ದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಮಾತನಾಡಿ, ಬಿಜೆಪಿಯವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. “ಅವರು ರಾಜಕೀಯ ಮಾಡುತ್ತಾರೆ ಮಾಡಲಿ. ಅವರ ಪ್ರತಿಭಟನೆಗೆ ಶುಭಕೋರೋಣ. ಆದರೆ, ದೇಶದ ಮಟ್ಟದಲ್ಲಿ ಟೋಲ್, ಡೀಸೆಲ್, ಪೆಟ್ರೋಲ್ ದರಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಯಾಕೆ ಪ್ರೋಟೆಸ್ಟ್ ಮಾಡುತ್ತಿಲ್ಲ?” ಎಂದು ಪ್ರಶ್ನಿಸಿದರು.
ಹಾಲು ದರ ಏರಿಕೆಗೆ ರೈತರ ಅನುಕೂಲ
ಹಾಲು ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿ.ಕೆ. ಶಿವಕುಮಾರ್, “ಈ ದರ ಏರಿಕೆಯಿಂದ ರೈತರಿಗೆ ಲಾಭವಾಗುತ್ತದೆ. ದರ ಹೆಚ್ಚಳ ಮಾಡದೆ ಇದ್ದರೆ ರೈತರು ಹೊಡೆಯುತ್ತಾರೆ. ಆದ್ದರಿಂದ, ಇದು ರೈತರ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರ” ಎಂದರು.
ಸಿದ್ದರಾಮಯ್ಯ-ರಾಹುಲ್ ಭೇಟಿ ಕುರಿತು ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ ಅವರ ರಾಹುಲ್ ಗಾಂಧಿ ಭೇಟಿಯ ಕುರಿತು ಮಾತನಾಡಿದ ಅವರು, “ದೆಹಲಿಗೆ ಬಂದಾಗ ಹೈಕಮಾಂಡ್ ನಾಯಕರ ಭೇಟಿ ಸಹಜ. ನಾನು ಸಹ ದೆಹಲಿಗೆ ಬಂದಾಗ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ” ಎಂದು ಹೇಳಿದ್ದಾರೆ.
ಪರಿಷತ್ ನಾಮನಿರ್ದೇಶನದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲವೆಂದು ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್, ಇದೊಂದು ವಿಶೇಷ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇಲ್ಲವೆಂದರು.
ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆಗಳು ರಾಜಕೀಯವಾಗಿ ಗಮನಸೆಳೆಯುತ್ತಿದೆ.