Monday, June 30, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post
No Result
View All Result
amiroNEWS
Home State Karnataka News

ಮಹಾತ್ಮ ಗಾಂಧೀಜಿ ಭಾರತದ ಆತ್ಮ: ಡಿಸಿಎಂ ಡಿ.ಕೆ. ಶಿವಕುಮಾರ್

ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ

Prem Shekher by Prem Shekher
5 months ago
Reading Time: 1 min read
62
A A
37
SHARES
105
VIEWS

ಬೆಳಗಾವಿ: “ಮಹಾತ್ಮ ಗಾಂಧೀಜಿ ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಶಿವಕುಮಾರ್ ಅವರು ದೇಶಕ್ಕೆ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು.

“ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ, ಆದರ್ಶವನ್ನು ಸಾರಲು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಇದು ದೇಶದ ಜನರು, ದೇಶದ ಐಕ್ಯತೆ, ಸಮಗ್ರತೆಗೆ ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶ. ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಇವು ಕೇವಲ ಘೋಷಣೆಗಳಲ್ಲ, ಭಾರತದ ಶಕ್ತಿ ಮಂತ್ರಗಳು. ಇತ್ತೀಚೆಗೆ ನಾವು ಸಂಕ್ರಾಂತಿ ಹಬ್ಬ ಆಚರಿಸಿದ್ದೇವೆ. ಸಂಕ್ರಾಂತಿ ಎಂದರೆ ಹೊಸತನ, ಹೊಸ ಹುರುಪು, ಹೊಸ ಉತ್ಸಾಹ” ಎಂದು ತಿಳಿಸಿದರು.

“ಅಂದು ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಇಂದು ಕನ್ನಡನಾಡಿನ ವರಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ” ಎಂದು ತಿಳಿಸಿದರು.

“1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಕ್ರಾಂತಿ ಆಗಿ, ಹುರುಪು ತಂದಿತ್ತು. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಅಂಬೇಡ್ಕರ್ ಸಂವಿಧಾನ ಕೊಟ್ಟರು. ಗಾಂಧಿ ಭಾರತ ಎಂದರೆ ಸ್ವಾಭಿಮಾನಿಗಳ ಭಾರತ, ಏಕತೆಯ ಭಾರತ, ಸಾಮರಸ್ಯದ ಬದುಕಿನ ಭಾರತ, ಜಾತ್ಯತೀತ ಭಾರತ, ಸರ್ವೋದಯ ಭಾರತ” ಎಂದರು.

“ನೀವು ಕ್ರಾಂತಿಕಾರಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನು ಕೊಲ್ಲಲು ಆಗುವುದಿಲ್ಲ ಎಂದು ಗಾಂಧೀಜಿ ಅವರು ಹೇಳಿದ್ದಾರೆ. ವ್ಯಕ್ತಿ ಸಾಯಬಹುದು, ಆದರೆ ಅವರ ತತ್ವಗಳು ಸಾಯುವುದಿಲ್ಲ. ನನ್ನ ದೇಹವನ್ನು ನಾಶ ಮಾಡಬಹುದು, ಆದರೆ ನನ್ನ ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಗಾಂಧಿ ಹೇಳಿದ್ದರು. ಪಾಪಗಳನ್ನು ನಾಶ ಮಾಡು, ಪಾಪಿಗಳನ್ನು ಪ್ರೀತಿಸು ಎಂದು ಗಾಂಧಿ ಹೇಳಿದ್ದಾರೆ” ಎಂದು ಗಾಂಧೀಜಿ ಅವರ ಸಂದೇಶಗಳನ್ನು ಸ್ಮರಿಸಿದರು.

“ನಮ್ಮ ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಭಗವದ್ಗೀತೆ, ಬೈಬಲ್, ಕುರಾನ್ ಧರ್ಮ ಗ್ರಂಥಗಳಂತೆ ನಮಗೆ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ” ಎಂದು ತಿಳಿಸಿದರು.

