ಕಿರೀಟಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಅವರ ಚೊಚ್ಚಲ ಚಿತ್ರ ‘ಜೂನಿಯರ್’ ಟೀಸರ್ ಈಗಾಗಲೇ ಭಾರೀ ಸದ್ದು ಮಾಡಿದ್ದು, ಇದೀಗ ಚಿತ್ರದ ಎರಡನೇ ಹಾಡು ‘ವೈರಲ್ ವಯ್ಯರಿ’ ಇಂದು ಆದಿತ್ಯ ಮ್ಯೂಸಿಕ್ ಕನ್ನಡದಲ್ಲಿ ಅನಾವರಣಗೊಂಡಿದೆ. ಈ ಡ್ಯಾನ್ಸಿಂಗ್ ನಂಬರ್‌ಗೆ ದಕ್ಷಿಣ ಚಿತ್ರರಂಗದ ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದು, ಕಿರೀಟಿ ಮತ್ತು ಶ್ರೀಲೀಲಾ ಅವರ ಎನರ್ಜಿಟಿಕ್ ಡ್ಯಾನ್ಸ್ ಸಿನಿಮಾಪ್ರಿಯರನ್ನು ಫುಲ್ ಕಿಕ್‌ನಲ್ಲಿ ಇರಿಸಿದೆ.
‘ವೈರಲ್ ವಯ್ಯರಿ’ ಹಾಡಿಗೆ ಪವನ್ ಭಟ್ ಸಾಹಿತ್ಯ ರಚಿಸಿದ್ದು, ಹರಿಪ್ರಿಯಾ ಮತ್ತು ದೀಪಕ್ ಬ್ಲೂ ಧ್ವನಿಯಾಗಿ ಕಂಠ ಒಡ್ಡಿದ್ದಾರೆ. ದೇವಿಶ್ರೀ ಅವರ ಮ್ಯೂಸಿಕ್‌ಗೆ ಕಿರೀಟಿ ಮತ್ತು ಶ್ರೀಲೀಲಾ ಬೊಂಬಾಟ್ ಆಗಿ ಕುಣಿದಿದ್ದು, ಇವರಿಬ್ಬರ ಕೆಮಿಸ್ಟ್ರಿ ಮತ್ತು ಎನರ್ಜಿ ಹೈಲೆವೆಲ್‌ನಲ್ಲಿದೆ.
ತಾರಾಬಳಗದ ಜೊತೆ ಭರ್ಜರಿ ತಯಾರಿ
ಈ ಬಹುನಿರೀಕ್ಷಿತ ಚಿತ್ರದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಮಾಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಕ್ಯಾಮರಾ ಚಾಲನೆ ಮಾಡಿದ ಕೆ.ಕೆ.ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಮತ್ತಷ್ಟು ಮೆ ರಗು ತಂದಿದೆ. ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ “‘ಜೂನಿಯರ್’ನ ಸಾಹಸ ದೃಶ್ಯಗಳಿಗೆ ಜೀವ ತುಂಬಿದ್ದಾರೆ.
ಜುಲೈ 18ಕ್ಕೆ ಗ್ರ್ಯಾಂಡ್ ರಿಲೀಸ್
ಚಿತ್ರದ ಶು ಭಾರಂಭದ ವೇಳೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ತಂಡಕ್ಕೆ ಶುಭಾಶಯ ಕೋರಿದ್ದರು. ‘ಜೂನಿಯರ್’ ಚಿತ್ರವು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಜುಲೈ 18ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ಈ ಚಿತ್ರದ ಡ್ಯಾನ್ಸ್, ಆಕ್ಷನ್ ಮತ್ತು ಸ್ಟಾರ್ ಕಾಸ್ಟ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ‘ಜೂನಿಯರ್’ ಸಿನಿಮಾಪ್ರಿಯರಿಗೆ ಒಂದು ದೊಡ್ಡ ವಿಷುಯಲ್ ಟ್ರೀಟ್ ಆಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!