ಮಹಿಳಾ ಕಾಂಗ್ರೆಸ್ ಸದಸ್ಯರನ್ನು ನಿಗಮ ಮಂಡಳಿ ಸೇರಿದಂತೆ ಒಂದಷ್ಟು ವಿಭಾಗಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಕಳೆದ ಆರು ತಿಂಗಳಲ್ಲಿ ಸುಮಾರು 70 ಸಾವಿರ ಮಹಿಳಾ ಸದಸ್ಯತ್ವವನ್ನು ಮಾಡಿದ್ದೇವೆ.
ತೆಲಂಗಾಣದಲ್ಲಿ 1 ಲಕ್ಷ ದಾಟಿದೆ. ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ. ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದರೆ ನಾವು ಮೊದಲನೇ ಸ್ಥಾನಕ್ಕೆ ಬರುತ್ತೇವೆ.
ರಾಜ್ಯದಲ್ಲಿ ಮಹಿಳೆಯರ ಪರವಾಗಿ ಸದ್ದಿಲ್ಲದೇ ಕ್ರಾಂತಿ ನಡೆಯುತ್ತಿದೆ. ಗ್ಯಾರಂಟಿಗಳನ್ನು ವಿರೋಧ ಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ.
ಮಹಿಳಾ ಪರವಾದ ಮಹಿಳಾ ಅಭಿವೃದ್ಧಿ ಗ್ಯಾರಂಟಿಯ ಸರ್ಕಾರ ನಮ್ಮದು.
ನಮ್ಮ ಸರ್ಕಾರದ ಎಲ್ಲಾ ನಾಯಕರು ಮಹಿಳೆಯರ ಪರವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯತಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಬಜೆಟ್ ಅಲ್ಲಿ ಮಹಿಳೆಯರಿಗೆ 94 ಸಾವಿರ ಕೋಟಿ ಹಣವನ್ನು ಮೀಸಲು ಇಡಲಾಗಿದೆ.
ಗರ್ಬಿಣಿ ಮಹಿಳೆಯರ ಸುರಕ್ಷತೆಗೆ ರೂ. 320 ಕೋಟಿಯನ್ನು ಬಜೆಟ್ ಅಲ್ಲಿ ಮೀಸಲಿಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ಅನ್ನು ಮಹಿಳಾ ಸ್ವಸಹಾಯ ಸಂಘಗಳು ನಡೆಸುವ ಯೋಜನೆ, ಅಕ್ಕಾ ಕೆಫೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂಪಾಯಿ, ಸಹಾಯಕರಿಗೆ 750 ರೂಗಳಿಗೆ ಗೌರವ ಧನವನ್ನು ಹೆಚ್ಚಳ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಜನರಿಗೆ ಕೊಡುಗೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರದ ಬಜೆಟ್ ಕೊಟ್ಟಿದೆ.
ಮಹಿಳಾ ಕಾಂಗ್ರೆಸ್ ಸಂಘಟನೆಗಾಗಿ ಪ್ರವಾಸ ಮಾಡುವ ವೇಳೆ ಮಹಿಳೆಯೊಬ್ಬರು ‘ನಾನು ಹೃದ್ರೋಗ ಚಿಕಿತ್ಸೆಗೆ ಎಂದು ಗೃಹಲಕ್ಷ್ಮಿ ಹಣವನ್ನು ಬಳಸಿಕೊಂಡಿ. ನನ್ನ ಗಂಡ ಮಗನ ಬಳಿ ಹಣ ಕೇಳಲಿಲ್ಲ. ಇದು ನಮ್ಮ ಯೋಜನೆಯ ಹೆಗ್ಗಳಿಕೆ. ನೂರಾರು ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
ಆದರೆ ನಮ್ಮ ಮುಂದೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ದೊಡ್ಡ ಹೋರಾಟವಿದೆ. ಏಕೆಂದರೆ 2029 ಕ್ಕೆ ಮೀಸಲಾತಿ ಜಾರಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಇಡೀ ದೇಶದಾದ್ಯಂತ ನಾವು ಹೋರಾಟ ಮಾಡಬೇಕು. ಶೇ.33 ರಷ್ಟು ಮೀಸಲಾತಿ ಸಿಗುವ ತನಕ ಹೋರಾಟವನ್ನು ಮರೆಯಬಾರದು.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಯುವಕರು ಹಾಗೂ ಮಹಿಳೆಯರ ಬೇಡಿಕೆಗಳಿಗೆ ದೊಡ್ಡ ಬಲ ಸಿಕ್ಕಿದೆ. ನೀವು ನಮಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿ ಮಾಡಿಕೊಟ್ಟಿದ್ದೀರಿ.












