ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯವರ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ‘ರೈನಾ-ಡಾ ಪಿಮೆಂಟಾ’ (ಕಾಳುಮೆಣಸಿನ ರಾಣಿ) ಎಂದೇ ಖ್ಯಾತರಾದ ರಾಣಿ ಚೆನ್ನಭೈರಾದೇವಿ, ತಮ್ಮ ರಾಜ್ಯವನ್ನು 54 ವರ್ಷಗಳ ಕಾಲ ಆಕ್ರಮಣಗಳಿಂದ ಯಶಸ್ವಿಯಾಗಿ ರಕ್ಷಿಸಿದ ಶಕ್ತಿಶಾಲಿ ಆಡಳಿತಗಾರ್ತಿಯಾಗಿದ್ದರು.
ಗೇರುಸೊಪ್ಪೆಯ ಈ ಮಹಾನ್ ರಾಣಿಯ ಸಾಧನೆಯನ್ನು ಗೌರವಿಸುವ ಸಲುವಾಗಿ ಈ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ರಾಣಿಯವರ ಧೈರ್ಯ, ಆಡಳಿತ ಕೌಶಲ ಮತ್ತು ರಾಜ್ಯದ ಸಂರಕ್ಷಣೆಯಲ್ಲಿ ಅವರು ತೋರಿದ ಅಸಾಧಾರಣ ಸಾಮರ್ಥ್ಯವನ್ನು ಶ್ಲಾಘಿಸಿದರು.
ಈ ಸಂದರ್ಭವು ಭಾರತದ ಇತಿಹಾಸದಲ್ಲಿ ಮಹಿಳಾ ಶಕ್ತಿಯ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.