ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ (ಮೈಸೂರು ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.
ನ್ಯಾಯಾಲಯದಲ್ಲಿ ಪಕ್ಷ-ಪ್ರತಿಪಕ್ಷ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಆದೇಶವನ್ನು ಎಪ್ರಿಲ್ 3ಕ್ಕೆ ಕಾಯ್ದಿರಿಸಿದ್ದಾರೆ.
ಈ ಪ್ರಕರಣವು ಮುಖ್ಯಮಂತ್ರಿ ವಿರುದ್ಧ ಹೂಡಲಾದ ಆರೋಪಗಳು ಮತ್ತು ತನಿಖಾ ಸಂಸ್ಥೆಯ ಬಿ.ರಿಪೋರ್ಟ್ ವಿಚಾರವಾಗಿ ನಿರ್ಧಾರಾತ್ಮಕ ಹಂತಕ್ಕೆ ತಲುಪಿದಂತಾಗಿದೆ. ಆದೇಶದ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.