Saturday, March 21, 2026
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News Government

ಧೈರ್ಯವಿದ್ದವನು ಒಬ್ಬನೇ ಬಹುಮತ ಸಾಧಿಸಬಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕ ಹೇಳಿಕೆ

PREM SHEKHAR PV by PREM SHEKHAR PV
2 months ago
Reading Time: 1 min read
A A
18
SHARES
50
VIEWS

ಬೆಂಗಳೂರು: ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಎಂದು ನಂಬಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಧೈರ್ಯವಿದ್ದವನು ಒಬ್ಬನೇ ಬಹುಮತ ಸಾಧಿಸಬಲ್ಲ” ಎಂಬ ಮಾತನ್ನು ಹೇಳಿ ಗಮನ ಸೆಳೆದಿದ್ದಾರೆ. ದೃಢ ನಿಲುವು ಮತ್ತು ಸಂಕಲ್ಪ ಬಲ ಇದ್ದರೆ ಒಬ್ಬನೇ ಸಾಕು, 140 ಜನರ ಬಲ ಸಂಪಾದಿಸಬಹುದು ಎಂದು ಅವರು ತಿಳಿಸಿದರು. 2028ರ ವಿಧಾನಸಭಾ ಚುನಾವಣೆಯಲ್ಲಿ ಏನಾಗುತ್ತದೆ ಎಂದು ನೋಡೋಣ ಎಂದೂ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆಗೆ ಉತ್ತರ ನೀಡುತ್ತಿದ್ದಾಗ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿದರು. ಕಳೆದ ಒಂದು ತಿಂಗಳಿನಿಂದ ಡಿ.ಕೆ. ಶಿವಕುಮಾರ್ ಅವರ ಮಾತುಗಳು ಮತ್ತು ಟ್ವೀಟ್‌ಗಳು ನೂರು ಅರ್ಥ ಬರುವಂತಿವೆ ಎಂದು ಅಶೋಕ್ ಟೀಕಿಸಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. One man with Courage makes a majority ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಹೆಚ್ಚು ಆಗುತ್ತಾರೆ” ಎಂದರು.

ಸಿಎಂ ಸಿದ್ದರಾಮಯ್ಯ ಸೇರಿ 139 ಶಾಸಕರು ತನ್ನ ಬಲ ಎಂದು ಅವರು ಸ್ಪಷ್ಟಪಡಿಸಿದರು. “ಸಿದ್ದರಾಮಯ್ಯ ಅವರು 100% ನನ್ನ ಜೊತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜನಪರ ಕೆಲಸ ಮಾಡುತ್ತಿದ್ದೇವೆ. ನಾನು ಸಿದ್ದರಾಮಯ್ಯರ ಪರ ನಿಲ್ಲುವೆ, ಅವರು ನನ್ನ ಪರ ನಿಲ್ಲುವರು” ಎಂದು ಒತ್ತಿ ಹೇಳಿದರು.

ತನ್ನ ಟ್ವೀಟ್‌ಗಳ ಅರ್ಥ ಕೇಳಿದಾಗ, “ನೀವು ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ” ಎಂದು ಮರುತ್ತರ ನೀಡಿದರು. ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿ, “ನಾನು ವಿದ್ಯಾರ್ಥಿ ನಾಯಕನಾಗಿ ಬೆಳೆದು ಬಂದವನು. ನನ್ನ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ರಾಜಕೀಯದಲ್ಲಿ ಏಳು-ಬೀಳು ಸಹಜ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಅನುಭವಿಸಿದ್ದೇನೆ. ಇನ್ನೊಂದು ತಿಂಗಳಲ್ಲಿ ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ” ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಸಿಎಂಗಳು ಮತ್ತು ಸಚಿವ ಸಂಪುಟಗಳು ಬದಲಾದ ಉದಾಹರಣೆ ನೀಡಿ, “ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ” ಎಂದು ಅಶೋಕ್ ಅವರಿಗೆ ತಿರುಗುಬಾಣ ಹೊಡೆದರು.

ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಸ್ಥಾನದ ಸುತ್ತಲಿನ ಚರ್ಚೆಯನ್ನು ಉತ್ತೇಜಿಸಿವೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ-ಶಿವಕುಮಾರ್ ನಡುವಿನ ಒಗ್ಗಟ್ಟನ್ನು ಒತ್ತಿ ಹೇಳಿದರೂ, ಭವಿಷ್ಯದ ನಾಯಕತ್ವದ ಬಗ್ಗೆ ಸೂಚನೆಗಳು ಕೇಳಿ ಬರುತ್ತಿವೆ.

Tags: newnewsಅಭಿವೃದ್ಧಿಅವಕಾಶಆರ್ಥಿಕಇನ್ಉತ್ತರಕರ್ನಾಟಕಕರ್ನಾಟಕದಕಾಂಗ್ರೆಸ್ಕಾರ್ಯಕ್ರಮಕುಮಾರ್ಕ್ರಮಡಾ.ಡಿತೀರದಿನದೇಶನಗರನಿರ್ಧಾರಬಿಜೆಪಿಬೆಂಗಳೂರುಭಾರತಮಟ್ಟದಮತ್ತುಮಹತ್ವದಮಹಾಯುವಯೋಗಯೋಜನೆಯೋಜನೆಗಳರಾಜಕೀಯರಾಜ್ಯರಾಷ್ಟ್ರೀಯವಿಶೇಷವಿಶ್ವಸಚಿವಸಂಬಂಧಸಂಬಂಧಿಸಭೆಸಹಾಯಸಿಎಂಸಿದ್ದರಾಮಯ್ಯಹಣಹೊಸ

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

Invest Karnataka 2025 Kicks Off with a Grand Opening, Showcasing Innovation, Investments, and Global Collaborations

3

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನಿವಾರಣೆಗೆ ಪಿಡಿಒಗಳೊಂದಿಗೆ ನಿಯಮಿತ ಸಭೆ: ಪ್ರಿಯಾಂಕ್ ಖರ್ಗೆ ಸೂಚನೆ

March 21, 2026

ಫುಟ್‌ಬಾಲ್ ಸ್ಟಾರ್ ಎರ್ಲಿಂಗ್ ಹಾಲಾಂಡ್ ನಾರ್ವೇ ಚೆಸ್‌ಗೆ ಹೂಡಿಕೆ:

March 20, 2026

ಕೆ.ಹೆಚ್. ಪಾಟೀಲರು ನನಗೆ ಮೊದಲ ಬಿ-ಫಾರಂ ನೀಡಿ ಅವಕಾಶ ಕಲ್ಪಿಸಿದರು ಡಿ.ಕೆ. ಶಿವಕುಮಾರ್:

March 17, 2026

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಸಾಲದ ಹೊರೆ ಹೆಚ್ಚಳ: ವಿಜಯೇಂದ್ರ ಯಡಿಯೂರಪ್ಪ ತೀವ್ರ ಟೀಕೆ

March 16, 2026

Recent News

ಎಂಎಸ್‌ಎಂಇ ಹೊಸ ನೀತಿಯಲ್ಲಿ ಎಐ ಮತ್ತು ಡಿಜಿಟಲ್ ರೂಪುರೇಷೆಗಳಿಗೆ ಸರ್ಕಾರದ ಚಿಂತನೆ

March 11, 2026

ನರ್ಸ್‌ಗಳ ನೋಂದಣಿ ನವೀಕರಣಕ್ಕೆ ಡಿಜಿಟಲ್‌ ವ್ಯವಸ್ಥೆ: ಆಧಾರ್–ಡಿಜಿಲಾಕರ್ ಮೂಲಕ ಪ್ರಮಾಣಪತ್ರ ವಿತರಣೆ

March 11, 2026

ಕರ್ನಾಟಕದಲ್ಲಿ ಮಿಂಚಿದ ವೈಷ್ಣವಿ ಆಡ್ಕರ್‌: ಕಲಬುರಗಿ ಐಟಿಎಫ್ W35 ಕಿರೀಟ ಗೆಲುವು

March 11, 2026

IRCTCಯು ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಯಾತ್ರೆಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ

March 11, 2026
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error:
  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.