“ನನ್ನ ದೇಹ ಸತ್ತರೂ ನಾನು ಭಾರತದ ಸಂವಿಧಾನದ ರೂಪದಲ್ಲಿ ಬದುಕಿರುತ್ತೇನೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಅವರು ಈಗ ಜೈ ಭೀಮ್ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಸುಳ್ಳಿನ ವಿರುದ್ಧ ಹೋರಾಟ ಮಾಡಿದ ಮಹಾತ್ಮನ ವಿರುದ್ಧವೇ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದುಷ್ಟರಿಂದ ಗಾಂಧಿ ಚಿಂತನೆಗಳನ್ನು ಉಳಿಸಬೇಕು. ಗೂಡ್ಸೆ ಚಿಂತನೆಗಳನ್ನು ನಾಶ ಮಾಡಬೇಕು. ಗಾಂಧೀಜಿ ತತ್ವಗಳನ್ನು ರಕ್ಷಿಸಬೇಕು” ಎಂದು ಕರೆ ನೀಡಿದರು.

“ಈ ಸಮಾವೇಶ ಇಲ್ಲಿಗೆ ನಿಲ್ಲಬಾರದು. ನಮ್ಮ ಸರ್ಕಾರ ಹಾಗೂ ಪಕ್ಷದ ವತಿಯಿಂದ ಇಡೀ ವರ್ಷ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ದೇಶದ ಪ್ರತಿ ತಾಲೂಕು ಮಟ್ಟದಲ್ಲಿ ಈ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು” ಎಂದು ತಿಳಿಸಿದರು.

“ಅಂದು ಹೇಗೆ ಗಾಂಧೀಜಿ ಸಮಾವೇಶ ನಡೆಸಿ ಜನರನ್ನು ಒಂದುಗೂಡಿಸಿದರೋ ಅದೇ ರೀತಿಯಲ್ಲೇ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿ ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ. ಜನವರಿ 30 ರಂದು ಕೋಮುವಾದಿಗಳು ಗಾಂಧೀಜಿ ಅವರನ್ನು ಕೊಂದರು. ಆದರೆ ಅವರ ಮೌಲ್ಯ ಆದರ್ಶಗಳನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ” ಎಂದರು.

“1924 ರ ಸಮಾವೇಶ ಕರ್ನಾಟಕ ಏಕೀಕರಣಕ್ಕೂ ಶಕ್ತಿ ತುಂಬಿತ್ತು. ಈ ಸಮಾವೇಶ ಕರ್ನಾಟಕವನ್ನು ಕಟ್ಟಿತ್ತು. ಕನ್ನಡಿಗರನ್ನು ಒಂದುಗೂಡಿಸಿತ್ತು. ನಮಗೆ ಆರ್ಥಿಕ ಸ್ವಾತಂತ್ರ್ಯ ಬೇಕು. ಅದನ್ನು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ನೀಡಿದೆ. ಬಡತನದಿಂದ ಸ್ವಾತಂತ್ರ್ಯ ಬೇಕು. ಅದಕ್ಕಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ನಾವೆಲ್ಲರೂ ಸೇರಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ – ಎಂಬ ಈ ಮೂರು ತತ್ವಗಳನ್ನು ಉಳಿಸೋಣ. ಭಾರತದ ಪ್ರಜಾಪ್ರಭುತ್ವವನ್ನು ಕಾಪಾಡೋಣ” ಎಂದು ತಿಳಿಸಿದರು.

“ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರದಾಸರ ಪದಗಳಂತೆ. ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ, ಜೈ ಕಾಂಗ್ರೆಸ್” ಎಂದು ತಿಳಿಸಿದರು.

Like this:

Like Loading...

Related


Discover more from amiroNEWS

Subscribe to get the latest posts sent to your email.

