ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿ ಸ್ವಾವಲಂಬಿ ಮಾಡುವುದು ಎಂಬ ಗುರಿಯೊಂದಿಗೆ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಗೆ ₹22,919 ಕೋಟಿ ರೂ. ಧನಸಹಾಯವನ್ನು ಮಂಜೂರು ಮಾಡಲಾಗಿದೆ.
ಯೋಜನೆಯ ಮುಖ್ಯ ಉದ್ದೇಶಗಳು:
- ಜಾಗತಿಕ ಮತ್ತು ದೇಶೀಯ ಹೂಡಿಕೆ ಆಕರ್ಷಿಸಿ ಪೂರಕ ವ್ಯವಸ್ಥೆಯನ್ನು ಬಲಪಡಿಸುವುದು.
- ಭಾರತೀಯ ಕಂಪನಿಗಳನ್ನು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಸಂಯೋಜಿಸುವುದು.
- ದೇಶೀಯ ಮೌಲ್ಯವರ್ಧನೆ (DVA) ಹೆಚ್ಚಿಸುವುದು.
ಅಂದಾಜಿತ ಪರಿಣಾಮಗಳು:
- ₹59,350 ಕೋಟಿ ಹೂಡಿಕೆ ಆಕರ್ಷಣೆ.
- ₹4,56,500 ಕೋಟಿ ಮೌಲ್ಯದ ಉತ್ಪಾದನೆ.
- 91,600 ನೇರ ಉದ್ಯೋಗಗಳು ಹಾಗೂ ಅನೇಕ ಪರೋಕ್ಷ ಉದ್ಯೋಗ ಸೃಷ್ಟಿ.
ಯೋಜನೆಯ ಅವಧಿ:
- 6 ವರ್ಷಗಳು.
- 1 ವರ್ಷ ಹೂಡಿಕೆ ರಿಂದ ಉತ್ಪಾದನೆ ಆರಂಭಿಸಲು.
ಪ್ರೋತ್ಸಾಹಧನದ ಭಾಗಗಳು:
- ಉಪ-ಜೋಡಣೆಗಳು (Sub-assemblies): ಡಿಸ್ಪ್ಲೇ ಮತ್ತು ಕ್ಯಾಮೆರಾ ಮಾಡ್ಯೂಲ್.
- ಬೇರ್ ಬಿಡಿಭಾಗಗಳು: ಪ್ಯಾಸಿವ್ ಕಾಂಪೋನೆಂಟ್ಸ್, ಎಲೆಕ್ಟ್ರೋ-ಮೆಕ್ಯಾನಿಕಲ್ಸ್, ಪಿಸಿಬಿಗಳು, ಲಿಥಿಯಂ-ಐಯಾನ್ ಕೋಶಗಳು, ಎನ್‌ಕ್ಲೋಸರ್ಸ್.
- ಆಯ್ದ ತಂತ್ರಜ್ಞಾನಗಳೊಂದಿಗೆ ಬಿಡಿಭಾಗಗಳು: ಹೆಚ್‌ಡಿಐ, ಎಂಎಸ್‌ಎಪಿ, ಫ್ಲೆಕ್ಸಿಬಲ್ ಪಿಸಿಬಿ.
- ಪೂರೈಕೆ ಸರಪಳಿ ಉಪಕರಣಗಳು ಮತ್ತು ಬಂಡವಾಳ ಸರಕುಗಳು: ತಯಾರಿಕೆಯಲ್ಲಿ ಬಳಸುವ ಉಪಕರಣಗಳಿಗೆ ಕ್ಯಾಪೆಕ್ಸ್ ಪ್ರೋತ್ಸಾಹಧನ.
ಹಿನ್ನೆಲೆ:
- 2014-15ರಲ್ಲಿ ₹1.90 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ 2023-24ರಲ್ಲಿ ₹9.52 ಲಕ್ಷ ಕೋಟಿ ದಾಟಿದೆ.
- ಎಲೆಕ್ಟ್ರಾನಿಕ್ಸ್ ರಫ್ತು ₹0.38 ಲಕ್ಷ ಕೋಟಿಯಿಂದ ₹2.41 ಲಕ್ಷ ಕೋಟಿಗೆ ಹೆಚ್ಚಳವಾಗಿದೆ.