ಬೆಂಗಳೂರು: ರಾಜ್ಯ ಸರ್ಕಾರವು ವರ್ಷಕ್ಕೆ ಮೂರು ದಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಿದ್ದು, ಇದಕ್ಕಾಗಿ ₹25 ಕೋಟಿ ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಗುರುವಾರ ಬ್ರಿಗೇಡ್ ಫೌಂಡೇಶನ್‌ನಿಂದ ನವೀಕರಣಗೊಂಡ ವೆಂಕಟಪ್ಪ ಆರ್ಟ್ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಡಿಸೆಂಬರ್ ಕೊನೆಯ ವಾರದಲ್ಲಿ ರಜಾದಿನಗಳು ಹೆಚ್ಚಿರುವ ಕಾರಣ, ಈ ಸ್ಪರ್ಧೆಯನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಒಂದು ವಾರದೊಳಗೆ ರೂಪುರೇಷೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.
“ಯುವ ಪೀಳಿಗೆಗೆ ನಮ್ಮ ಇತಿಹಾಸದ ಅರಿವು ಮೂಡಿಸಲು ವಿಧಾನಸೌಧಕ್ಕೆ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಚಿತ್ರಸಂತೆ, ಪುಸ್ತಕ ಮೇಳೆಗಳನ್ನು ಆಯೋಜಿಸುವ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ” ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧೆ ಆಯೋಜಿಸಿದರೆ 30-40 ಸಾವಿರ ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದ ಅವರು, “ಮೊದಲು ಶಾಲೆಗಳ ನಡುವೆ ಸ್ಪರ್ಧೆ ನಡೆಸಿ, ನಂತರ ಅಂತಿಮ ಸ್ಪರ್ಧೆ ಆಯೋಜಿಸುವ ಬಗ್ಗೆ ಯೋಚಿಸಲಾಗುವುದು. ಕಲಾವಿದರು ಮತ್ತು ಕಲಾಸಕ್ತರು ಈ ಕುರಿತು ಸಲಹೆ ನೀಡಬೇಕು” ಎಂದು ಕೋರಿದರು.
“ಕಲೆ ಸಮಾಜಕ್ಕಾಗಿರಬೇಕು, ಕೇವಲ ಕಲೆಗಾಗಿ ಅಲ್ಲ. ವೆಂಕಟಪ್ಪ ಆರ್ಟ್ ಗ್ಯಾಲರಿ ಸರ್ಕಾರದ ಆಸ್ತಿಯಲ್ಲ, ಸಮಾಜದ ಆಸ್ತಿಯಾಗಿದೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆ ಉಳಿಸಿಕೊಂಡು ಹೋಗಬೇಕು” ಎಂದರು.

ಕಲೆಯ ಮಹತ್ವವನ್ನು ಒತ್ತಿ ಹೇಳಿದ ಶಿವಕುಮಾರ್, “ಕಲೆ ಪ್ರಪಂಚವನ್ನು ಉಳಿಸುತ್ತದೆ. ಕಲ್ಪನೆ ಜ್ಞಾನಕ್ಕಿಂತ ದೊಡ್ಡದು ಎಂದು ಹಿರಿಯರು ಹೇಳಿದ್ದಾರೆ. ಕಲೆಯನ್ನು ಕಣ್ಣಿಂದ ನೋಡಿದಾಗ ಮಾತ್ರ ಅದರ ಆಳವನ್ನು ಅನುಭವಿಸಬಹುದು. ಕಲೆಯ ಉಳಿವಿಗೆ ಪ್ರವಾಸೋದ್ಯಮ ಬೆಳೆಯಬೇಕು” ಎಂದರು.
ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದ ಅವರು, “ನಾನು ಬೇಲೂರು, ಹಳೇಬೀಡು, ಹೈದರಾಬಾದ್‌ನ ಸಾಲಾರ್ ಜಂಗ್ ಮ್ಯೂಸಿಯಂಗೆ ಭೇಟಿ ನೀಡಿದ್ದೆ. ಆಗ ನಮ್ಮ ಊರಿನಲ್ಲಿ ಇಂತಹ ಮ್ಯೂಸಿಯಂ ಇಲ್ಲವೇ ಎಂದು ಅಧ್ಯಾಪಕರನ್ನು ಕೇಳಿದ್ದೆ. ನಂತರ ಅವರು ನನ್ನನ್ನು ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಕರೆತಂದಿದ್ದರು” ಎಂದರು.
ಬೆಂಗಳೂರಿನ ಸಂಚಾರ ತೊಂದರೆಗೊಳಗಾಗದಿರಲು ಕೈಗೊಂಡ ಕ್ರಮಗಳನ್ನು ತಿಳಿಸಿದ ಶಿವಕುಮಾರ್, “ಟನಲ್ ರಸ್ತೆ, ಫ್ಲಿಒೕವರ್, ಮೆಟ್ರೋ ಸೇರಿ ಹಲವು ಯೋಜನೆಗಳ ರೂಪರೇಷೆ ತಯಾರಾಗಿದೆ. ಇದು ಒಂದೇ ದಿನದಲ್ಲಿ ಸಾಧ್ಯವಾಗುವ ಕೆಲಸವಲ್ಲ, ಆದರೆ ಪ್ರಯತ್ನ ಮುಂದುವರಿಯುತ್ತದೆ” ಎಂದರು.
ಬ್ರಿಗೇಡ್ ಫೌಂಡೇಶನ್‌ನ ಕೊಡುಗೆಯನ್ನು ಶ್ಲಾಘಿಸಿದ ಅವರು, “ಸಿಎಸ್‌ಆರ್ ನಿಧಿಯಿಂದ ಇಂತಹ ಸಾಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ₹1 ಲಕ್ಷ ಕೋಟಿ ಯೋಜನೆ ರೂಪಿಗೆ ರೂಪರೇಷೆ ತಯಾರಾಗಿದೆ. ಬ್ರಿಗೇಡ್, ಇರಾಖ್, শোभा, ಪ್ರೇಸ್ಟೀಜ್‌ನಂತಹ ಸಂಸ್ಥೆಗಳು ಬೆಂಗಳೂರಿಗೆ ಹೊಸ ರೂಪ ನೀಡಿವೆ” ಎಂದರು.