ಬೆಂಗಳೂರು,
ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ವಿರುದ್ಧ ಕನ್ನಡಿಗ ವಿಕಾಸ್ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ ಎಫ್‌ಐಆರ್ ದಾಖಲಾಗಿದ್ದು, ಈ ಘಟನೆ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೈಯಪ್ಪನಹಳ್ಳಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಏರ್ ಫೋರ್ಸ್ ಅಧಿಕಾರಿಗಳು ಪೊಲೀಸರು ಬಳಿ ತನಿಖಾ ಮಾಹಿತಿ ಪಡೆದು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಹೇಗೆ ನಡೆದಿದೆ?
ಎಪ್ರಿಲ್ 22 ರಂದು ಬೆಳಗ್ಗೆ 6:20ರ ಸುಮಾರಿಗೆ ಡಿಆರ್‌ಡಿಒ ಕಡೆಯಿಂದ ಹಳೆ ಮದ್ರಾಸ್ ರಸ್ತೆಯ ಕಡೆಗೆ ಹೋಗುತ್ತಿದ್ದ ವಿಂಗ್ ಕಮಾಂಡರ್ ಬೋಸ್ ಅವರ ಕಾರಿಗೆ ವಿಕಾಸ್ ಎಂಬ ಯುವಕನು ಚಲಾಯಿಸುತ್ತಿದ್ದ ಬೈಕ್ ಟಚ್ ಆಗಿದೆ. ಈ ವೇಳೆ ಕಾರಿನಲ್ಲಿ ಇದ್ದ ವಿಂಗ್ ಕಮಾಂಡರ್ ಪತ್ನಿ ಕೈಸನ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ವಿಕಾಸ್ ತಮ್ಮ ಬೈಕ್ ಅನ್ನು ಕಾರಿನ ಮುಂದಿನ ಭಾಗದಲ್ಲಿ ಅಡ್ಡಗೊಳಿಸಿದ್ದ. ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ಬೋಸ್ ನೇರವಾಗಿ ಬೈಕ್ ತಳ್ಳಲು ಹೋಗಿದ್ದು, ವಿಕಾಸ್ ಕೆಳಗೆ ಬಿದ್ದು ಹಾನಿಯಾಗಿದ್ದಾನೆ.
ಅದರ ನಂತರ ವಿಕಾಸ್ ಬೆನ್ನಿನಿಂದ ಬಂದು ಬೋಸ್ ತಲೆಗೆ ಹೊಡೆದಿದ್ದಾನೆ ಎಂಬ ಮಾಹಿತಿ ಇದೆ. ಬಳಿಕ ಇಬ್ಬರೂ ಪರಸ್ಪರ ಹಲ್ಲೆ ನಡೆಸಿದಾಗ ವಿಕಾಸ್ ಕೈಯಲ್ಲಿದ್ದ ಕೀಯು ಬೋಸ್ ಮುಖಕ್ಕೆ ತಾಗಿ ಗಾಯವಾಗಿದ್ದು, ಮೊಬೈಲ್ ಹಾಗೂ ಕೀ ನೆಲಕ್ಕೆ ಬಿದ್ದಿದೆ. ಬೋಸ್ ಈ ವೇಳೆ ವಿಕಾಸ್‌ನ ಮೊಬೈಲ್ ಕೈ ಕಿತ್ತೆಸೆದು ಥಳಿಸಿದ ಆರೋಪವಿದೆ.
ವಿಕಾಸ್ ತಾಯಿ ಹಾಗೂ ವಿಕಾಸ್ ಪ್ರತಿಕ್ರಿಯೆ:
ಹಲ್ಲೆಗೆ ಗುರಿಯಾದ ವಿಕಾಸ್ ತಾಯಿ, “ಒಬ್ಬ ಸೇನಾ ಅಧಿಕಾರಿಯಾಗಿ ಬೋಸ್ ಇಂತಹ ವರ್ತನೆ ತೋರಿದ್ರೆ ಎಷ್ಟೊಂದು ಲಜ್ಜೆಕರ. ನಾವು ದೊಡ್ಡ ವಿಷಯ ಮಾಡದೇ ಮನೆಗೆ ಬಂದ್ರು, ಆದರೆ ಅವರು ಸಮಾಧಾನದಿಂದ ಬಿಡುತ್ತಿಲ್ಲ. ನಮಗೆ ನ್ಯಾಯ ಕೊಡಬೇಕು” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿಕಾಸ್ ತನ್ನ ವಿಡಿಯೋ ಮೂಲಕ, “ನನ್ನ ಹಕ್ಕಿಗಾಗಿ ನಾನು ಹೋರಾಡ್ತೀನಿ. ಎಲ್ಲ ಕನ್ನಡ ಮಾಧ್ಯಮ, ಸಂಘಟನೆಗಳು, ಪೊಲೀಸ್ ಇಲಾಖೆ, ಮುಖ್ಯಮಂತ್ರಿಗಳಿಗೆ ಧನ್ಯವಾದ. ನನ್ನ ಕೆಲಸದ ಮೇಲೆ ಪರಿಣಾಮ ಬಾರದಂತೆ ನೋಡಿಕೊಳ್ಳಲು ಕಮಿಷನರ್ ಭರವಸೆ ನೀಡಿದ್ದಾರೆ” ಎಂದಿದ್ದಾರೆ.
ಆಕ್ರೋಶ ಹಾಗೂ ಪ್ರತಿಭಟನೆ:
ಕನ್ನಡ ಪರ ಹೋರಾಟಗಾರರು ಘಟನೆಯ ವಿರೋಧವಾಗಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಹಿನ್ನಿಯ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯನ್ನು ರೂಪೇಶ್ ರಾಜಣ್ಣ ನೇತೃತ್ವದಲ್ಲಿ ನಡಿಸಿದರು.
ಪೋಲೀಸರು ತೀವ್ರ ತನಿಖೆ:
ಪೋಲೀಸರು ಈಗಾಗಲೇ ವಿಂಗ್ ಕಮಾಂಡರ್ ಬೋಸ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಅವರನ್ನು ಸ್ಟೇಷನ್‌ಬೆಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ಮುಂದುವರಿದಿದ್ದು, ಬೇಗನೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ತ್ವರಿತ ಕ್ರಮ:
ಘಟನೆಯ ಮಹತ್ವತೆಯನ್ನು ಗಮನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಅಧಿಕಾರಿಗಳ ತಂಡಗಳನ್ನು ನಿಯೋಜಿಸಿದ್ದಾರೆ. ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ನೇತೃತ್ವದಲ್ಲಿ ಒಂದು ತಂಡವನ್ನು ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಇನ್ನೊಂದು ತನಿಖಾ ತಂಡವನ್ನು ನಿಯೋಜಿಸಿದ್ದಾರೆ.
ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ವಿರುದ್ಧದ ಪ್ರಕರಣದ ಕುರಿತು ರಾಜ್ಯ ಸರ್ಕಾರ ತೀವ್ರ ಗಮನ ಹರಿಸಿದ್ದು, ನ್ಯಾಯ ಪ್ರಕ್ರಿಯೆ ಬಗ್ಗೆ ಎಲ್ಲ ಕನ್ನಡಿಗರು ಕಾದುನೋಡುತ್ತಿದ್ದಾರೆ.