ಬೆಂಗಳೂರು: ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಯುವಕರು ಪ್ರಾಣ ಕಳೆದುಕೊಂಡಿರುವ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ವಿಪಕ್ಷಗಳು ಆರೋಪಿಸಿವೆ. ಈ ಘಟನೆಗೆ ನೈತಿಕ ಹೊಣೆಯನ್ನು ಹೊತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಕ್ಷಣ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಲಾಗಿದೆ.

ತರಾತುರಿಯ ವಿಜಯೋತ್ಸವ: ಪೊಲೀಸ್ ಎಚ್ಚರಿಕೆಯನ್ನು ಗಾಳಿಗೆ ತಳ್ಳಿದ ಸರ್ಕಾರ
ನಗರ ಪೊಲೀಸರು ತರಾತುರಿಯ ವಿಜಯೋತ್ಸವ ಆಚರಣೆಯಿಂದ ತೊಂದರೆಯಾಗಬಹುದೆಂದು ಲಿಖಿತ ಎಚ್ಚರಿಕೆ ನೀಡಿದ್ದರೂ, ಸರ್ಕಾರ ಆರ್‌ಸಿಬಿ ತಂಡದ ಪ್ರಶಸ್ತಿ ವಿಜಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆತುರದಿಂದ ಕಾರ್ಯಕ್ರಮ ಆಯೋಜಿಸಿತು ಎಂದು ಆರೋಪವಿದೆ. ವಿಧಾನಸೌಧದ ಮುಂದೆ ಒಂದು ಕಾರ್ಯಕ್ರಮ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಏಕಕಾಲಕ್ಕೆ ನಡೆಸಲು ಸರ್ಕಾರಕ್ಕೆ ಪೊಲೀಸರು ಅನುಮತಿ ನೀಡಿದ್ದರಾ ಎಂಬ ಪ್ರಶ್ನೆ ಎದ್ದಿದೆ.
ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ, ಅಭಿಮಾನಿಗಳ ಸುರಕ್ಷತೆಗೆ ಯಾವ ಷರತ್ತುಗಳನ್ನು ವಿಧಿಸಲಾಗಿತ್ತು? ತುರ್ತು ಸಂದರ್ಭಕ್ಕೆ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ಹೆಚ್ಚುವರಿ ಪೊಲೀಸ್ ಸಿಬ್ಬಂದಿ, KSRP ತುಕಡಿಗಳ ನಿಯೋಜನೆಯಂತಹ ಮುಂಜಾಗ್ರತಾ ಕ್ರಮಗಳು ಏಕೆ ತೆಗೆದುಕೊಳ್ಳಲಿಲ್ಲ? ಈ ಎಲ್ಲ ವೈಫಲ್ಯಗಳು ಸರ್ಕಾರದ “ನಿರ್ಲಕ್ಷ್ಯ” ಮತ್ತು “ಜನರ ಪ್ರಾಣಕ್ಕೆ ಬೆಲೆಯಿಲ್ಲದ ಬೇಜವಾಬ್ದಾರಿತನ”ವನ್ನು ತೋರಿಸುತ್ತವೆ ಎಂದು ವಿಮರ್ಶಕರು ಆಕ್ಷೇಪಿಸಿದ್ದಾರೆ.

ದುರಂತದ ನಂತರವೂ ಸಂಭ್ರಮಾಚರಣೆ: ಮಾನವೀಯತೆಯ ಕೊರತೆ
ಕಾಲ್ತುಳಿತ ದುರಂತ ಸಂಭವಿಸಿದ ನಂತರವೂ ಕ್ರೀಡಾಂಗಣದೊಳಗಿನ ಸಂಭ್ರಮಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸದಿರುವುದು ಸರ್ಕಾರದ ಮಾನವೀಯತೆಯ ಕೊರತೆಯನ್ನು ಎತ್ತಿ ತೋರಿಸಿದೆ. ಇದಕ್ಕೆ ವಿರುದ್ಧವಾಗಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವುದು ಮೃತರ ಕುಟುಂಬಗಳಿಗೆ ದುಃಖ ತಂದಿದೆ. “ದುರಂತದ ಸಮಯದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾದವರು ಸರ್ಕಾರಕ್ಕೆ ಮೃತರ ಬಗ್ಗೆ ಕಿಂಚಿತ್ತೂ ವಿಷಾದವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ,” ಎಂದು ವಿಪಕ್ಷದ ನಾಯಕರು ಟೀಕಿಸಿದ್ದಾರೆ.
