ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಪಟ್ಟಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದ್ದು, 1,02,64,714 ಮತದಾರರು ಪಟ್ಟಿಯಲ್ಲಿ ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ವಿವರಗಳು ಹೀಗಿವೆ:
- ಪುರುಷ ಮತದಾರರು: 52,80,287
- ಮಹಿಳಾ ಮತದಾರರು: 49,82,589
- ತೃತೀಯ ಲಿಂಗ ಮತದಾರರು: 1,838
ಅಂತಿಮ ಪಟ್ಟಿ ಪರಿಶೀಲನೆ:
ಮತದಾರರ ಅಂತಿಮ ಪಟ್ಟಿಯನ್ನು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಛೇರಿಗಳು, ವಾರ್ಡ್ ಕಚೇರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ (ceokarnataka.kar.nic.in) ಮತ್ತು ಬಿಬಿಎಂಪಿ ವೆಬ್ಸೈಟ್ (bbmp.gov.in)ಗಳಲ್ಲಿ ಲಭ್ಯವಿದೆ.
ಮತದಾರರು ತಮ್ಮ Voter Helpline App ಅಥವಾ voters.eci.gov.in ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ಜೊತೆಗೆ, e-EPIC ಕಾರ್ಡ್ ಡೌನ್ಲೋಡ್ ಮಾಡುವುದು, ಮತಗಟ್ಟೆ ವಿವರಗಳು ಮತ್ತು ಶೇಕಡವಾರು ಮತದಾನದ ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಯುವ ಮತದಾರರು ಮತ್ತು ವಿಶೇಷ ವರ್ಗಗಳ ಮಾಹಿತಿ:
- ಯುವ ಮತದಾರರು: 95,391
- ಅನಿವಾಸಿ ಭಾರತೀಯ ಮತದಾರರು: 2,294
- ಸೇವಾ ಮತದಾರರು: 1,712
- ವಿಶೇಷ ಚೇತನ ಮತದಾರರು: 32,505
ರಾಜಕೀಯ ಪ್ರತಿನಿಧಿಗಳ ಜೊತೆ ಚರ್ಚೆ:
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಾಗಿ ರಾಜಕೀಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಈ ವೇಳೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅನಾಯಾಸ ಪರಿಶೀಲನೆ:
ಮತದಾರರು ಯಾವುದೇ ಕಛೇರಿಗೆ ತೆರಳದೆ Voter Helpline App ಅಥವಾ voters.eci.gov.in ಮೂಲಕ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ತಿದ್ದುಪಡಿ ಸಲ್ಲಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ:
ಆಸಕ್ತರು ಅಧಿಕೃತ ವೆಬ್ಸೈಟ್ಗಳನ್ನು ಭೇಟಿ ಮಾಡಿ ಅಥವಾ ವೋಟರ್ ಹೆಲ್ಪ್ಲೈನ್ ಮೂಲಕ ಮಾಹಿತಿ ಪಡೆಯಬಹುದು.