ಬೆಂಗಳೂರು: ವಿಶ್ವ ಹಿಂದೂ ಪರಿಷದ್ – ಕರ್ನಾಟಕ ಇಲಾಖೆ ಆಯೋಜಿಸಿದ ಯುವ ಅಭಿಯಾನ “ಇನ್ಸಪೈರಿಂಗ್ ಯೂತ್” ಕಾರ್ಯಕ್ರಮವನ್ನು ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ರಾಷ್ಟ್ರೀಯ ಉಪಾಧ್ಯಕ್ಷ ಮೋಹನ್ ಮಂಗ್ನಾನಿ, ಪದ್ಮಶ್ರೀ ಪುರಸ್ಕೃತ ಹಾಗೂ ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ದೀಪಕ್ ರಾಜಗೋಪಾಲ್, ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಮತ್ತು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಇವರೂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಉದ್ದೇಶ ಯುವಶಕ್ತಿಯನ್ನು ಪ್ರೇರೇಪಿಸುವುದಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕ-ಯುವತಿಯರು ದೇಶಸೇವಾ ಪರಿಕಲ್ಪನೆ, ಸಾಮಾಜಿಕ ಒಡಕು, ರಾಷ್ಟ್ರ ನಿರ್ಮಾಣದ ಮಹತ್ವ ಮತ್ತು ಆತ್ಮನಿರ್ಭರತೆ ಕುರಿತು ಮಾಹಿತಿಯನ್ನು ಪಡೆದುಕೊಂಡರು. ವೇದಿಕೆಯ ಮೇಲೆ ನಡೆದ ಚರ್ಚೆಗಳಲ್ಲಿ ವಿದೇಶಿ ಸಂಸ್ಕೃತಿ ಮತ್ತು ಆಧುನಿಕ ಯುಗದ ಸವಾಲುಗಳ ಕುರಿತು ವಿವರವಾಗಿ ಮಾತಾಡಿದರು. ಮಿಲಿಂದ್ ಪರಾಂಡೆ ಮತ್ತು ಇತರ ನಾಯಕರ ಸ್ಪಷ್ಟ ಮತ್ತು ಉತ್ಸಾಹದಾಯಕ ಮಾತುಗಳು, ಭಾಗವಹಿಸಿದ ಯುವಕರಲ್ಲಿ ಹೊಸ ಚೇತನ ಮೂಡಿಸಿವೆ.
ಈ ಕಾರ್ಯಕ್ರಮವು ಸಮಾಜದ ಹಾಗೂ ಯುವಕರ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು, ಸಂಘಟನೆ ಮತ್ತು ಪ್ರೇರಣೆಯ ಮೂಲಕ ಯುವ ಪೀಳಿಗೆಯ ಮುಂದಿನ ಬೆಳವಣಿಗೆಯನ್ನು ಸಹಕಾರದಿಂದ ಪ್ರೋತ್ಸಾಹಿಸುತ್ತದೆ.