ಭವಿಷ್ಯದ ಸಮ್ಮೇಳನ: ಅನುಭವ, ಅನ್ವೇಷಣೆ, ಭೇದಿಸುವಿಕೆ
ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಮತ್ತು ಪ್ರಭಾವಶಾಲಿ AVGC-XR (ಅನಿಮೇಷನ್, ವಿಸುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ) ಸಮ್ಮೇಳನವಾಗಿರುವ ಬೆಂಗಳೂರು GAFX 2025 ಇಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಭವ್ಯವಾಗಿ ಚಾಲನೆಗೊಂಡಿದೆ. ABAI (Association of Bangalore Animation Industry) ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮವು ಫೆಬ್ರವರಿ 27 ರಿಂದ ಮಾರ್ಚ್ 1, 2025 ರವರೆಗೆ ನಡೆಯಲಿದೆ.
ಈ ಕಾರ್ಯಕ್ರಮವು ಬೆಂಗಳೂರು ನಗರವನ್ನು ಜಾಗತಿಕ AVGC-XR ಉದ್ದಿಮೆ ಕೇಂದ್ರವಾಗಿ ವಿಕಸನಗೊಳಿಸುವ ಮಹತ್ವದ ಹಂತ ಎಂದು ಗುರುತಿಸಲಾಗಿದ್ದು, ಭಾರತವನ್ನು ಈ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
ಅದ್ಧೂರಿ ಉದ್ಘಾಟನೆ
ಕರ್ನಾಟಕ ಸರ್ಕಾರದ ಐಟಿ ಮತ್ತು ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಸಮ್ಮೇಳನದ ಉದ್ಘಾಟನೆ ನೆರವೇರಿತು. ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಇದಲ್ಲದೇ, ಬಯೋಕಾನ್ ಲಿಮಿಟೆಡ್‌ನ ಅಧ್ಯಕ್ಷರು ಡಾ. ಕಿರಣ್ ಮಜುಂದಾರ್ ಶಾ, ಶಾಸಕರಾದ ಶ್ರೀ ಶರತ್ ಬಚ್ಚೇಗೌಡ, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ ದೇಶಗಳ ಕೌನ್ಸಿಲ್ ಜನರಲ್ ಗಳು, ಪುನ್ನರ್ಯುಗ್ ಆರ್ಟ್‌ವಿಷನ್‌ನ ಸಿಇಒ ಶ್ರೀ ಆಶಿಷ್ ಕುಲಕರ್ಣಿ, ಕರ್ನಾಟಕ ಸರ್ಕಾರದ ಐಟಿ & ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ್ ಕೌರ್, GAFX ಅಧ್ಯಕ್ಷರು ಮತ್ತು ABAI ಅಧ್ಯಕ್ಷರಾದ ಶ್ರೀ ಬಿರೆನ್ ಘೋಷ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭವಿಷ್ಯದ ತಲ್ಲೀನ ಅನುಭವ
“Future of Immersion: Experience. Explore. Disrupt” ಎಂಬ ಮೂಲಭೂತ ವಿಷಯವಸ್ತುವನ್ನು ಆಧರಿಸಿ, ಈ ಕಾರ್ಯಕ್ರಮ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕಥೆ ಹೇಳುವ ಶೈಲಿಯನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ ಮಾಡಿಕೊಡಲಿದೆ.
ಈ ವೇದಿಕೆಯಲ್ಲಿ ಜಾಗತಿಕ AVGC-XR ನಾಯಕರು, ತಂತ್ರಜ್ಞರು, ಸೃಜನಶೀಲ ಪ್ರತಿಭೆಗಳು, ನಾವೀನ್ಯತೆ ಮತ್ತು ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿರುವ ಉದ್ದಿಮೆದಾರರು ಭಾಗವಹಿಸಿ ಭವಿಷ್ಯದ AVGC-XR ತಂತ್ರಜ್ಞಾನಗಳನ್ನು ಅನ್ವೇಷಿಸಲಿದ್ದಾರೆ.
GAFX 2025 – ಪ್ರಮುಖ ಆಕರ್ಷಣೆಗಳು
1. ಭವಿಷ್ಯದ ಅನಿಮೇಷನ್ ಪಾಲುದಾರಿಕೆ ಅನಾವರಣ
ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರು Jebu Animation ಮತ್ತು Tinkle ನಡುವಿನ ಅತ್ಯಾಧುನಿಕ ಅನಿಮೇಷನ್ ಪಾಲುದಾರಿಕೆಯನ್ನು ಅನಾವರಣಗೊಳಿಸಲಿದ್ದಾರೆ, ಇದು ಭಾರತೀಯ ಕಾಮಿಕ್ಸ್‌ಗಳಿಗೆ ಹೊಸ ಚೈತನ್ಯ ನೀಡಲಿದೆ.
