ಜಯಂತಿಗ್ರಾಮದ ಸರ್ಕಾರಿ ಫ್ರೌಡ ಶಾಲೆಗೆ, ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಉಚಿತವಾಗಿ ಬ್ಯಾಂಡ್ ಸೆಟ್ ವಿತರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಫ್ರೌಡ ಶಾಲೆಯಲ್ಲಿ ಹೊಸವರ್ಷದ ಮೊದಲ ದಿನದಂದು ವಿದ್ಯಾರ್ಥಿಗಳಿಗೆ ಮಾನವೀಕ ಮೌಲ್ಯಗಳು ಮತ್ತು ನೈತಿಕ ಶಿಕ್ಷಣದ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ನಾರಾಯಣಸ್ವಾಮಿ, 25 ಸಾವಿರ ರೂ. ಮೌಲ್ಯದ ಬ್ಯಾಂಡ್ ಸೆಟ್ ಕಿಟ್ ಕೊಡುಗೆಯಾಗಿ ವಿತರಿಸಿದರು.
ನಂತರ ಮಾತನಾಡಿದ ಅವರು. ಈ ಹಿಂದೆ ಶಾಲಾ ಕಾರ್ಯಕ್ರಮ ಒಂದರಲ್ಲಿ ದೈಹಿಕ ಶಿಕ್ಷಕಿ ಮಂಜುಳಾ ರವರು ಶಾಲೆಗೆ ಬ್ಯಾಂಡ್ ಸೆಟ್ ಕೊಡಿಸಬೇಕೆಂದು ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಲಿ ಎಂಬ ಆಶಯದಿಂದ ಬ್ಯಾಂಡ್ ಸೆಟ್ ವಿತರಿಸಿದ್ದೇನೆ ಎಂದು ತಿಳಿಸಿದರು. ಈ ಶಾಲೆಯ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲಿ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಈ ಶಾಲೆಗೆ ಪಕ್ಕದ ಹಳ್ಳಿಗಳಾದ ಗೊರಮಿಲ್ಲಹಳ್ಳಿ, ಕೋಟಹಳ್ಳಿ, ಬೈರಗಾನಹಳ್ಳಿ, ಮಲ್ಲಹಳ್ಳಿ, ಅಬ್ಲೂಡು, ದೂರದ ಹನುಮಂತ ಪುರ ಹಾಗು ಚಿಕ್ಕಬಳ್ಳಾಪುರ ತಾಲ್ಲೂಕಿನ ಬದನಗಾನಹಳ್ಳಿ ಇನ್ನಿತರ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಮಕ್ಕಳಿಗೆ ದಿನ ನಿತ್ಯ ಬಸ್ ಚಾರ್ಜ್ ಗಾಗಿ ಹಣ ಕೊಡುವುದು ಕೆಲ ಪೋಷಕರಿಗೆ ಆರ್ಥಿಕ ವಾಗಿ ಕಷ್ಟವಾಗಬಹುದು ಹಾಗು 6 ಕೀಮಿ ದೂರದ ಬದನಗಾನಹಳ್ಳಿ ಗೆ ಯಾವುದೇ ಬಸ್ ವ್ಯವಸ್ಥೆ ಕೂಡಾ ಇಲ್ಲದಿರುವುದು, ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕಷ್ಟ ಸಾದ್ಯವಾಗಿದೆ. ಸರ್ಕಾರವು ಕಳೆದ ಮೂರು ವರ್ಷಗಳಿಂದ ತಾತ್ಕಾಲಿಕವಾಗಿ ತಡೆ ಹಿಡಿದಿರುವ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆಯನ್ನು ಪುನರಾರಂಭಿಸಬೇಕು ಎಂದು ಸರ್ಕಾರವನ್ನು ಮನವಿ ಮಾಡಿಕೊಂಡರು.
ನಂತರ ಮುಖ್ಯ ಶಿಕ್ಷಕ ಸುರೇಶ್, ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದರು. ತಾಲ್ಲೂಕಿನ ಇತರೆ ಶಾಲೆಗಳಿಗಿಂತ ನಮ್ಮ ಶಾಲೆಯ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ಮುಂದಿದ್ದು, ಶಾಲೆಯ ಬೆಳವಣಿಗೆಗೆ ಪೂರಕವಾದ ವಾತವರಣ ನಿರ್ಮಿಸುವಲ್ಲಿ ಹಾಗೂ ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಗೆ ಪೂರಕವಾದ ವಾತವರಣ ನಿರ್ಮಿಸುವಲ್ಲಿ ಇಂಥಹ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಅಗತ್ಯ ಇದೆ ಎಂದು ತಿಳಿಸಿದರು. ನಾರಾಯಣಸ್ವಾಮಿಯ ಹಾಗೆ ಮತ್ತಷ್ಟು ಜನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ರವಿಚಂದ್ರ ಮೌಳಿ, ದೈಹಿಕ ಶಿಕ್ಷಕಿ ಸಿಕೆ.ಮಂಜುಳಾ, ವೇಣು, ಶೈಲಾ, ಗಾಯಿತ್ರಿ, ಯಶೋಧ ಸೇರಿದಂತೆ ಹಲವರು ಉಪಸ್ಥಿತರಿದ್ದರು…