Tags: ‘ಮೇಕ್‘ಸುರಕ್ಷಿತ15162023202420256GAIamiroamironewsKSRTCnewsOTTಅಟೋಮೇಷನ್ಅಟೋಮೊಬೈಲ್ಅಂತರಾಷ್ಟ್ರೀಯಅತಿಶಯೋಕ್ತಿಗಳುಅಧ್ಯಯನಅಧ್ಯಾತ್ಮಅನಾಥಅನ್ನಕ್ಷೇತ್ರಅಪಘಾತಅಪರಾಧಅಪರಾಧಿಗಳುಅಪ್ಡೇಟ್ಅಪ್ಡೇಟ್‌ಗಳುಅಂಬರೀಷ್ಅಭಿಯಾನಅಭಿವೃದ್ದಿಅಭಿವೃದ್ಧಿಅಮೇರಿಕಾಅರಮನೆಅವಕಾಶಅವಶೇಷಗಳಅಹಿಂದಆಚರಣೆಆಂಡ್ರಾಯ್ಡ್ಆಧಾರಿತಆಧುನಿಕಆನ್‌ಲೈನ್ಆಪಲ್ಆಫೀಸ್ಆಯುಕ್ತಆಯುಷ್ಮಾನ್ಆರೋಗ್ಯಆರ್ಥಿಕಆರ್ಥಿಕತೆಆವಿಷ್ಕಾರಆಸಿಯನ್ಆಸ್ಪತ್ರೆಆಸ್ಪತ್ರೆಗಳುಆ್ಯಂಡ್ರಾಯ್ಡ್ಇಟಲಿಇಂಡಿಯಾಇನ್ಇಲಾಖೆಯಉಚಿತಉಡುಪಿಉತ್ತರಉತ್ಪನ್ನಗಳುಉತ್ಸವಉತ್ಸವಗಳುಉದ್ಯಮಶೀಲತೆಉದ್ಯೋಗಉನ್ನತಉಪಯೋಗಉಷ್ಣತೆಎಐಎಚ್‌ಎಂಜಿನಿಯರಿಂಗ್ಎನರ್ಜೀಎನ್‌ಇಪಿಎಲೆಎಲ್‌ಐಸಿಎಸ್ಟೇಟ್ಏರಿಕೆಐಪಿಎಲ್ಐಫೋನ್ಒಲಿಂಪಿಕ್ಸ್ಕದಳೇಕಾಯಿಕನಿಷ್ಠಕನ್ನಡಕನ್ನಡಿಗಕನ್ನಡಿಗರಕನ್ನಡೆಕಬಡ್ಡಿಕಂಬಳಕರ್ನಾಟಕಕರ್ನಾಟಕದಕರ್ನಾಟಕದಲ್ಲಿಕಲೆಕಲ್ಲಿನಕಾಂಗ್ರೆಸ್ಕಾನೂನುಕಾಯಿಲೆಕಾರ್ಖಾನೆಗಳುಕಾರ್ಮಿಕಕಾರ್ಮಿಕರಕಾರ್ಯಕರ್ತರಕಾರ್ಯಕ್ರಮಕೀಟಕುಖ್ಯಾತಕುಮಾರ್ಕುವೆಂಪುಕೃಷಿಕೃಷಿಯಲ್ಲಿಕೃಷ್ಣಕೆಎಎಸ್ಕೇಂದ್ರಗಳುಕೊಡಗುಕೊಡವಕೊರೋನಾಕೋವಿಡ್-19ಕೌಟುಂಬಿಕಕ್ರಮಕ್ರಿಕೆಟಿಗರುಕ್ರಿಕೆಟ್ಕ್ರೀಡೆಕ್ರೈಂಕ್ರೈಸ್ತಖರ್ಗೆಖಾತರಿಗಂಗಾಮ್ಮಗಡಿಭಾಗಗಣರಾಜ್ಯೋತ್ಸವಗದ್ದಿಗೆಗಾಳಿಗೀತೆಗಳುಗುತ್ತಿಗೆಗುಹಾಗೂಳಾಟಗೃಹಗೃಹಪಾಲನಾಗೋಕರ್ಣಗೋಧಿಗೋಧೂಳಿಗ್ಯಾಜೆಟ್ಗ್ಯಾಲರಿಗ್ರಹಣಗ್ರಾಮಾಭಿವೃದ್ಧಿಗ್ರಾಮೀಣಚಟುವಟಿಕೆಗಳುಚಂದ್ರಯಾನಚಳುವಳಿಚಾಟ್‌ಜಿಪಿಟಿಚಿಕ್ಕಮಗಳೂರುಚಿತ್ರಚಿತ್ರರಂಗಚೀನಾಚುನಾವಣಾಚುನಾವಣೆಚುನಾವಣೆಯಚೆಸ್ಜನಪ್ರತಿನಿಧಿಜಯಂತಿಜಲಜಲಚಕ್ರಜಾತಿ-ಪರಿಶಿಷ್ಟಜಾತ್ರೆಜಾತ್ರೆಗಳುಜಾನಪದಜಿ20ಜಿಡಿಎಸ್ಜಿಲ್ಲೆಜೀವನಜೀವನಶೈಲಿಜೈನಜೈವಿಕಜ್ಯೋತಿಷ್ಯಟಿಪ್ಸ್ಟೆನಿಸ್ಟ್ರ್ಯಾಫಿಕ್ಡಾ.