ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಕರ್ನಾಟಕದ ಮೂರೂ ಜನರ ಪಾರ್ಥೀವ ಶರೀರಗಳೊಂದಿಗೆ ಸಂಸದ ತೇಜಸ್ವೀ ಸೂರ್ಯ ಬೆಂಗಳೂರು ತಲುಪಿದ್ದಾರೆ. ಈ ದುರ್ಘಟನೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ಸಹಾಯವನ್ನು ಒದಗಿಸಿ, ಅವರೊಂದಿಗೆ ಸಹಾನುಭೂತಿ ವ್ಯಕ್ತಪಡಿಸಿದರು.
ಹುತಾತ್ಮರಾದ ಮಂಜುನಾಥ ರವರ ಪಾರ್ಥೀವ ಶರೀರವನ್ನು ಶಿವಮೊಗ್ಗಕ್ಕೆ, ಭರತ್ ಭೂಷಣ್ ರವರ ಶರೀರವನ್ನು ಬೆಂಗಳೂರಿನ ಮತ್ತಿಕೆರೆ ಮತ್ತು ಮಧುಸೂದನ್ ರವರ ಶರೀರವನ್ನು ಚೆನ್ನೈ ಮೂಲಕ ನೆಲ್ಲೂರಿಗೆ ಕಳುಹಿಸಲಾಗುತ್ತಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ತೇಜಸ್ವೀ ಸೂರ್ಯ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಈ ದುಃಖದ ಕ್ಷಣದಲ್ಲಿ ಇಡೀ ದೇಶ ಶೋಕಸಂತಪ್ತ ಕುಟುಂಬಗಳೊಂದಿಗೆ ನಿಲ್ಲಲಿದೆ,” ಎಂದು ಭರವಸೆ ನೀಡಿದರು.