ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಹಮ್ಮದ್ ಇಸಾಕ್, ತಮ್ಮ 38ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ತೆರಳಿ, ಆಶ್ರಮದ ಜೀವಿಗಳ ಹಸಿವು ನೀಗಿಸುವ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆಹಾರ ವಸ್ತುಗಳನ್ನು, ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿಕೊಂಡರು.
ಈ ಸಮಯದಲ್ಲಿ ಆಶ್ರಮದ ವತಿಯಿಂದ ಪಿಎಸ್ಐ ಮಹಮ್ಮದ್ ಇಸಾಕ್ ಅವರನ್ನು ಸನ್ಮಾನಿಸಿ ಗೌರವಿಸಿ, ಮಹಾತ್ಮ ಗಾಂಧಿಯ ಭಾವಚಿತ್ರವನ್ನು ವಿತರಿಸುವ ಮೂಲಕ ಜನ್ಮ ದಿನದ ಶುಭ ಹಾರೈಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ. ಎಸ್..ಐ. ಮಹಮ್ಮದ್ ಇಸಾಕ್ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಾಗಿ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಆಶ್ರಮಗಳಿಗೆ ಕೈಯಿಂದಾದಂತಹ ಸಹಾಯ ಮಾಡುವ ಮೂಲಕ ಸಹಕರಿಸಬೇಕು. ನಮ್ಮ ಪೊಲೀಸ್ ಇಲಾಖೆಯು ಕಾರುಣ್ಯಾಶ್ರಮದ ಸೇವೆಯ ಜೊತೆಗಿರುತ್ತದೆ. ಅದೆಲ್ಲೋ ಹುಟ್ಟಿ ಎಲ್ಲೋ ಬೆಳೆದು ಜೀವನದ ಕೊನೆಯ ದಿನಗಳ ಬದುಕು ಕಟ್ಟಿಕೊಂಡಿರುವ ಇಲ್ಲಿರುವ ಎಲ್ಲಾ ಹಿರಿಯರು ಹಾಗೂ ವಯಸ್ಕರ ಬುದ್ಧಿಮಾಂದ್ಯರು ದೇವರ ಸ್ವರೂಪಿಗಳು ನಾವು ಎಷ್ಟೇ ಸಹಾಯ ಮಾಡಿದರು ಈ ಕಾರುಣ್ಯ ಆಶ್ರಮದ ಸೇವೆಯ ಮುಂದೆ ಸಣ್ಣದಾಗಿ ಕಾಣಿಸುತ್ತದೆ. ಬಸವಣ್ಣನವರ ವಚನ ಸಂದೇಶದಂತೆ ಕಾಯಕವೇ ಕೈಲಾಸ ಎನ್ನುವ ರೀತಿ ಈ ಆಶ್ರಮವನ್ನು ಚನ್ನಬಸಯ್ಯ ಸ್ವಾಮಿ ಅಶೋಕ ನಲ್ಲ ಮತ್ತು ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹರೇಟನೂರು ಎನ್ನುವ ಚಿಕ್ಕ ಗ್ರಾಮದ ಅರ್ಚಕ ಕುಟುಂಬ ನಾಡಿಗೆ ಕರುಣೆಯ ಕಾರುಣ್ಯವನ್ನು ತೋರಿಸಿಕೊಟ್ಟಿದೆ. ನಿರಂತರವಾಗಿ ನಮ್ಮ ಇಲಾಖೆ ಹಾಗೂ ವೈಯಕ್ತಿಕವಾಗಿ ನಮ್ಮ ಈ ಕಾರುಣ್ಯಾಶ್ರಮಕ್ಕೆ ಸಹಾಯ ಸಹಕಾರ ಮಾಡುತ್ತೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಈ ಸಮಯದಲ್ಲಿ ಪೊಲೀಸ ಅಧಿಕಾರಿಗಳಾದ ಎಎಸ್ ಐ ಗೋಪಾಲ, ಚನ್ನಬಸವ ಬಹುತರ ಸುಕಾಲಪೇಟೆ, ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ, ಅಶೋಕ ನಲ್ಲ, ಸುಜಾತ ಹಿರೇಮಠ ಹಾಗೂ ಸಿಬ್ಬಂದಿಗಳಾದ ಶರಣಮ್ಮ, ಸಿದ್ದಯ್ಯ ಸ್ವಾಮಿ, ಮರಿಯಪ್ಪ ಅನೇಕರು ಉಪಸ್ಥಿತರಿದ್ದರು.