ಎನ್‌ಸಿಸಿ ವಾಯು ಸೈನಿಕ ಶಿಬಿರ 2025: ಕನಸುಗಳಿಗೆ ರೆಕ್ಕೆ ಕೊಡಲು ಸಿದ್ಧವಾದ ವಾಯು ವಿಭಾಗದ ಕೆಡೆಟ್‌ಗಳು
ಬೆಂಗಳೂರು: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು 2025ರ ಸೆಪ್ಟೆಂಭರ್ 18 ರಿಂದ 30 ರವರೆಗೆ ಬೆಂಗಳೂರಿನಲ್ಲಿ ಅಖಿಲ ಭಾರತ ವಾಯು ಸೈನಿಕ ಶಿಬಿರ (AIVSC) 2025 ಆಯೋಜಿಸಲು ಸಜ್ಜಾಗಿದೆ. ಎನ್‌ಸಿಸಿ ವಾಯು ವಿಭಾಗದ ಪ್ರಮುಖ ಶಿಬಿರವಾದ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಕೆಡೆಟ್‌ಗಳು ಮೈಕ್ರೋಲೈಟ್ ಫ್ಲೈಯಿಂಗ್, ಏರೋಮಾಡಲಿಂಗ್, ಡ್ರಿಲ್ ಮತ್ತು ಫೈರಿಂಗ್‌ನಂತಹ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ವಾರ್ಷಿಕ ಶಿಬಿರದಲ್ಲಿ ಎನ್‌ಸಿಸಿ ಮಹಾನಿರ್ದೇಶನಾಲಯದ ಅಧಿಕಾರಿಗಳು ವಾಯು ವಿಭಾಗದ ತರಬೇತಿಯ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ.
17 ನಿರ್ದೇಶನಾಲಯಗಳಿಂದ 640 ಕೆಡೆಟ್‌ಗಳ ಆಯ್ದ ತಂಡವು ಈ ಪ್ರತಿಷ್ಠಿತ ಶಿಬಿರದಲ್ಲಿ ಭಾಗವಹಿಸಲಿದೆ. ಈ ಬಾರಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ನಿರ್ದೇಶನಾಲಯದಿಂದಲೂ ಕೆಡೆಟ್‌ಗಳು ಭಾಗವಹಿಸುತ್ತಿದ್ದಾರೆ. ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಈ ಕೆಡೆಟ್‌ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ತಮ್ಮ ವಿಮಾನಯಾನ ಕನಸುಗಳಿಗೆ ರೆಕ್ಕೆ ಕೊಡಲು ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ.
ವಿಜೇತ ತಂಡವು ವಾಯು ಸೇನಾ ಮುಖ್ಯಸ್ಥರ ಅಖಿಲ ಭಾರತ ವಾಯು ಸೈನಿಕ ಟ್ರೋಫಿಯನ್ನು ಗೆಲ್ಲಲಿದೆ. 2024ರಲ್ಲಿ ಚಾಂಪಿಯನ್ ಆಗಿರುವ ಆತಿಥೇಯ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ತಮ್ಮ ಟ್ರೋಫಿಯನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸಲಿದೆ. ಈ ಶಿಬಿರವನ್ನು ಸೆಪ್ಟೆಂಭರ್ 19 ರಂದು ವಾಯು ಸೇನೆಯ ತರಬೇತಿ ಕಮಾಂಡ್‌ನ ಹಿರಿಯ ಅಧಿಕಾರಿ ಏರ್ ಮಾರ್ಷಲ್ ಬಿಜು ಮಾಮ್ಮನ್ ಉದ್ಘಾಟಿಸಲಿದ್ದಾರೆ.
ಶಿಬಿರವನ್ನು ಜಲಹಳ್ಳಿಯ ವಾಯು ಸೇನಾ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದು, ಸ್ಪರ್ಧೆಗಳು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಯಲಿವೆ. ಈ ಶಿಬಿರವು ಕೇವಲ ಸ್ಪರ್ಧೆಗೆ ಸೀಮಿತವಾಗಿಲ್ಲ; ಇದು ಕೆಡೆಟ್‌ಗಳಿಗೆ ಜೀವನವನ್ನು ಬದಲಾಯಿಸುವ ಅನುಭವವಾಗಿದೆ. ಸೇನೆಯಿಂದ ಬಂದ ಪ್ರಮುಖ ವಕ್ತಾರರು ಮಿಲಿಟರಿ ನಾಯಕತ್ವದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ, ಜೊತೆಗೆ ಸರ್ವೀಸ್ ಸೆಲೆಕ್ಷನ್ ಬೋರ್ಡ್‌ನ ಮೌಲ್ಯಮಾಪಕರು ಕೆಡೆಟ್‌ಗಳಿಗೆ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸಲಿದ್ದಾರೆ. ಭಾರತೀಯ ವಾಯು ಸೇನೆಯ ಸರ್ವೀಸ್ ತರಬೇತಿ ಸಂಸ್ಥೆಯಾದ ಸೆಂಟರ್ ಫಾರ್ ಲೀಡರ್‌ಶಿಪ್ ಆಂಡ್ ಬಿಹೇವಿಯರಲ್ ಸ್ಟಡೀಸ್ (CLABS) ಕೆಡೆಟ್‌ಗಳಿಗೆ ನಾಯಕತ್ವ ಕೌಶಲ್ಯಗಳ ತರಬೇತಿ ನೀಡಲಿದೆ.
ಪೈಲಟ್ ಯೋಜನೆಯಾಗಿ, ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬಿರ್‌ಪಾಲ್ ಸಿಂಗ್ AVSM VSM ರವರ ದೃಷ್ಟಿಕೋನಕ್ಕೆ ತಕ್ಕಂತೆ ಕೆಡೆಟ್‌ಗಳಿಗೆ ಡ್ರೋನ್ ತರಬೇತಿಯನ್ನು ಒದಗಿಸಲಾಗುವುದು. ಜೊತೆಗೆ, ಕೆಡೆಟ್‌ಗಳಿಗೆ ಝೆನಿತ್ ಏರ್ ಮತ್ತು SW-80 ವೈರಸ್ ಮೈಕ್ರೋಲೈಟ್‌ಗಳಲ್ಲಿ ವಾಯು ಅನುಭವ ಸವಾರಿಯನ್ನು ಒದಗಿಸಲಾಗುವುದು. ವಾಯು ಸೇನೆಯ ತರಬೇತಿ ಕಮಾಂಡ್‌ನ ಆಶ್ರಯದಲ್ಲಿ ಯಲಹಂಕ ವಾಯು ಸೇನಾ ನಿಲ್ದಾಣಕ್ಕೆ ಶೈಕ್ಷಣಿಕ ಭೇಟಿಯನ್ನೂ ಆಯೋಜಿಸಲಾಗಿದೆ.
ಈ ಶಿಬಿರವು ವಾಯು ವಿಭಾಗದ ಎನ್‌ಸಿಸಿ ತರಬೇತಿಯ ಕೌಶಲ್ಯವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ, ಕೆಡೆಟ್‌ಗಳನ್ನು ಭಾರತೀಯ ವಾಯು ಸೇನೆಗೆ ಸೇರಲು ಪ್ರೇರೇಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
-x-
DPRO/BLR/IG/SPರೆ