ಬೆಂಗಳೂರು: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2024ರ ಕೇಂದ್ರ ಬಜೆಟ್ ಭಾರತವನ್ನು 2047ರ ವಿಕಸಿತ ದೇಶವನ್ನಾಗಿ ಪರಿವರ್ತಿಸಲು ಪೂರಕವಾಗಲಿದೆ. ಈ ಬಜೆಟ್ ರೈತರ, ಮಹಿಳೆಯರ, ಯುವಕರ ಮತ್ತು ಬಡವರ ಏಳಿಗೆಗೆ ಪ್ರಾಧಾನ್ಯತೆ ನೀಡಿದ್ದು, ಮಧ್ಯಮ ವರ್ಗಕ್ಕೂ ಹಲವು ಸೌಲಭ್ಯಗಳನ್ನು ಒದಗಿಸಿದೆ.
ಮಧ್ಯಮ ವರ್ಗಕ್ಕೆ ಅನುಕೂಲ:
ಮಧ್ಯಮ ವರ್ಗದ ನಿರೀಕ್ಷೆಗೂ ಅಕ್ಕರೆಯೂ ಇಟ್ಟುಕೊಂಡು ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಇದು ಕೋಟ್ಯಾಂತರ ನಾಗರಿಕರಿಗೆ ನೆರವಾಗಲಿದೆ.
ರೈತರಿಗಾಗಿ ಪ್ರಮುಖ ಘೋಷಣೆಗಳು:
- ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಮೀನುಗಾರರಿಗೆ ವಿಶೇಷ ಅನುದಾನ ನೀಡಲಾಗಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೊಸ ಉಸಿರು:
- ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ಸ್ಥಾಪಿಸುವುದು ಘೋಷಿಸಲಾಗಿದೆ.
- ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮೂಲಕ ರೋಗಿಗಳಿಗೆ ನಿರೀಕ್ಷಿತ ಸೌಲಭ್ಯ ಒದಗಿಸಲಾಗಿದೆ.
- ಎಲ್ಲಾ ಸರಕಾರಿ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಒದಗಿಸಲು ಯೋಜನೆ ಘೋಷಿಸಲಾಗಿದೆ.
ಯುವಕರಿಗೆ ಉದ್ಯೋಗಾವಕಾಶ:
- ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.
- ಯುವಕರಿಗೆ ಸ್ವಯಂ ಉದ್ಯೋಗದ ತರಬೇತಿ ಮತ್ತು ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಹೆಚ್ಚಳ ಮಾಡಲಾಗಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆಗಾಗಿ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಸಲಾಗಿದೆ.
ಈ ಬಜೆಟ್ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ‘ವಿಕಸಿತ ಭಾರತ’ದ ಕನಸು ನನಸು ಮಾಡುವ दिशೆಯಲ್ಲಿ ಮಹತ್ತರ ಹೆಜ್ಜೆಯಾಗಿದೆ. ಐತಿಹಾಸಿಕ ಬಜೆಟ್ ಮಂಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನವರಿಗೆ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಕೃತಜ್ಞತೆ ಸಲ್ಲಿಸಿದ್ದಾರೆ.