ಬೆಂಗಳೂರು: ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹೋಟ್ ಅವರು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಈ ಅಧಿವೇಶನದ ಭಾಷಣದ ಅಧಿಕೃತ ಪ್ರತಿಗಳನ್ನು ಮಾಧ್ಯಮ ಪ್ರತಿನಿಧಿಗಳು ಭಾಷಣ ಪ್ರಾರಂಭವಾದ ಬಳಿಕ ಪಡೆಯಬಹುದು.

ಭಾಷಣದ ಪ್ರತಿಗಳನ್ನು ವಿಧಾನಸಭೆಯ ವಾಚನಾಲಯ ಹಾಗೂ ಅಧಿವೇಶನದ ಮಾಧ್ಯಮ ಗ್ಯಾಲರಿಯಲ್ಲಿ ವಿತರಿಸಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಈ ಸುಲಭ ವಿತರಣಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿವೇಶನದ ಅಧಿಕಾರಿಗಳು ತಿಳಿಸಿದ್ದಾರೆ.