2. ಇಂಡಿಯಾ ಪೆವಿಲಿಯನ್
ಕರ್ನಾಟಕ, ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗೋವಾ, ತಮಿಳುನಾಡು, ಒಡಿಶಾ, ಅಂಧ್ರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ AVGC-XR ಪ್ರತಿಭೆಗಳು ಈ ವೇದಿಕೆಯಲ್ಲಿ ತಮ್ಮ ನವೀನ ಕಲಾಕೃತಿಗಳನ್ನು ಪ್ರದರ್ಶಿಸಲಿವೆ.
3. ಇಸ್ಪೋರ್ಟ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್
ಭಾರತದ ಅಗ್ರ 4 ಇಸ್ಪೋರ್ಟ್ಸ್ ತಂಡಗಳು ಕೌಂಟರ್-ಸ್ಟ್ರೈಕ್ 2 ಗ್ರಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಸಲಿವೆ. ಇದು ಭಾರತೀಯ ಗೇಮಿಂಗ್ ಸಮುದಾಯಕ್ಕೆ ಹೊಸ ಒತ್ತು ನೀಡಲಿದೆ.
4. ಹೂಡಿಕೆದಾರರ ಸಂಪರ್ಕ
25 ಕ್ಕೂ ಹೆಚ್ಚು ಹೂಡಿಕೆದಾರರು 50+ AVGC-XR ಸ್ಟಾರ್ಟ್‌ಅಪ್‌ಗಳೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಹೊಸ ಉದ್ದಿಮೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಿದ್ದಾರೆ.
5. ಭಾರತೀಯ ಕಾಮಿಕ್ಸ್ ಸ್ಪಾಟ್‌ಲೈಟ್
Tinkle, Amar Chitra Katha, Raj Comics ಮತ್ತು Pran Studios ಭಾರತದ ಮೂಲ ಕಾಮಿಕ್ಸ್ ಐಪಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಭಾರತೀಯ ಕಥಾ ಪರಂಪರೆಯನ್ನು ಪ್ರೋತ್ಸಾಹಿಸಲು ಚರ್ಚೆ ನಡೆಸಲಿವೆ.
6. AI ಮತ್ತು AVGC-XR ಒಕ್ಕೂಟ
NVIDIA, Autodesk, AMD, Deloitte, Adobe ಮುಂತಾದ ತಂತ್ರಜ್ಞರು ಕೃತಕ ಬುದ್ಧಿಮತ್ತೆಯ (AI) AVGC-XR ಕ್ಷೇತ್ರದ ಮೇಲೆ ಬೀರುತ್ತಿರುವ ಪ್ರಭಾವ ಕುರಿತು ವಿಶ್ಲೇಷಣೆ ನಡೆಸಲಿದ್ದಾರೆ.
7. ಸ್ಟಾರ್ಟ್‌ಅಪ್ ನಾವೀನ್ಯತೆ ವಲಯ
ಕರ್ನಾಟಕದ ಸೆಂಟರ್ ಆಫ್ ಎಕ್ಸಲೆನ್ಸ್ (CoE)ನ AVGC-XR ಸ್ಟಾರ್ಟ್‌ಅಪ್‌ಗಳು ತಮ್ಮ ಮುಂಚೂಣಿಯ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ.
8. ಅಂತರಾಷ್ಟ್ರೀಯ AVGC-XR ಮೈತ್ರಿಗಳು
ಕರ್ನಾಟಕ ಸರ್ಕಾರ ಫ್ರಾನ್ಸ್, ಆಸ್ಟ್ರೇಲಿಯಾ, ಯುಕೆ, ಸ್ಕಾಟ್ಲೆಂಡ್, ಉಜ್ಬೇಕಿಸ್ತಾನ್ ಮತ್ತು ಇಟಲಿಯೊಂದಿಗೆ GAFX ಗ್ಲೋಬಲ್ ಇನೋವೇಷನ್ ಅಲಯನ್ಸ್ (GIA) ಸ್ಥಾಪಿಸುತ್ತಿದೆ, ಇದು ಅಂತಾರಾಷ್ಟ್ರೀಯ AVGC-XR ಸಹಯೋಗವನ್ನು ಮತ್ತಷ್ಟು ಬಲಪಡಿಸಲಿದೆ.
ಭಾರತವನ್ನು ಜಾಗತಿಕ AVGC-XR ತಂತ್ರಜ್ಞಾನ ಕೇಂದ್ರವಾಗಿ ಬೆಳೆಸುವ ಗುರಿ
20,000ಕ್ಕೂ ಹೆಚ್ಚು ಉದ್ಯಮ stake holder ಗಳು, ವಿಶ್ವದರ್ಜೆಯ ಭಾಷಣಗಾರರು, ತಲ್ಲೀನಗೊಳಿಸುವ ಪ್ರದರ್ಶನಗಳು ಮತ್ತು ಹೊಸ ಆವಿಷ್ಕಾರಗಳೊಂದಿಗೆ ಈ ಕಾರ್ಯಕ್ರಮವು ಭಾರತವನ್ನು ಜಾಗತಿಕ AVGC-XR ಭವಿಷ್ಯದ ಕೇಂದ್ರವನ್ನಾಗಿಸಲು ಸಾಕ್ಷಿಯಾಗಲಿದೆ.