ಬೆಂಗಳೂರು: ರಾಜ್ಯದಲ್ಲಿ ಮದ್ಯದ ದರ ಮತ್ತೊಮ್ಮೆ ಹೆಚ್ಚುವ ಸಾಧ್ಯತೆ ಇದೆ. ಅಬಕಾರಿ ಇಲಾಖೆ 2025ನೇ ಸಾಲಿನ ಬಜೆಟ್ ಗುರಿ ಮುಟ್ಟಲು ಮದ್ಯದ ಮೇಲಿನ ತೆರಿಗೆ ಹೆಚ್ಚಿಸುವ ಸಾಧ್ಯತೆಯಿದೆ.
2024-25ನೇ ಸಾಲಿಗೆ ಅಬಕಾರಿ ಇಲಾಖೆಗೆ 38,500 ಕೋಟಿ ರೂ. ಆದಾಯ ಗುರಿ ನೀಡಲಾಗಿತ್ತು. ಆದರೆ, 2025-26ನೇ ಸಾಲಿಗೆ ಈ ಗುರಿಯನ್ನು 40,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಆದಾಯವನ್ನು ಪಡೆಯಲು, ಕಡಿಮೆ ದರದ ವಿಸ್ಕಿ, ಬ್ರ್ಯಾಂಡಿ, ರಮ್ ಮತ್ತು ಜಿನ್ ಮೇಲಿನ ದರವನ್ನು ಏರಿಸುವ ಕುರಿತು ಚಿಂತನೆ ನಡೆಯುತ್ತಿದೆ.
ಮೌಲ್ಯವರ್ಧಿತ ತೆರಿಗೆ (VAT) ಮತ್ತು ಅಬಕಾರಿ ಸುಂಕ ಹೆಚ್ಚಿಸಿದರೆ, 5 ರಿಂದ 20 ರೂ.ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ಏರಿಕೆ ಜಾರಿಗೆ ಬಂದರೆ, ಪ್ರಸ್ತುತ 80 ರೂ.ಗೆ ಲಭ್ಯವಿರುವ ಮದ್ಯ 100 ರೂ.ಗೆ, 90 ರೂ. ಮದ್ಯ 110 ರೂ.ಗೆ, 100 ರೂ. ಮದ್ಯ 120 ರೂ.ಗೆ ಏರಿಸಬಹುದೆಂದು ಅಂದಾಜಿಸಲಾಗಿದೆ.
ಈ ಸುದ್ದಿ ಮದ್ಯಪ್ರಿಯರಲ್ಲಿ ಆಕ್ರೋಶ ಮೂಡಿಸಿದೆ. ವಿಶೇಷವಾಗಿ, ಕಡಿಮೆ ದರದ ಮದ್ಯವನ್ನು ಬಳಸುವ ಮಧ್ಯಮವರ್ಗದ ಮೇಲೆ ಇದರ ಪರಿಣಾಮ ದೊಡ್ಡದಾಗಬಹುದು. ಆದರೆ, ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿರುವ ಅಬಕಾರಿ ಇಲಾಖೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.