ಬೆಂಗಳೂರು: ಮಾಜಿ ಸಚಿವ ಮುನಿರತ್ನ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಸೀರೆ ಎಳೆದ ದೌರ್ಜನ್ಯ ಪ್ರಕರಣ ಸೇರಿದಂತೆ ಹಲವು ದೂರುಗಳು ದಾಖಲಾಗಿದ್ದವು.
ನಂದಿನಿಲೇಔಟ್ ಪ್ರಕರಣದಲ್ಲಿ ದೂರು ದಾಖಲಾದರೂ, ಬಳಿಕ ತನಿಖೆ ನಡೆಸಿದ ಎಸ್ಐಟಿ ಬಿ–ರಿಪೋರ್ಟ್ ಸಲ್ಲಿಸಿದೆ. ಇದೇ ರೀತಿಯಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಬೆಂಕಿ ಹಚ್ಚಿ ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿಯೂ ಸಹ ಎಸ್ಐಟಿ ಬಿ–ರಿಪೋರ್ಟ್ ಸಲ್ಲಿಸಿದೆ.
ಮುನಿರತ್ನ ವಿರುದ್ಧ ಒಟ್ಟು ಆರು ಪ್ರಕರಣಗಳಿದ್ದು, ಅವುಗಳಲ್ಲಿ ಮೂರಕ್ಕೂ ಈಗಾಗಲೇ ಬಿ–ರಿಪೋರ್ಟ್ ಸಲ್ಲಿಕೆಯಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.