ಸರ್ಕಾರದ ಸಮರ್ಥನೆ: ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ
ವಿಧಾನಸೌಧದ ಕಾರ್ಯಕ್ರಮದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮ ನಮ್ಮ ಜವಾಬ್ದಾರಿಯಲ್ಲ ಎಂದು ಸರ್ಕಾರ ಹೇಳಿರುವುದು “ಲಜ್ಜೆಗೇಡಿತನ” ಎಂದು ವಿಪಕ್ಷಗಳು ಆಕ್ಷೇಪಿಸಿವೆ. ದುರಂತದ ನಂತರವೂ ಕಾರ್ಯಕ್ರಮವನ್ನು ಮುಂದುವರೆಸಿರುವುದನ್ನು “ಭಾಷಣ ಮಾಡಿಲ್ಲ, ಬೇಗ ಕಾರ್ಯಕ್ರಮ ಮುಗಿಸಿದೆವು” ಎಂಬ ಸಮರ್ಥನೆಯಿಂದ ಸರ್ಕಾರ ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ, ಇದು ಸಾರ್ವಜನಿಕರ ಕೋಪಕ್ಕೆ ಎಣ್ಣೆ ಸುರಿದಂತಾಗಿದೆ.
ತನಿಖೆಯ ಆಗ್ರಹ: ಕ್ಲೀನ್ ಚಿಟ್ ಕೊಡುವ ಕುತಂತ್ರ?
ಈ ಘಟನೆಯ ಕುರಿತು SIT ತನಿಖೆಯಾಗಲಿ, ಮ್ಯಾಜಿಸ್ಟ್ರೇಟ್ ತನಿಖೆಯಾಗಲಿ, ಅದು ಕೇವಲ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡುವ ಕುತಂತ್ರವಾಗಿರುತ್ತದೆ ಎಂದು ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. “11 ಯುವಕರ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಇದು ತಡೆಯಬಹುದಾದ ದುರಂತವಾಗಿತ್ತು. ಈಗ ತನಿಖೆಯ ಹೆಸರಿನಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ವಿಪಕ್ಷದ ನಾಯಕರು ಹೇಳಿದ್ದಾರೆ.
ರಾಜಿನಾಮೆಗೆ ಒತ್ತಾಯ, ನ್ಯಾಯಕ್ಕಾಗಿ ಹೋರಾಟ
“11 ಅಮಾಯಕ ಯುವಕರ ಸಾವಿನ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಲು ಬಿಡುವುದಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಅವರು ರಾಜಿನಾಮೆ ನೀಡಿ, ದುರಂತಕ್ಕೆ ನೈತಿಕ ಹೊಣೆಯನ್ನು ಹೊರಬೇಕು. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ. ಇದರಲ್ಲಿ ರಾಜಕೀಯ ಉದ್ದೇಶವಿಲ,” ಎಂದು ವಿಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗೆ ಟಾಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪರಿಕರಿಸಿ: “ತಾವು ಒಬ್ಬ ವಕೀಲರಾಗಿ, ಸುದೀರ್ಘ ರಾಜಕೀಯ ಅನುಭವಿಗಳಾಗಿ, ಈ ದುರಂತವನ್ನ ಕುಂಭಮೇಳದ ಕಾಲ್ತುಳಿತಕ್ಕೆ, ಭಯೋತ್ಪಾದಕ ದಾಳಿಗೆ ಹೋಲಿಕೆ ಮಾಡುವುದು ಸರಿಯಲ್ಲ.