ಡಿಡಿ.ಕೆ. ಶಿವಕುಮಾರ್ಡಿಜಿಟಲ್ಡಿಸಿಎಂಡ್ರೋನ್ತಂತ್ರಗಳುತಂತ್ರಜ್ಞಾನತಾಜಾತಾಣಗಳುತಾಂತ್ರಿಕತೆತಿದ್ದುಪಡಿತೀರತೀರ್ಥಕ್ಷೇತ್ರಗಳುತೀರ್ಪುತುಮಕೂರಿನತುಳುನಾಡತೋಟಗಾರಿಕೆಥೈಲಾಂಡ್ದಕ್ಷಿಣದರ್ಶನ್ದಲಿತದಸರಾದಾರಿದಿನದಿನಾಚರಣೆದಿವ್ಯಾಂಗದೀಪಾವಳಿದೀಪಿಕಾದೆಹಲಿದೇವಸ್ಥಾನಗಳುದೇವಾಲಯದೇವೇಗೌಡದೇಶದೊಡ್ಡಧರ್ಮಸ್ಥಳಧಾರವಾಡಧಾರ್ಮಿಕನಕ್ಷೆನಗರನದಿನದಿಗಳನವಚಿಂತನೆನವರಾತ್ರಿನವೀಕರಣನಾಡಹಬ್ಬನಿಯಂತ್ರಣನಿಯಮನಿರ್ಧಾರನಿರ್ವಹಣಾನಿರ್ವಹಣೆನೀತಿನೀರಾವರಿನೀರುನೆಲೆಯುನೇಮಕಾತಿನೈಸರ್ಗಿಕನ್ಯಾಯಾಲಯದಪಕ್ಷಪಂಗಡದಪತ್ತಿನಪದುಕೋಣéಪಯಣಪರಂಪರೆಪರಿಶಿಷ್ಟಪರಿಸರಪರೀಕ್ಷೆಪಾಠಗಳುಪಾಠ್ಯಕ್ರಮಪಾಂಡೆಪಾದಚಾರಿಪಾರ್ಷೆಪಾಲಿಸಿಪಿಂಚಣಿಪಿಯುಸಿಪುರಾತನಪೂಜೆಪೂನಂಪೊಲೀಸ್ಪೋಷಕಾಂಶಗಳುಪೌರಪ್ರಕರಣಗಳುಪ್ರಕೃತಿಪ್ರಗತಿಪ್ರಚಾರಪ್ರಜಾಸತ್ತಾತ್ಮಕಪ್ರತಿಭಟನೆಪ್ರತಿಭಟನೆಗಳುಪ್ರತಿಭಾನ್ವೇಷಣೆಪ್ರಧಾನಮಂತ್ರಿಪ್ರವಾಸಪ್ರವಾಸಿಪ್ರವಾಸೋದ್ಯಮಪ್ರವಾಹಪ್ರವೇಶಪ್ರಸಿದ್ಧಪ್ರಿಯಾಂಕಪ್ಲಾನಿಂಗ್ಪ್ಲಾನ್‌ಗಳುಫಲಿತಾಂಶಫೀಚರ್‌ಗಳುಫುಟ್‌ಬಾಲ್ಫೇಸ್‌ಬುಕ್ಫೋಟೋಬಜೆಟ್ಬಂಟರಬಂಡವಾಳಬದಲಾವಣೆಬದಲಾವಣೆಗಳುಬರಹಗಳುಬಸವಣ್ಣನಬಾಕ್ಸ್ಬಾಗಲಕೋಟೆಬಾಲಿವುಡ್ಬಿಜೆಪಿಬೀಜಬೆಂಗಳೂರುಬೆಟ್ಟಬೆಳಗಾವಿಬೆಳವಣಿಗೆಬೆಳೆಬೆಳೆತಂತ್ರಬೆಳೆಬಾಳಿಕೆಬೆಳ್ಳಿಗಿರಿರಂಗನಬ್ಯಾಂಕಿಂಗ್ಬ್ರಿಕ್ಸ್ಭಕ್ತಿಭದ್ರತಾಭಾರತಭಾರತೀಯಭಾರತ್ಭಾವಗೀತೆಗಳುಭೂಕಂಪಭೂಗೋಳಭೂಮಿಭ್ರಷ್ಟಾಚಾರಮಕ್ಕಳಮಂಗಳೂರಮಂಜುನಾಥಮಂಜುನಾಥ್ಮಟ್ಟದಮಠಮಠಗಳಮಂಡ್ಯದಲ್ಲಿಮತದಾರರುಮತ್ತುಮಧುಮೇಹಮಹತ್ವದಮಹಾಮಹಿಳಾಮಾನವನಮಾಪನಮಾರುಕಟ್ಟೆಮಾರ್ಗಮಾರ್ಗಗಳುಮಾಲಿನ್ಯಮಿಷನ್ಮೀಸಲುಮುಂಗಡಮುನ್ಸೂಚನೆಮುಂಬಯಿಮುಂಬೈಮುಸ್ಲಿಂಮೆಟಾವರ್ಸ್ಮೆಟ್ರೋಮೆಡಿಕಲ್ಮೇಲಿನಮೈಸೂರಿನಮೈಸೂರುಮೊಬೈಲ್