ಬೆಂಗಳೂರು, 1 ಫೆಬ್ರವರಿ 2025: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಈ ಬಜೆಟ್‌ನಲ್ಲಿನ ಪ್ರಮುಖ ಘೋಷಣೆಗಳಲ್ಲಿ ತಂತ್ರಜ್ಞಾನ ನವೀಕರಣ ಮತ್ತು ಜಾಗತಿಕ ನೀತಿ ಬೆಳವಣಿಗೆಗಳಿಗೆ ಅನುಗುಣವಾಗಿ ನಿಯಮಗಳಲ್ಲಿ ತಿದ್ದುಪಡಿ, ಹೂಡಿಕೆ ಸ್ನೇಹಪರ ಸೂಚ್ಯಂಕ ಆರಂಭ ಮತ್ತು ಹಲವು ಕಾನೂನುಗಳಲ್ಲಿನ ನಿಬಂಧನೆಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವ ಜನ ವಿಶ್ವಾಸ ಮಸೂದೆ 2.0 ಪ್ರಸ್ತಾಪ ಇದ್ದುದು ಮುಖ್ಯವಾದವು.
ಉನ್ನತ ಮಟ್ಟದ ಸಮಿತಿ ರಚನೆ
ಹಣಕಾಸೇತರ ವಲಯದ ಎಲ್ಲಾ ನಿಯಮಗಳು, ಪ್ರಮಾಣಪತ್ರಗಳು, ಪರವಾನಗಿಗಳು ಮತ್ತು ಅನುಮತಿಗಳ ಪರಿಶೀಲನೆಗಾಗಿ ಸರ್ಕಾರವು ನಿಯಂತ್ರಕ ಸುಧಾರಣೆಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಈ ಸಮಿತಿ ಒಂದು ವರ್ಷದೊಳಗೆ ತನ್ನ ಶಿಫಾರಸ್ಸುಗಳನ್ನು ನೀಡಲಿದ್ದು, ವಹಿವಾಟು ಸುಲಭತೆ ಮತ್ತು ವಿಶ್ವಾಸಾರ್ಹ ಆರ್ಥಿಕ ಆಡಳಿತವನ್ನು ಬಲಪಡಿಸಲು ಪರಿವರ್ತನಾತ್ಮಕ ಕ್ರಮಗಳನ್ನು ಪ್ರಸ್ತಾಪಿಸಲಿವೆ.
ರಾಜ್ಯಗಳ ಹೂಡಿಕೆ ಸ್ನೇಹಪರ ಸೂಚ್ಯಂಕ
ಸಹಕಾರಿ ಸ್ಪರ್ಧಾತ್ಮಕತೆಯ ಮನೋಭಾವವನ್ನು ಉತ್ತೇಜಿಸಲು 2025ರಲ್ಲಿ ರಾಜ್ಯಗಳ ಹೂಡಿಕೆ ಸ್ನೇಹಪರ ಸೂಚ್ಯಂಕವನ್ನು ಸರ್ಕಾರವು ಪ್ರಾರಂಭಿಸಲಿದೆ.
ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (FSDC) ಕಾರ್ಯವಿಧಾನ
ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ, ಪ್ರಸ್ತುತ ಹಣಕಾಸು ನಿಯಮಗಳು ಮತ್ತು ಅಂಗಸಂಸ್ಥೆಗಳ ಸೂಚನೆಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸಲಾಗುವುದು.
ಜನ್ ವಿಶ್ವಾಸ್ ಮಸೂದೆ 2.0
ಅದರೊಂದಿಗೆ, ಸರ್ಕಾರವು 2023ರ ಜನ ವಿಶ್ವಾಸ ಕಾಯ್ದೆಯ ಅನ್ವಯ, ವಿವಿಧ ಕಾನೂನುಗಳಲ್ಲಿನ 100ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ಜನ ವಿಶ್ವಾಸ ಮಸೂದೆ 2.0 ಅನ್ನು ತರಲಿದ್ದುದು ಪ್ರಸ್ತಾಪವಾಗಿದೆ.
ಬದ್ಧತೆ
ಕಳೆದ ಹತ್ತು ವರ್ಷಗಳಲ್ಲಿ ‘ವ್ಯವಹಾರ ಸುಲಭತೆ’ಗಾಗಿ ಸರ್ಕಾರವು ತಾಳಿದ ಬದ್ಧತೆಯನ್ನು ಮುಂದುವರಿಸುತ್ತಾ, ಈ ಬಜೆಟ್ ಆರ್ಥಿಕ ಅಭಿವೃದ್ಧಿ, ಉದ್ಯೋಗ, ಮತ್ತು ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಪರಿಪೂರ್ಣವಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.