ಹೊಸದಿಲ್ಲಿ: ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಸದ್ಯದಲ್ಲೇ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪ್ರಸ್ತುತ, ಸಿಗರೇಟ್‌ಗಳಿಗೆ ಒಟ್ಟು ಶೇ. 53ರಷ್ಟು ತೆರಿಗೆ ವಿಧಿಸಲಾಗಿದೆ. ಇದರಲ್ಲಿ ಜಿಎಸ್ಟಿ, ಕಾಂಪೆನ್ಸೇಶನ್ ಸೆಸ್ ಮತ್ತು ಎಕ್ಸೈಸ್ ಡ್ಯೂಟಿ ಸೇರಿವೆ. ಇದೀಗ, 28% ಆಗಿರುವ ಜಿಎಸ್ಟಿ ದರವನ್ನು 40% ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸುತ್ತಿವೆ.
ಸಮಾಜದಲ್ಲಿ ಧೂಮಪಾನವನ್ನು ನಿಯಂತ್ರಿಸುವ ಹಾಗೂ ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತೆರಿಗೆ ಹೆಚ್ಚಾದರೆ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಗಣಿ ಪ್ರಮಾಣದಲ್ಲಿ ಏರಬಹುದು, ಇದರಿಂದಾಗಿ ಜನರು ಧೂಮಪಾನವನ್ನು ಕಡಿಮೆ ಮಾಡುವತ್ತ ಮುಖ ಮಾಡುವ ನಿರೀಕ್ಷೆಯಿದೆ.
ಈ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲವಾದರೂ, ಶೀಘ್ರದಲ್ಲೇ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟತೆ ಬರಬಹುದೆಂದು ಅಂದಾಜಿಸಲಾಗಿದೆ.