ಮೋದಿಮೌನಯಕ್ಷಗಾನಯಶ್ಯುಎನ್‌ಒಯುಗಯುದ್ಧಯುವಯೋಗಯೋಜನೆಯೋಜನೆಗಳರಷ್ಯಾರಾಜಕೀಯರಾಜವಂಶರಾಜ್ಯರಾಜ್ಯೋತ್ಸವರಾತ್ರಿರಾಮಚಂದ್ರರಾಷ್ಟ್ರಪತಿರಾಷ್ಟ್ರೀಯರಿಜಿಸ್ಟೇಶನ್ರಿಯಲ್ರಿಷಭ್ರೆನ್ಯೂಬಲ್ರೈತರೈಲುರೈಲ್ವೆರೋಗರೋಗಗಳುರೋಬೋಟ್‌ಗಳುಲಸಿಕೆಲಿಂಗಲೋಕಸಭಾಲೋಕ್ಲೋನ್ವಚನಗಳುವನ್ಯಜೀವಿವಾಕಿಂಗ್ವಾಟ್ಸಾಪ್ವಾಣಿಜ್ಯವಾತಾವರಣದವಾಹನವಿಜಯನಗರವಿದೇಶವಿದೇಶಾಂಗವಿದೇಶಿವಿದ್ಯಾರ್ಥಿವಿಧಾನಸಭಾವಿಮರ್ಶೆವಿಮಾನಯಾನವಿಮೆವಿರುದ್ಧದವಿವಾದವಿಶೇಷವಿಶ್ವವಿಶ್ವಕಪ್ವಿಶ್ವಸಂಸ್ಥೆವೀಕ್ಷಣಾವೀರೇಂದ್ರವೃದ್ಧಾಪ್ಯವೆಬ್‌ಸೀರೀಸ್ವೆಬ್‌ಸ್ಟೋರಿವೇತನವೈದ್ಯಕೀಯವೈರಲ್ಶಂಕರಶಾಲೆಗಳಶಾಸ್ತ್ರೀಯಶಿಕ್ಷಕರಶಿಕ್ಷಣಶಿವಮೊಗ್ಗಶಿವರಾಜ್ಶುದ್ಧೀಕರಣಶೃಂಗಸಭೆಶೃಂಗೇರಿಶೆಟ್ಟಿಶೇರುಸಕಲೇಶಪುರಸಕ್ಕರೆಸಂಗೀತಸಂಗ್ರಹಸಂಘಟನೆಸಂಘಟನೆಗಳುಸಂಘರ್ಷಸಂಚಾರಸಂಚಾರಿಸಚಿವಸಂಪುಟಸಂಪ್ರದಾಯಗಳುಸಂಬಂಧಸಂಬಂಧಿಸಭೆಸಂಭ್ರಮಸಮಗ್ರಸಮಸ್ಯೆಗಳುಸಮಾನತೆಸಮುದಾಯಸಮುದಾಯದಸಮುದ್ರಸರಕಾರಿಸಂರಕ್ಷಣೆಸರ್ಕಾರಿಸವಯವಸಂವಹನಸಂಸ್ಕೃತಿಸಹಾಯಸಾಧನೆಸಾಂಪ್ರದಾಯಿಕಸಾಲಸಾಂಸ್ಕೃತಿಕಸಾಹಿತ್ಯಸಿಎಂಸಿಖ್ಸಿಟಿಸಿದ್ದರಾಮಯ್ಯಸಿನಿಮಾಸುದ್ದಿಸುಧಾರಣೆಸುರಕ್ಷತಾಸುರಕ್ಷತೆಸೂರ್ಯಸೆಕ್ಯುರಿಟಿಸೇವಾಸೇವೆಗಳುಸೈಬರ್ಸೌರಶಕ್ತಿಸ್ಟಾರ್ಟ್‌ಅಪ್ಸ್ಟಾರ್ಟ್‌ಅಪ್‌ಗಳುಸ್ಥಳಗಳುಸ್ಮಾರಕಗಳುಸ್ಮಾರ್ಟ್ಸ್ಯಾಂಡಲ್‌ವುಡ್ಸ್ವಚ್ಚಸ್ವಾತಂತ್ರ್ಯಸ್ವಾಮಿಸ್ವಾವಲಂಬನಹಕ್ಕುಹಕ್ಕುಗಳಹಕ್ಕುಗಳುಹಣಹಣಕಾಸುಹಂಪಿಹಬ್ಬಹಬ್ಬದಹರಿದಾಸಹವಾಮಾನಹವ್ಯಾಸಹಳ್ಳಿಗಳುಹಳ್ಳಿಯಹಾಕಿಹಾಲಿಡೇಹಾಲಿವುಡ್ಹಾಸನಹಾಸಿಗೆಹಾಸಿರಹಿಂದೂಹಿನ್ನಲೆಹಿಮಹಿಲ್ಸ್‌ಟೇಶನ್‌ಗಳುಹುದ್ದೆಗಳಹುಬ್ಬಳ್ಳಿ-ಧಾರವಾಡಹುಲಿವೇಶಹೂಡಿಕೆಹೃದಯಹೆಗ್ಗಡೆಹೆಪ್ಪಿಗೆಯಹೆಬ್ಬಾಳಮ್ಮಹೈಬ್ರೀಡ್ಹೈವೇಹೊಸಹೊಳೆಹಬ್ಬಹೋರಾಟಹೋರಾಟಗಳು

