂದ ತಕ್ಷಣ ಮರು ಸಮೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ರಾಜ್ಯದ ಜನರ ಅಭಿಪ್ರಾಯಕ್ಕಿಂತ ಹೈಕಮಾಂಡ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
2. ಸಮೀಕ್ಷೆಗೆ ಯಾರನ್ನು ನಿಯೋಜಿಸಲಾಗುವುದು?
90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವುದು ಹೇಗೆ ಸಾಧ್ಯ ಎಂಬುದು ಜನರ ಆತಂಕವಾಗಿದೆ. ಶಾಲೆಗಳು ಈಗಾಗಲೇ ಆರಂಭವಾಗಿರುವಾಗ, ಶಿಕ್ಷಕರನ್ನು ಸಮೀಕ್ಷೆಗೆ ಬಳಸಿದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಭಾರೀ ತೊಂದರೆಯಾಗಲಿದೆ. ಇದು ಮಕ್ಕಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾದರೆ, ಸರ್ಕಾರ ಈ ಕಾರ್ಯಕ್ಕೆ ಯಾರನ್ನು ನಿಯೋಜಿಸಲಿದೆ?
3. ಆನ್‌ಲೈನ್ ಸಮೀಕ್ಷೆ: ವಿವೇಕಹೀನ ಕ್ರಮವೇ?
ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಯೋಜನೆಯ ಬಗ್ಗೆಯೂ ಆಕ್ಷಗಕ್ಷೇಃ ಎದ್ದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕರು ಇನ್ನೂ ಆನ್‌ಲೈನ್ ವ್ಯವಸ್ಥೆಯಿಂದ ದೂರವಿರುವಾಗ, ಈ ರೀತಿಯ ಸಮೀಕ್ಷೆಯಿಂದ ನಿಖರ ಮಾಹಿತಿ ಸಂಗ್ರಹ ಸಾಧ್ಯವೇ? ತಪ್ಪು ದಾಖಲಾತಿಗಳನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ?
4. 167 ಕೋಟಿ ರೂ. ದುಂದುವೆಚ್ಚಕ್ಕೆ ಯಾರು ಜವಾಬ್ದಾರ?
ಕಾಂತರಾಜು-ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಗಾಗಿ ತೆರಿಗೆದಾರರ 167 ಕೋಟಿ ರೂ. ಖರ್ಚಾಗಿದೆ. ಈ ವರದಿಯನ್ನು ಈಗ ಅಗತಿಯದಿಂದ ಕಾರಿಗಿಂಗಿಗ. ಈ ದುಂದುವೆಚ್ಚಕ್ಕೆ ಯಾರು ಹೊಣೆಗಾರರು? ಈ ಹಣವನ್ನು ವಸೂಲಿ ಕ ಮಾಡುವ ಯೋಜನೆ ಇದೆಯೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟಗೊಳಿಸಬೇಕಿದೆ.
5. ಐಪಿಎಲ್ ದುರಂತ ಮರೆಮಾಚಲು ತಂತ್ರವೇ?
ಇತ್ತೀಚಿನ ಐಪಿಎಲ್ ವಿಜಯೋತ್ಸವ ದುರಂತದ ಗಮನವನ್ನು ಬೇರೆಡೆಗೆಳೆಯಲು ಈ ಜಾತಿಗಣತಿ ವಿವಾದವನ್ನು ಉದ್ದೇಶಪೂರ್ವಕವಾಗಿ ಎತ್ತಿಹಿಡಿಯಲಾಗಿದೆಯೇ ಎಂವ ಅನಂಆನವೂ ಗಾಢವಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಸಂಶಯಗಳಿವೆ.
ಸಾರ್ವಜನಿಕರ ಸಲಹೆ
ಸರ್ಕಾರ ಜಾತಿಗಣತಿಯ ಬಗ್ಗೆ ಪ್ರಾಮಾಣಿಕವಾಗಿರಲು, ಮೊದಲು ಸಾರ್ವಜನಿಕ ಚರ್ಚೆ ಆಯೋಜಿಸಿ, ಸರ್ವಪಕ್ಷ ಸೇರಿಗೆ ಕರೆದೆ ಎಲ್ಲವರ ಅಭಿಪ್ರಾಯಾಲ ಕಾಲಿಬೇಕು. ಶೈಕ್ಷಣಿಕ ವರ್ಷ ಮುಗಿಯುವವರೆಗೆ ಕಾಯ್ದು, ಶಿಕ್ಷಕರನ್ನು ಬಳಸಿಕೊಂಡು ಸಮಗ್ರ ಸಮೀಕ್ಷೆ ನಡೆಸಬೇಕು ಎಂಬುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯವೆಂದು ಜನರು ಒತ್ತಾಯಿಸಿದ್ದಾರೆ.
ಈ ವಿಷಯದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದಿಂದ ಸ್ಪಷ್ಟ ಉತ್ತರಕ್ಕಾಗಿ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.