ಮುಂಬೈ, ಏ.18 (ಪಿಐಬಿ):
ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರ ತಯಾರಿಗೆ ಸಂಬಂಧಿಸಿದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾದ ಶ್ರೀ ಎಲ್. ಮುರುಗನ್ ಅವರು ಇಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ನೋಡಲ್ ಅಧಿಕಾರಿಗಳು ಭಾಗವಹಿಸಿದರು.
ವಿವಿಧ ಕ್ಷೇತ್ರಗಳ ಪ್ರಗತಿ ಚರ್ಚೆ
ಶೃಂಗಸಭೆಯ ನಾಲ್ಕು ಪ್ರಮುಖ ಸ್ತಂಭಗಳಾದ ಪ್ರಸಾರ ಮತ್ತು ಇನ್ಫೋಟೈನ್ಮೆಂಟ್, ಎವಿಜಿಸಿ-ಎಕ್ಸ್ಆರ್, ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ, ಮತ್ತು ಚಲನಚಿತ್ರ ವಲಯಗಳ ಅಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪ್ರಗತಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ವೇವ್ಸ್ ಬಜಾರ್, ವೇವೆಕ್ಸ್, ಭಾರತ್ ಪೆವಿಲಿಯನ್, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್ ಸೇರಿದಂತೆ ಹಲವು ಉಪಕ್ರಮಗಳ ಸಿದ್ಧತೆಗಳ ಬಗ್ಗೆ ಮೌಲ್ಯಮಾಪನ ನಡೆಯಿತು. ನೋಡಲ್ ಅಧಿಕಾರಿಗಳು ತಮ್ಮ ವಿಭಾಗದ ತಯಾರಿಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಸಚಿವರು
ಶೃಂಗಸಭೆಯ ಸ್ಥಳದಲ್ಲಿ ಶ್ರೀ ಎಲ್. ಮುರುಗನ್ ಅವರು ವಾಸ್ತವದ ತಳಮಟ್ಟದ ಸಿದ್ಧತೆಗಳನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಸರಿಯಾಗಿ ತಯಾರಿ ನಡೆಯುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೇವ್ಸ್ ಕುರಿತು
ವೇವ್ಸ್ 2025 ಶೃಂಗಸಭೆ ಮಾಧ್ಯಮ ಮತ್ತು ಮನರಂಜನಾ (ಎಂ & ಇ) ಕ್ಷೇತ್ರದ ಮಹತ್ವದ ಗುರಿಯಾಗಿ ದೇಶದಲ್ಲಿ ಮೊದಲ ಬಾರಿಗೆ ಏರ್ಪಡಿಸಲಾಗಿದೆ. ಈ ಶೃಂಗಸಭೆ ಮೇ 1ರಿಂದ 4ರ ವರೆಗೆ ಮಹಾರಾಷ್ಟ್ರದ ಮುಂಬೈಯಲ್ಲಿ ನಡೆಯಲಿದೆ. ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಸೃಷ್ಟಿಕರ್ತರು ಹಾಗೂ ನಾವೀನ್ಯಕಾರರು ಈ ವೇದಿಕೆಯಲ್ಲಿ ಸಂಪರ್ಕ ಸಾಧಿಸಲು, ಸಹಕರಿಸಲು, ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ದೇಶದ ಸೃಜನಶೀಲ ಶಕ್ತಿಗೆ ಉತ್ತೇಜನ ನೀಡಲು ಅವಕಾಶ ಸಿಗಲಿದೆ.
ಪ್ರಸಾರ, ಮುದ್ರಣ, ದೂರದರ್ಶನ, ರೇಡಿಯೋ, ಚಲನಚಿತ್ರ, ಅನಿಮೇಷನ್, ಗೇಮಿಂಗ್, ಕಾಮಿಕ್ಸ್, ಸಂಗೀತ, ಜಾಹೀರಾತು, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ, ಎಐ, ಎಆರ್, ವಿಆರ್ ಮತ್ತು ಎಕ್ಸ್ಆರ್ ಸೇರಿದಂತೆ ಅನೇಕ ತಂತ್ರಜ್ಞಾನ ಕ್ಷೇತ್ರಗಳು ಈ ಶೃಂಗಸಭೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
ನೋಂದಾಯನೆ ಆರಂಭ
ವೇವ್ಸ್ನಲ್ಲಿ ಭಾಗವಹಿಸಲು ಈಗಲೇ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಿಐಬಿ ಅಧಿಕೃತ ವೆಬ್ಸೈಟ್ ಅಥವಾ ವೇವ್ಸ್ ಶೃಂಗಸಭೆಯ ಪೋರ್ಟಲ್ಗೆ ಭೇಟಿನೀಡಬಹುದು.
Discover more from amiroNEWS
Subscribe to get the latest posts sent to your email.