ಬೆಂಗಳೂರು: ವಾಲ್ಮೀಕಿಯ ರಾಮನ ಕುರಿತು ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಿ. ಮಹದೇವಪ್ಪಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಯೊಂದು ಗಮನ ಸೆಳೆದಿದೆ.
ಒಬ್ಬ ಟ್ವೀಟಿಗ ಮಹದೇವಪ್ಪಗೆ ಉದ್ದೇಶಿಸಿ, “ಕನ್ನಡಿಗರು ಅನವಶ್ಯಕ ಚರ್ಚೆಗಳಿಂದ ಕಂಗೆಟ್ಟು ಹೋಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರರ ಹೆಸರಿನಲ್ಲಿ ರಾಜಕೀಯ ಮಾಡದೆ, ಅವರ ಹಾದಿ ಅನುಸರಿಸಿ ಜನಸೇವೆ ಮಾಡುವುದು ನಿಜವಾದ ಗೌರವ” ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ವಾಲ್ಮೀಕಿಯ ರಾಮನ ಕುರಿತು ಚರ್ಚೆ ಮಾಡುವುದಕ್ಕಿಂತ “ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಮತ್ತು ಅದರಿಂದ ಸಮಾಜಕ್ಕೆ ಆಗಿರುವ ಅನ್ಯಾಯ ಕುರಿತು ಚರ್ಚೆ ಮಾಡುವುದು ಉತ್ತಮ” ಎಂಬ ಮಾತು ಸಹ ಕೇಳಿ ಬಂದಿದೆ.
ಈ ಟ್ವೀಟ್ ಕಾಂಗ್ರೆಸ್ ಸರ್ಕಾರದ ನೀತಿಯ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಡುತ್ತದೆಯಾ? ಅಥವಾ ಇದು ರಾಜಕೀಯ ಆರೋಪ-ಪ್ರತ್ಯಾರೋಪಗಳ ಸರಣಿಯ ಮತ್ತೊಂದು ಕೊಂಡಿಯೇ ಎಂಬುದನ್ನು ನೋಡಬೇಕಾಗಿದೆ.