ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆಯನ್ನು ಭಾರತಿನಗರ ಪೊಲೀಸ್ ಠಾಣೆಯಿಂದ ಸಿಐಡಿಗೆ ವರ್ಗಾಯಿಸಲಾಗಿದೆ. ಈ ಕುರಿತು ಡಿಜಿ-ಐಜಿ ಸಲೀಂ ಅವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಇದುವರೆಗೆ ಎಸಿಪಿ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ನಡೆಯುತ್ತಿದ್ದ ತನಿಖೆಯನ್ನು ಇನ್ನು ಮುಂದೆ ಸಿಐಡಿ ವಿಭಾಗವು ಮುಂದುವರಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸಿಐಡಿಗೆ ಒಪ್ಪಿಸಲು ತಯಾರಿ ನಡೆಯುತ್ತಿದೆ.
ಬೈರತಿ ಬಸವರಾಜ್ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದು, ಇನ್ನು ಮುಂದೆ ಸಿಐಡಿ ಮುಂದೆ ಹಾಜರಾಗಬೇಕಾಗಿದೆ. ಈ ವರ್ಗಾವಣೆಯಿಂದ ಪ್ರಕರಣದ ತನಿಖೆಗೆ ಹೊಸ ದಿಕ್ಕು ದೊರಕುವ ನಿರೀಕ್ಷೆಯಿದೆ.