ಬೆಂಗಳೂರು, ಏಪ್ರಿಲ್ 19:
2023-24 ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಕರ್ನಾಟಕ ರಾಜ್ಯವು ದೊಡ್ಡ ರಾಜ್ಯಗಳ ಪೈಕಿ ದೇಶದಲ್ಲೇ ಅಗ್ರ ಸ್ಥಾನ ಪಡೆಯಲಾಗಿದೆ. ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಈ ಸಾಧನೆ ಸಾಧ್ಯವಾಗಿದ್ದು, ರಾಜ್ಯದ ಕೃಷಿ ಇಲಾಖೆಗೆ ಹೆಮ್ಮೆ ತರಿಸಿದೆ.
ಹಾವೇರಿ, ಕೊಪ್ಪಳ ಜಿಲ್ಲೆಗಳ ಪ್ರಭಾವಿ ನಿರ್ವಹಣೆ
PMFBY ಯೋಜನೆಯು ಉತ್ತಮ ರೀತಿಯಲ್ಲಿ ಜಾರಿಗೊಳ್ಳುತ್ತಿರುವ ದೇಶದ ಮೂರು ಪ್ರಮುಖ ಜಿಲ್ಲೆಗಳ ಪೈಕಿ ರಾಜ್ಯದ ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳು ಮೊದಲ ಸ್ಥಾನ ಗಳಿಸಿದ್ದು, ರಾಜ್ಯದ ಭದ್ರ ಕೃಷಿ ವ್ಯವಸ್ಥೆಯ ಮತ್ತೊಂದು ಸಾಕ್ಷಿಯಾಗಿದೆ.
ರೈತರ ಹಿತದೃಷ್ಠಿಯಿಂದ ನಿರಂತರ ಶ್ರಮ
ಯೋಜನೆಯ ಮೂಲಕ ರೈತರು ಬೆಳೆ ನಷ್ಟದ ಭೀತಿಯಿಂದ ಮುಕ್ತರಾಗುತ್ತಿದ್ದಾರೆ. ಅನಿಶ್ಚಿತ ವಾತಾವರಣದಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರು ರಕ್ಷಿತರಾಗಲು, ರಾಜ್ಯದ ಕೃಷಿ ಇಲಾಖೆ ಹಾಗೂ ಸ್ಥಳೀಯ ಕೃಷಿ ಅಧಿಕಾರಿಗಳು ನಿರಂತರ ಶ್ರಮಿಸುತ್ತಿದ್ದಾರೆ.
ಕೃಷಿ ಸಚಿವರ ನಾಯಕತ್ವದಲ್ಲಿ ಮಹತ್ವದ ಸಾಧನೆ
ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರ ನೇತೃತ್ವ ಹಾಗೂ ವಿಶೇಷ ಕಾಳಜಿಯಿಂದ, ಯೋಜನೆಯ ಯಶಸ್ವಿ ಅನುಷ್ಠಾನ ಸಾಧ್ಯವಾಗಿದೆ. ಈ ಸಾಧನೆಗೆ ಕೇಂದ್ರ ಸರ್ಕಾರವು ರಾಜ್ಯ ಕೃಷಿ ಇಲಾಖೆಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ನೀಡಿ ಗೌರವಿಸಿದೆ.
ಈ ಮಹತ್ವದ ಸಾಧನೆಗಾಗಿ ಕೃಷಿ ಸಚಿವರು ರಾಜ್ಯ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ರಾಜ್ಯದ ಅನ್ನದಾತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರೈತರ ನಿಟ್ಟಿನಲ್ಲಿ ಈ ಸಾಧನೆ ಇನ್ನಷ್ಟು ಭದ್ರ ಕೃಷಿ ಅಭಿವೃದ್ಧಿಗೆ ಪ್ರೇರಕವಾಗಲಿದೆ.