Leave a Reply Cancel reply

Your email address will not be published. Required fields are marked *

  • Trending
  • Comments
  • Latest

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಹುಬ್ಬಳ್ಳಿಯ ಪೋಲಿಸರ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡು…!

0

ಶಿಕ್ಷಕಿಯ ಸರ ಕದ್ದು ಪರಾರಿ..!

0

ಸರ್ಕಾರದ ಸ್ಥಿರತೆಗೆ ಭದ್ರ ಬುನಾದಿ, ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ಬಿಂಬ

June 30, 2025

ಕರ್ನಾಟಕದಲ್ಲಿ ಕೆಲಸದ ಸಮಯ 12 ಗಂಟೆಗಳಿಗೆ ವಿಸ್ತರಣೆ: ಹೊಸ ಕಾಯ್ದೆ ಪ್ರಸ್ತಾಪ

June 30, 2025

ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಗಿನ ನೀಡಿ ಗೌರವ ಸಮರ್ಪಣೆ

June 30, 2025

ಹಾಸನದಲ್ಲಿ ಹೃದಯಾಘಾತದಿಂದ ಮೂವರು ಸಾವು, 40 ದಿನಗಳಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿಕೆ

June 30, 2025

Recent News

ರಾಜ್ಯದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಕೌಂಟರ್‌ಗಳು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

June 25, 2025

ಮಾವು ಬೆಳೆಗಾರರ ನೆರವಿಗೆ ಧಾವಿಸಿ: ಕೇಂದ್ರ ಕೃಷಿ ಸಚಿವರಿಗೆ ಹೆಚ್.ಡಿ.ಕುಮಾರಸ್ವಾಮಿ ಪತ್ರ

June 25, 2025

ಪ್ರೊ. ದೊಡ್ಡ ರಂಗೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ:

June 25, 2025

ಇಸ್ರೇಲ್‌ನಿಂದ ಭಾರತೀಯರ ಸುರಕ್ಷಿತ ಆಗಮನ: ಆಪರೇಷನ್‌ ಸಿಂಧು ಯಶಸ್ವಿ

June 25, 2025
Google Play amiro news
DOWNLOAD NOW
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 AMIRO - Empowering Every Voice. Enriching Every Life.

  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 AMIRO - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error:
This website uses cookies. By continuing to use this website you are giving consent to cookies being used. Visit our Privacy and Cookie Policy.

Discover more from amiroNEWS

Subscribe now to keep reading and get access to the full archive.

Continue reading

%d