ಬೆಂಗಳೂರು: ಕರ್ನಾಟಕ ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆರು ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಇಬ್ಬರು ಅಧಿಕಾರಿಗಳು 2025ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಪದಕಕ್ಕೆ, ಪಾತ್ರರಾಗಿದ್ದಾರೆ.
ಕರ್ನಾಟಕ ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆಯ ವಿಜಯನಗರ ಜಿಲ್ಲೆಯ ಗೃಹ ರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್ ಗಿರೀಶ ಎಸ್ ಎಂ., ಮೈಸೂರು ಜಿಲ್ಲೆಯ ಗೃಹ ರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್
ನಿಂಗರಾಜು ಪಿ. ಹಾಗೂ ಕಂಪೆನಿ ಕ್ವಾಟರ್ ಮಾಸ್ಟರ್ ಸೆರ್‌ಗಂಟ್ ಬಾಬುರಾವ್ ಬಿ. ಇ.,ಬೆಂಗಳೂರಿನ ನಾಗರಿಕ ರಕ್ಷಣೆಯ ಆಫೀಸರ್ ಕಮಾಂಡಿಂಗ್
ಟ್ರೈನಿಂಗ್ ಸರ್ವೀಸ್ ನ . ಡಾ. ಮ್ಯಾಥ್ಯೂ ವರ್ಗೀಸ್ ಹಾಗೂ ಡಿವೀಜನಲ್ ವಾರ್ಡನ್ ಗಳಾದ ಇಸ್ಮಾಯಿಲ್ ಮೊಹಮ್ಮದ್ ಮಿರ್ಜಾ ಮತ್ತು ಮೊಹಮ್ಮದ್ ಅಜೀಮುಲ್ಲಾ ಅವರು ರಾಷ್ಟ್ರಪತಿಗಳ ಪದಕಕ್ಕೆ ಪಾತ್ರರಾಗಿದ್ದಾರೆ.
ಅದೇ ರೀತಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಅಧಿಕಾರಿಗಳಾದ ಉಪನಿರ್ದೇಶಕರಾದ (ಅಗ್ನಿ ನಿಯಂತ್ರಣ) ಡಾ.ಯೂನಸ್ ಅಲಿ ಕೌಸರ್ ಹಾಗೂ ಉಪನಿರ್ದೇಶಕರಾದ (ಆಡಳಿತ) ತಿಪ್ಪೇಸ್ವಾಮಿ.ಜಿ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.