ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರನ್ನು ಸಹಪಂಗಡದೊಂದಿಗೆ ಸ್ಪೆಷಲ್ ವಿಮಾನದಲ್ಲಿ ಬೆಂಗಳೂರಿಗೆ ಕರೆತರುವ ಕಾರ್ಯದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಮುಖ್ಯಭಾಗವಹಿಸಿದ್ದಾರೆ. ಈ ತಂಡದಲ್ಲಿ ಕರ್ನಾಟಕ ಸರ್ಕಾರದ ನೌಕರಿ ಖಾತೆ ಸಚಿವರಾದ ಶ್ರೀ ಸಂತೋಷ್ ಲಾಡ್ ಹಾಗೂ ಇತರ ಹಿರಿಯ ಅಧಿಕಾರಿಗಳು ಕೂಡ ಸೇರಿದ್ದರು.
ಹುತಾತ್ಮರಾದವರ ಪಾರ್ಥೀವ ಶರೀರಗಳನ್ನು ಕೂಡ ಇದೇ ವಿಮಾನಗಳಲ್ಲಿ ಕರೆತರಲಾಗುತ್ತಿದ್ದು, ಇಂದು (ಬುಧವಾರ) ಬೆಳಿಗ್ಗೆ 3.45ಕ್ಕೆ ಬೆಂಗಳೂರು ತಲುಪಲಿದ್ದಾರೆ. ಶೋಕಪಟ್ಟು ಸಂಕಷ್ಟದಲ್ಲಿರುವ 13 ಜನ ಕುಟುಂಬ ಸದಸ್ಯರು ಈ ಪ್ರಯಾಣದಲ್ಲಿ ಜೊತೆಯಾಗಿದ್ದು, ಅವರುಗಳ ಸುರಕ್ಷಿತ ವಾಪಸಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ.
ದುರ್ಘಟನೆ ಸಂಭವಿಸಿದ ತಕ್ಷಣವೇ ಪಹಲ್ಗಾಮ್‌ನಲ್ಲಿದ್ದ ತಂಡದೊಂದಿಗೆ ಸಂಸದ ತೇಜಸ್ವೀ ಸೂರ್ಯ ನೇರವಾಗಿ ಸಂಪರ್ಕ ಸಾಧಿಸಿ, ಅವರಿಗೆ ಧೈರ್ಯ ತುಂಬಿದ್ರು. ಬಳಿಕ ಸರ್ಕಾರದ ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸಿ, ಅವಶ್ಯಕ ಕ್ರಮಗಳನ್ನು ಕೈಗೊಂಡು ಎಲ್ಲರನ್ನೂ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸಚಿವ ಸಂತೋಷ್ ಲಾಡ್ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಸಂಪೂರ್ಣ ಕಾರ್ಯಾಚರಣೆ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಶ್ರಮಿಸಿದ್ದುದನ್ನು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












