ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾ ಸಚಿವ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಗೌರವಾನ್ವಿತ ಶ್ರೀ ರಾಜನಾಥ್ ಸಿಂಗ್ ಜೀ ಅವರನ್ನು ಬೆಂಗಳೂರಿನಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ರಾಜ್ಯ ಬಿಜೆಪಿ ನಾಯಕರಾದ ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.
ರಾಜನಾಥ್ ಸಿಂಗ್ ಜೀ ಅವರು, ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳ ಜಯಂತಿ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀಗಳ ಭಕ್ತರು ಹಾಗೂ ರಾಜ್ಯದ ಜನತೆಗೆ ಇದು ಸಂತಸದ ಕ್ಷಣವಾಗಿ ಮಾರ್ಪಟ್ಟಿದೆ. ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುವ ಅವರು, ಪಕ್ಷದ ಸಂಘಟನಾ ಬೆಳವಣಿಗೆ ಕುರಿತಂತೆ ಆಳವಾದ ಆಸಕ್ತಿ ವಹಿಸುತ್ತಿದ್ದಾರೆ.
ಈ ಸಂದರ್ಬದಲ್ಲಿ, ಕರ್ನಾಟಕ ಬಿಜೆಪಿ ನಿರಂತರವಾಗಿ ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕೆಂಬ ಭರವಸೆ ವ್ಯಕ್ತಪಡಿಸಲಾಯಿತು.