ಬೆಂಗಳೂರು: ರನ್ಯಾ ರಾವ್ ಗೋಲ್ಡ್ ವಂಚನೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೃಹಸಚಿವ ಜಿ. ಪರಮೇಶ್ವರ್ ಅವರನ್ನು ಸಭೆಗೆ ಆಹ್ವಾನಿಸಿದ್ದಾರೆ. ಈ ಕುರಿತು ಪ್ರಮುಖ ಚರ್ಚೆ ವಿಧಾನಸಭೆಯ ಮೊಗಸಾಲೆಯಲ್ಲಿರುವ ಸಿಎಂ ಕೊಠಡಿಯಲ್ಲಿ ನಡೆದಿದ್ದು, ಪ್ರೋಟೋಕಾಲ್ ಉಲ್ಲಂಘನೆ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಸಿಎಂ ತಮ್ಮ ಕೊಠಡಿಗೆ ಗೃಹಸಚಿವರನ್ನು ಕರೆಸಿಕೊಂಡಿದ್ದು, ಈ ಸಂಬಂಧ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳಲು ಮಾತುಕತೆ ನಡೆದಿದೆ ಎನ್ನಲಾಗಿದೆ. ಪರಮೇಶ್ವರ್ ಅವರೊಂದಿಗೆ ಸಿಎಂ ಚರ್ಚೆ ನಡೆಸಿರುವುದರಿಂದ ಈ ಪ್ರಕರಣಕ್ಕೆ ಹೆಚ್ಚಿನ ತೀವ್ರತೆ ಸಿಗುವ ಸಾಧ್ಯತೆಯಿದೆ.
ಈ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದ್ದು, ಸರಕಾರದ ಮುಂದಿನ ನಿರ್ಧಾರಗಳತ್ತ ನಿಗಾ ಹರಿಸಲಾಗುತ್ತಿದೆ.