ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಶ್ರೇಯೋಭಿವೃದ್ಧಿಗೆ ಮೀಸಲಾಗಿದ್ದ ₹39,000 ಕೋಟಿ ಅನುದಾನವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರ ವಿರುದ್ಧ ಹರಿಹಾಯ್ದಿರುವ ಆಕ್ರೋಶ ತೀವ್ರಗೊಂಡಿದೆ.
ಆತ್ಮಘೋಷಿತ ತತ್ವಜ್ಞಾನಿ ಮಹದೇವಪ್ಪ ಅವರು ತಾವು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳ ಅನುಯಾಯಿಗಳೆಂದು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಬೊಗಳುತ್ತಿದ್ದರೂ, ಅವರ ಕಾರ್ಯಪದ್ದತಿ ಮಾತ್ರ ಆ ತತ್ವಗಳ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪರಿಶಿಷ್ಟರ ಹಕ್ಕುಗಳಿಗೆ ಮೀಸಲಾಗಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿರುವುದು ಅವರ ನೈತಿಕ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ.
ತತ್ವದ ಮಾತು, ತಂತ್ರದ ಕೆಲಸ!
ಮಂತ್ರಿಗಿರಿ ಎಂದರೆ ಜವಾಬ್ದಾರಿಯ ಗುರುತು. ಆದರೆ, ಅದನ್ನು ಲಾಭದ ಸಾಧನವಾಗಿ ಬಳಸಿಕೊಂಡು ಪರಿಶಿಷ್ಟ ಜನಾಂಗದ ಹಕ್ಕುಗಳನ್ನು ಹರಣ ಮಾಡುತ್ತಿರುವುದು ದುರದೃಷ್ಟಕರ. ಒಂದೆಡೆ, ಸಮಾನತೆಯ ಸಂದೇಶ ಸಾರುವ ಮಂತ್ರಿಗಳು, ಮತ್ತೊಂದೆಡೆ, ಆ ಸಮಾನತೆಯನ್ನೇ ಹಿಂಸಿಸುತ್ತಿರುವುದು ಸಾಮಾಜಿಕ ನ್ಯಾಯದ ಅಪಹಾಸ್ಯವಾಗಿದೆ.
SCSP/TSP ಅನುದಾನದ ದುರುಪಯೋಗ
ಕಳೆದ ಮೂರು ಬಜೆಟ್‌ಗಳಲ್ಲಿ ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಮೀಸಲಾಗಿದ್ದ ₹39,000 ಕೋಟಿ ಅನುದಾನವನ್ನು ವಿವಿಧ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂಬ ಗಂಭೀರ ಆರೋಪ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಮುಡಿಪು ಮಾಡಿದ ಹಣವನ್ನು, ಜನಪ್ರಿಯ ಯೋಜನೆಗಳಿಗಾಗಿ ಬಳಸಿರುವುದು, ಅವರ ಹಕ್ಕುಗಳನ್ನೇ ಲೂಟಿ ಮಾಡಿದಂತೆ ಎಂದು ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.
ಮಂತ್ರಿಗಿರಿ ಪರಿಗಣನೆಗೆ ಶಹಬ್ಬಾಸ್ ಗಿರಿ!
ಪರಿಶಿಷ್ಟರ ಹಿತವನ್ನು ತೊರೆದರೂ, ತಮ್ಮ ಹುದ್ದೆಯನ್ನು ಉಳಿಸಿಕೊಂಡಿರುವ ಮಹದೇವಪ್ಪ ಅವರಿಗೆ ಸರ್ಕಾರದೊಳಗಿನ ಕೆಲವು ಶಕ್ತಿಗಳು ಶಹಬ್ಬಾಸ್ ಹೇಳುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಷಯದ ಕುರಿತು ಅವರಿಂದ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರೂ, ಅದನ್ನು ಎಡವಿಹೋಗಲು ಅವರು ತಂತ್ರ ಜಾಲ ಬಿಚ್ಚಿದ್ದಾರೆ.
ನಕಲಿ ತತ್ವಜ್ಞಾನಿಗೆ ಧಿಕ್ಕಾರ!
ತಾವು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಅನುಸರಿಸುತ್ತೇವೆ ಎಂದು ಹೇಳಿಕೊಳ್ಳುವವರೇ ಅವರ ಹಕ್ಕುಗಳನ್ನೇ ನಿಗ್ರಹಿಸುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ. ಈ ತಾರತಮ್ಯ ರಾಜಕಾರಣದ ವಿರುದ್ಧ ಸಾಮಾಜಿಕ ನ್ಯಾಯಪರ ಸಂಘಟನೆಗಳು ಮತ್ತು ಪರಿಶಿಷ್ಟ ಸಮುದಾಯದವರು ಧಿಕ್ಕಾರ ಕೂಗುತ್ತಿದ್ದಾರೆ.
ನೀತಿ, ಧರ್ಮ ಮತ್ತು ನ್ಯಾಯದ ಹೆಸರಿನಲ್ಲಿ ನಡೆದ ಈ ಅನ್ಯಾಯದ ವಿರುದ್ಧ ಸದೃಢ ಹೋರಾಟ ಅಗತ್ಯವಾಗಿದೆ ಎಂಬುದು ಜನಸಾಮಾನ್ಯರ ಒತ್ತಾಯವಾಗಿದೆ.