ಬೆಂಗಳೂರು: ಭಾರತೀಯ ಸೇನೆಯ ಸಾರಿಗೆ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ರಕ್ಷಣಾ ಸಚಿವಾಲಯವು ಎಂ/ಎಸ್ ಅಶೋಕ್ ಲೇಲ್ಯಾಂಡ್ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ಕಂಪನಿಯೊಂದಿಗೆ ₹197.35 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಮೂಲಕ 500 ಪ್ರೀ-ಫ್ಯಾಬ್ರಿಕೇಟೆಡ್ ಶಾರ್ಟ್ ಚ್ಯಾಸಿಸ್ ಬಸ್ಗಳನ್ನು ಸೇನೆಯ ಬಳಕೆಗಾಗಿ ಖರೀದಿಸಲಾಗುತ್ತಿದೆ.

ಈ ಶಾರ್ಟ್ ಚ್ಯಾಸಿಸ್ ಬಸ್ಗಳು ಬಲಿಷ್ಠ ನಿರ್ಮಾಣದೊಂದಿಗೆ, ಸುಧಾರಿತ ತಂತ್ರಜ್ಞಾನ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. ದುರ್ಗಮ ಮತ್ತು ಪರ್ವತ ಪ್ರದೇಶಗಳಲ್ಲಿಯೂ ಸುಗಮವಾಗಿ ಸಂಚಾರ ಮಾಡಬಹುದಾದ ಈ ಬಸ್ಗಳು, ಭಾರತೀಯ ಸೇನೆಯ ಕಾರ್ಯಾಚರಣಾ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಿವೆ.
ಈ ಖರೀದಿಯು “ಬೈ (ಇಂಡಿಯನ್-IDDM)” ವಿಭಾಗಕ್ಕೆ ಒಳಪಡುವುದರಿಂದ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಸ್ಥಿರ ಉದ್ಯೋಗ ಸೃಷ್ಟಿಗೆ ಸಹ ಕಾರಣವಾಗಲಿದೆ. ಭಾರತದ ‘ಆತ್ಮನಿರ್ಭರ ಭಾರತ’ ಕನಸನ್ನು ನನಸು ಮಾಡುವತ್ತ ಈ ಒಪ್ಪಂದವು ಮಹತ್ವದ ಹೆಜ್ಜೆಯಾಗಿದೆ.
Discover more from amiroNEWS
Subscribe to get the latest posts sent to your email.