ನವದೆಹಲಿ: ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ಮತ್ತು ಶ್ರೀಮತಿ ಶಿವಶ್ರೀ ಸೂರ್ಯ ಇತ್ತೀಚೆಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ, ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ‘ಸರ್ವಮೂಲ’ ಗ್ರಂಥವನ್ನು ಉಡುಗೊರೆಯಾಗಿ ಸಮರ್ಪಿಸಿದರು.
ಈ ಪ್ರಾಚೀನ ಗ್ರಂಥವು ವಾಟರ್ ಪ್ರೂಫ್ ಮತ್ತು ಫೈರ್ ಪ್ರೂಫ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ತಾರಾ ಪ್ರಕಾಶನ ಸಂಸ್ಥೆಯು ನೂತನ ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ತಾಳೆಗರಿ ಹಾಗೂ ಪುರಾತನ ಹಸ್ತಪ್ರತಿಗಳನ್ನು ಭವಿಷ್ಯದ ಪೀಳಿಗೆಗಳಿಗೆ ಉಳಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿದೆ.
ಪ್ರಧಾನಿ ಮೋದಿಯ ಮೆಚ್ಚುಗೆ
ಸಂಸದ ತೇಜಸ್ವೀ ಸೂರ್ಯ ಅವರ ವಿವಾಹ ಸಮಾರಂಭದ ಚಿತ್ರಗಳನ್ನು ನೋಡಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಈ ಅಮೂಲ್ಯ ಗ್ರಂಥದ ಕುರಿತು ಹೆಚ್ಚಿನ ಮಾಹಿತಿಯನ್ನು ತೇಜಸ್ವೀ ಸೂರ್ಯ ಅವರಿಂದ ಆಲಿಸಿದರು. ಪ್ರಧಾನಿಯವರು, ಜ್ಞಾನಭಾರತಿ ಮಿಷನ್ ಎಂಬ ಹೊಸ ಯೋಜನೆಯ ಬಗ್ಗೆ ಪ್ರಸ್ತಾಪಿಸಿ, ಭಾರತೀಯ ಸಂಸ್ಕೃತಿ ಮತ್ತು ಪೌರಾಣಿಕ ಗ್ರಂಥಗಳ ಸಂರಕ್ಷಣೆಗೆ ಸರ್ಕಾರ ಅನುದಾನವನ್ನು ಮೀಸಲಾಗಿಟ್ಟಿರುವುದನ್ನು ಸ್ಪಷ್ಟಪಡಿಸಿದರು.
ತಾರಾ ಪ್ರಕಾಶನದ ಅಪರೂಪದ ಕಾರ್ಯ
ತಾರಾ ಪ್ರಕಾಶನ 2006ರಲ್ಲಿ ಪ್ರಾರಂಭಗೊಂಡಿದ್ದು, ಪುರಾತನ ಹಸ್ತಪ್ರತಿ ಮತ್ತು ತಾಳೆಗರಿಗಳನ್ನು ಡಿಜಿಟಲೀಕರಣ ಮತ್ತು ಸಂರಕ್ಷಣೆ ಮಾಡುವ ಮಹತ್ವದ ಕಾರ್ಯದಲ್ಲಿ ನಿರತವಾಗಿದೆ. ಈ ಸಂಸ್ಥೆಯನ್ನು ಅಮೆರಿಕದ ರೋಚೆಸ್ಟರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಪಿ.ಆರ್. ಮುಕುಂದ್ ಸ್ಥಾಪಿಸಿದ್ದು, ಆಧ್ಯಾತ್ಮಿಕತೆ ಮತ್ತು ವಿಜ್ಞಾನಗಳ ನಡುವೆ ತಾಳ್ಮೆಸಾಧನೆ ಮಾಡುವ ಹಲವಾರು ಗ್ರಂಥಗಳ ಸಂಪಾದನೆಗೆ ಕಾರಣರಾಗಿದ್ದಾರೆ.
ಈ ಭೇಟಿ ಪೌರಾಣಿಕ ಗ್ರಂಥಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವಂತಹದ್ದು ಆಗಿದ್ದು, ಭಾರತೀಯ ಸಂಸ್ಕೃತಿಯ ಸಂವರ್ಧನೆಗೆ ಹೊಸ ಬೆಳಕು ನೀಡುವಂತಾಗಿದೆ.