ಮೈಸೂರು: ಮೈಸೂರಿನ ಬನ್ನಿಮಂಟಪದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಯ ನೂತನ ಬಸ್ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿತು. ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿರುವ ಈ ಬಸ್ ನಿಲ್ದಾಣವು ಪ್ರಯಾಣಿಕರಿಗೆ ಅತ್ಯಾಧುನಿಕ ಸೇವೆಗಳನ್ನು ಒದಗಿಸಲಿದೆ.
ಪ್ರಮುಖ ವಿವರಗಳು:
- ಭೂ ವಿಸ್ತೀರ್ಣ: 14 ಎಕರೆ
- ಒಟ್ಟು ನಿರ್ಮಿತ ವಿಸ್ತೀರ್ಣ: 4 ಲಕ್ಷ ಚದರ ಅಡಿ
- ನೆಲಮಾಳಿಗೆ: 1.13 ಲಕ್ಷ ಚದರ ಅಡಿ
- ನೆಲಮಹಡಿ: 1.97 ಲಕ್ಷ ಚದರ ಅಡಿ
- ಮೊದಲ ಮಹಡಿ: 0.91 ಲಕ್ಷ ಚದರ ಅಡಿ
- ಅಂದಾಜು ವೆಚ್ಚ: ರೂ. 120 ಕೋಟಿ
ಸೌಲಭ್ಯಗಳು:
- ನೆಲಮಾಳಿಗೆ:
- 300 ಕಾರುಗಳಿಗೆ ಮತ್ತು 4,000 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ.
- ನೆಲಮಹಡಿ (ಬಸ್ ಟರ್ಮಿನಲ್):
- 75 ಬಸ್ ಬೇಗಳು
- 35 ಐಡಲ್ ಬಸ್ ಪಾರ್ಕಿಂಗ್
- ಪುರುಷರು, ಮಹಿಳೆಯರು ಮತ್ತು ವಿಶೇಷ ಚೇತನರಿಗಾಗಿ 3 ವಾಶ್‌ರೂಮ್ ಬ್ಲಾಕ್‌ಗಳು
- 4 ಲಿಫ್ಟ್‌ಗಳು
- ಮಕ್ಕಳಿಗೆ ಹಾಲುಣಿಸುವ ಕೊಠಡಿ
- ಟಿಕೆಟ್ ಕೌಂಟರ್‌ಗಳು
- ರಿಫ್ರೆಶ್‌ಮೆಂಟ್ ಕೇಂದ್ರಗಳು
- ಮಹಿಳೆಯರಿಗೆ ವಿಶ್ರಾಂತಿ ಕೊಠಡಿ
- ಪ್ರಯಾಣಿಕರಿಗೆ ಆಸನ ವ್ಯವಸ್ಥೆ
- ಕುಡಿಯುವ ನೀರಿನ ವ್ಯವಸ್ಥೆ
- ಪ್ರಯಾಣಿಕರ ಕಾಯುವ ಕೊಠಡಿ
- ವಾಣಿಜ್ಯ ಕೇಂದ್ರಗಳು
- ಲಗೇಜ್ ಕೊಠಡಿ
- ಆಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್
- ಮೊದಲ ಮಹಡಿ:
- ಕಚೇರಿ ಸ್ಥಳ
- ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ
ಈ ಯೋಜನೆಯು ಮೈಸೂರಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಿದ್ದು, ಪ್ರಯಾಣಿಕರಿಗೆ ಸೌಕರ್ಯಯುತ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯ ಮಹತ್ವದ ಹೆಜ್ಜೆಯಾಗಿದೆ.